WPL 2025: ಮಹಿಳಾ ಪ್ರೀಮಿಯರ್ ಲೀಗ್ ಇಂದು ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ vs ಟೈಟಾನ್ಸ್
ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದು ಬಿಟ್ಟಿದೆ. ಶುಕ್ರವಾರದಿಂದ ದೇಶದಲ್ಲಿ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ಗೆಲುವಿನ ಅಭಿಯಾನವನ್ನು ಆರಂಭಿಸುವ ಕನಸು ಕಾಣುತ್ತಿದೆ.
ವಡೋಧರಾದಲ್ಲಿ ನಡೆಯುವ ಈ ಪಂದ್ಯದಲ್ಲಿ ಆರ್‌ಸಿಬಿ ಪಂದ್ಯ ಗೆಲ್ಲುವ ಫೆವರೀಟ್. ಈ ಮೊದಲ ಉಭಯ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿ ಆಗಿದ್ದವು ಈ ವೇಳೆ ಆರ್‌ಸಿಬಿ ಮೂರು ಪಂದ್ಯಗಳನ್ನು ಗೆದ್ದು ಕೊಂಡಿದೆ. ಆರ್‌ಸಿಬಿ ಗುಜರಾತ್ ವಿರುದ್ಧ ಗರಿಷ್ಠ 206 ರನ್ ಸ್ಕೋರ್ ಮಾಡಿದ್ದರೆ, ಕನಿಷ್ಠ 170 ರನ್ ಸಿಡಿಸಿದೆ. ಇನ್ನು ಟೈಟಾನ್ಸ್ ಸಹ ಆರ್‌ಸಿಬಿ ವಿರುದ್ಧ 200 ರನ್‌ಗಳ ಗರಿಷ್ಠ ಸ್ಕೋರ್ ಮಾಡಿದ್ದು, 147 ರನ್ ಲೋ ಸ್ಕೋರ್ ಆಗಿದೆ.

ಸ್ಟಾರ್ ಆಟಗರರೇ ಬಲ
ಆರ್‌ಸಿಬಿ ತಂಡಕ್ಕೆ ಸ್ಟಾರ್ ಆಟಗಾರರ ಬಲವೇ ಹೆಚ್ಚಿದೆ. ಟಾಪ್ ಆರ್ಡರ್‌ನಲ್ಲಿ ಭಾರತೀಯ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಇಂಗ್ಲೆಂಡ್ ಡ್ಯಾನಿ ವ್ಯಾಟ್ ತಂಡಕ್ಕೆ ಆಧಾರವಾಗಬಲ್ಲ ಆಟಗಾರ್ತಿಯರು. ಇನ್ನು ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಆಲ್‌ರೌಂಡರ್ ಎಲ್ಲಿಸಾ ಪೆರ್ರಿ ತಂಡದ ಶಕ್ತಿ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಬೌಲಿಂಗ್ ಸಹ ಮಾಡಬಲ್ಲ ಕ್ಷಮತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಕೆಟ್ ಕೀಪರ್ ರಿಚಾ ಘೋಷ್ ಹಾಗೂ ರಾಘ್ವಿ ಬಿಸ್ಟ್ ತಮ್ಮ ನೈಜ್ಯ ಆಟವನ್ನು ಆಡಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಆರ್‌ಸಿಬಿ ಬೌಲಿಂಗ್ ವಿಭಾಗ ಸಹ ಬಲಾಢ್ಯವಾಗಿದೆ. ಕನಿಕಾ ಅಹುಜಾ, ರೇಣುಕಾ ಸಿಂಗ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಶ್ರೇಯಾಂಕಾ ಪಾಟೀಲ್ ಸಹ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಬಲ್ಲರು.

ಆರ್‌ಸಿಬಿ ಸಂಭಾವ್ಯ ತಂಡ: ಸ್ಮೃತಿ ಮಂಧನಾ (ನಾಯಕಿ), ಡ್ಯಾನಿ ವ್ಯಾಟ್, ಎಲ್ಲಿಸ್ ಪೆರ್ರಿ, ಎಸ್ ಮೇಘನಾ, ರಿಚಾ ಘೋಷ್ (ವಿಕೆಟ್ ಕೀಪರ್), ರಾಘ್ವಿ ಬಿಸ್ಟ್, ಶ್ರೇಯಾಂಕಾ ಪಾಟೀಲ್/ ಪ್ರೇಮಾ ರಾವತ್, ಜಾರ್ಜಿಯಾ ವೇರ್ಹ್ಯಾಮ್, ಕಿಮ್ ಗಾರ್ತ್, ಕನಿಕಾ ಅಹುಜಾ, ರೇಣುಕಾ ಸಿಂಗ್
ಸಂಘಟಿತ ಆಟ
ಗುಜರಾತ್ ಟೈಟಾನ್ಸ್ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಬೆತ್ ಮೂನಿ, ಲಾರಾ ವೊಲ್ವಾರ್ಡ್ಟ್, ಆಶ್ಲೀ ಗಾರ್ಡ್ನರ್, ಹರ್ಲೀನ್ ಡಿಯೋಲ್ ಬೌಲರ್‌ಗಳ ಸವಾಲನ್ನು ಮೀರಿ ನಿಂತು ರನ್ ಮಹಲ್ ಕಟ್ಟಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್ಸ್. ಇನ್ನು ಬೌಲಿಂಗ್ ಬಿಭಾಗದಲ್ಲಿ ತನುಜಾ ಕನ್ವರ್, ಆಶ್ಲೀ ಗಾರ್ಡ್ನರ್ ತಂಡ ಹಾಕಿಕೊಂಡ ಯೋಜನೆಯಂತೆ ದಾಳಿ ನಡೆಸಬಲ್ಲರು. ಈ ಎಲ್ಲ ಆಟಗಾರರು ಮಿಂಚಿ ಆಟವನ್ನು ಪ್ರದರ್ಶಿಸಿದರೆ ಗೆಲುವಿನ ಕನಸು ನನಸಾಗುತ್ತದೆ.
ಗುಜರಾತ್ ಸಂಭಾವ್ಯ ತಂಡ: ಬೆತ್ ಮೂನಿ, ಲಾರಾ ವೋಲ್ವಾರ್ಡ್, ಫೋಬೆ ಲಿಚ್ಫೀಲ್ಡ್, ಆಶ್ಲೀ ಗಾರ್ಡ್ನರ್ (ನಾಯಕಿ), ಹರ್ಲೀನ್ ಡಿಯೋಲ್, ದಯಾಳನ್ ಹೇಮಲತಾ, ಡಿಯಾಂಡ್ರಾ ಡಾಟಿನ್, ಸಿಮ್ರಾನ್ ಶೇಖ್, ತನುಜಾ ಕನ್ವರ್, ಸಯಾಲಿ ಸತ್ಘರೆ, ಸ್ನೇಹ ರಾಣಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications