WPL 2023 Points Table : ಭಾನುವಾರದ ಅಂತ್ಯಕ್ಕೆ ಅಂಕಪಟ್ಟಿ; ಅಗ್ರಸ್ಥಾನದಲ್ಲಿ ಮುಂಬೈ; ಆರ್‌ಸಿಬಿಗೆ ಎಷ್ಟನೇ ಸ್ಥಾನ?

ಶನಿವಾರ, ಮಾರ್ಚ್ 4ರಿಂದ ಆರಂಭವಾದ 2023ರ ಮಹಿಳಾ ಪ್ರೀಮಿಯರ್ ಲೀಗ್ (WPL)ನ ಎಲ್ಲಾ ಐದು ತಂಡಗಳು ಈಗಾಗಲೇ ಪಂದ್ಯಾವಳಿಯ ತಮ್ಮ ತಮ್ಮ ಪಂದ್ಯಗಳನ್ನು ಆಡಿವೆ. ಗುಜರಾತ್ ಜೈಂಟ್ಸ್ ಎರಡು ಪಂದ್ಯಗಳನ್ನು ಆಡಿದ್ದರೆ, ಉಳಿದ ತಂಡಗಳು ಒಂದೊಂದು ಪಂದ್ಯವನ್ನಾಡಿವೆ.
ಶನಿವಾರದಂದು ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ 143 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿತು.
ಇನ್ನು ಭಾನುವಾರದ ಡಬಲ್-ಹೆಡ್ಡರ್‌ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 60 ರನ್‌ಗಳಿಂದ ಮಣಿಸಿತು. ಈ ಮೂಲಕ ಅಮೂಲ್ಯ ಎರಡು ಅಂಕಗಳನ್ನು ಗಳಿಸಿತು.
ಭಾನುವಾರ ರಾತ್ರಿ ನಡೆದ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಜ್ ತಂಡ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಇನ್ನು ಪಂದ್ಯಾವಳಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಗುಜರಾತ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಸೋಮವಾರ, ಮಾರ್ಚ್ 5ರಂದು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಸೋತ ಆರ್‌ಸಿಬಿ ಮತ್ತು ಗೆದ್ದ ಮುಂಬೈ ಇಂಡಿಯನ್ಸ್ ನಡುವೆ ಸೆಣಸಾಟ ನಡೆಯಲಿದೆ. ಆರ್‌ಸಿಬಿ ತಂಡವನ್ನು ಸ್ಮೃತಿ ಮಂಧಾನ ಮುನ್ನಡೆಸಲಿದ್ದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನೇತೃತ್ ವಹಿಸಿದ್ದಾರೆ.
WPL 2023: ಭಾನುವಾರದ ಅಂತ್ಯಕ್ಕೆ ಅಂಕಪಟ್ಟಿ
1) ಮುಂಬೈ ಇಂಡಿಯನ್ಸ್ - 1 ಪಂದ್ಯ, 1 ಗೆಲುವು, 2 ಅಂಕ
2) ಡೆಲ್ಲಿ ಕ್ಯಾಪಿಟಲ್ಸ್ - 1 ಪಂದ್ಯ, 1 ಗೆಲುವು, 2 ಅಂಕ
3) ಯುಪಿ ವಾರಿಯರ್ಸ್ - 1 ಪಂದ್ಯ, 1 ಗೆಲುವು, 2 ಅಂಕ
4) ರಾಯಲ್ ಚಾಲೆಂಜರ್ಸ್ ಬೆಂಗಳೂರು - 1 ಪಂದ್ಯ, 1 ಸೋಲು, 0 ಅಂಕ
5) ಗುಜರಾತ್ ಜೈಂಟ್ಸ್ - 2 ಪಂದ್ಯ, 2 ಸೋಲು, 0 ಅಂಕ
ಪ್ರಥಮ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು ಮಾರ್ಚ್ 26ರಂದು ಫೈನಲ್ ಪಂದ್ಯವನ್ನು ಸೇರಿ 2 ಪ್ಲೇಆಫ್ ಪಂದ್ಯಗಳನ್ನು ಆಡಲು ನಿಗದಿಪಡಿಸಲಾಗಿದೆ. ಪ್ರತಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ.
ಮಹಿಳಾ ಪ್ರೀಮಿಯರ್ ಲೀಗ್ 2023ರ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್
ಮಹಿಳಾ ಪ್ರೀಮಿಯರ್ ಲೀಗ್ 2023ರ ಪಂದ್ಯಗಳು ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದರೆ, ಇನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications