WPL 2025 MI vs GG: ಅಂಕ ಪಟ್ಟಿಯಲ್ಲಿ ಬಡ್ತಿಗಾಗಿ ಮುಂಬೈ ಗುಜರಾತ್ ಫೈಟ್
ಮಹಿಳಾ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಸೋಮವಾರ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಈ ಟೂರ್ನಿಯ ಪ್ಲೇ ಆಫ್‌ಗೆ ಪ್ರವೇಶ ಪಡೆದಿವೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದಾರೆ, ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸನ್ನು ಉಭಯ ತಂಡಗಳು ಮಾಡಿಕೊಂಡಿವೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿವೆ. ಗುಜರಾತ್ ಜೈಂಟ್ಸ್ ಆಡಿದ 7 ಪಂದ್ಯಗಳಲ್ಲಿ 4 ಜಯ, 3 ಸೋಲನ್ನು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಆರು ಪಂದ್ಯದಲ್ಲಿ 4 ಜಯ ಸಾಧಿಸಿದ್ದು, 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮುಂಬೈ ತವರಿನಲ್ಲಿ ಪಂದ್ಯವನ್ನು ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ.

ಮುಂಬೈಗೆ ತವರಿನ ಬೆಂಬಲ
ಹರ್ಮನ್ ಪ್ರೀತ್ ಪಡೆ ಈಗಾಗಲೇ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಸಾಧನೆಯನ್ನು ಮಾಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಮತ್ತೊಂದು ದೊಡ್ಡ ಸಾಧನೆ ಮಾಡುವ ಕನಸು ಮುಂಬೈ ತಂಡದ್ದಾಗಿದೆ. ಸದ್ಯ ಮುಂಬೈ ತವರಿನಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ನ್ಯಾಟ್ ಸ್ಕೀವರ್ ಬ್ರಂಟ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುವ ಆಟಗಾರ್ತಿ. ಇವರು ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಹ್ಯಾಲಿ ಮ್ಯಾಥ್ಯೂಸ್ ಹಾಗೂ ಹರ್ಮನ್ ಪ್ರೀತ್ ಕೌರ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಉಳಿದ ಬ್ಯಾಟರ್‌ಗಳು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರೆ ಗೆಲುವಿನ ಕನಸು ನನಸಾಗುತ್ತದೆ.
WPL 2025 UP vs RCB: ಯುಪಿ ವಿರುದ್ಧ ಸೋತ ಆರ್‌ಸಿಬಿ: ಲೀಗ್ ಹಂತದಿಂದಲೇ ಹಾಲಿ ಚಾಂಪಿಯನ್ಸ್ ಹೊರಕ್ಕೆ
ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಅಮೆಲಿಯಾ ಕೆರ್ ಆನೆ ಬಲ ತುಂಬಿದ ಆಟಗಾರ್ತಿ. ಇವರು ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳಿಗೆ ಕಾಟ ನೀಡಬಲ್ಲರು. ಹ್ಯಾಲಿ ಮ್ಯಾಥ್ಯೂಸ್ ಸಹ ವಿಕೆಟ್ ಬೇಟೆ ನಡೆಸುವ ಆಟಗಾರ್ತಿ. ಇವರು ತಮ್ಮ ಶಿಸ್ತು ಬದ್ಧ ದಾಳಿಯಿಂದ ಹೆಸರುವಾಸಿ. ಉಳಿದಂತೆ ಸ್ಪಿನ್ ಬೌಲರ್‌ಗಳು ಮುಂಬೈ ಅಂಗಳದಲ್ಲಿ ಬಿಗುವಿನ ದಾಳಿ ನಡೆಸಿದ್ದಲ್ಲಿ ಗೆಲುವಿನ ಆಸೆ ಫಲಿಸುತ್ತದೆ.

ವಿದೇಶಿ ಆಟಗಾರರೇ ಆಕರ್ಷಣೆ
ಗುಜರಾತ್ ತಂಡ ಈ ಬಾರಿ ಸ್ಥಿರ ಪ್ರದರ್ಶನ ನೀಡುತ್ತಿರುವುದರ ಹಿಂದೆ ಅವರ ನಾಯಕಿ ಆಶ್ಲೀಗ್ ಗಾರ್ಡ್ನರ್ ಪಾತ್ರ ಬಹಳ ಮುಖ್ಯ. ಇವರು ನಾಯಕತ್ವದ ಜವಾಬ್ದಾರಿ ಸಿಕ್ಕಾಗಿನಿಂದಲೂ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಇನಿಂಗ್ಸ್‌ಗಳ ಮೂಲಕ ಎದುರಾಳಿಗಳನ್ನು ಕಾಡುವ ಗಾರ್ಡ್ನರ್, ಬೌಲಿಂಗ್‌ನಲ್ಲೂ ವಿಕೆಟ್ ಬೇಟೆ ನಡೆಸುವ ಆಟಗಾರ್ತಿ, ಇವರಿಗೆ ಡಿಯಾಂಡ್ರಾ ಡಾಟಿನ್ ಉತ್ತಮ ಸಾಥ್‌ನ್ನು ಎರಡೂ ವಿಭಾಗದಲ್ಲಿ ನೀಡುತ್ತಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಬೆತ್ ಮೂನಿ ಭರವಸೆ ಮೂಡಿಸಿದ್ದು, ಮತ್ತೊಮ್ಮೆ ಸ್ಥಿರವಾದ ಇನಿಂಗ್ಸ್ ಕಟ್ಟುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ. ಈ ಸ್ಟಾರ್ ಆಟಗಾರ್ತಿಯರಿಗೆ ಉಳಿದ ಆಟಗಾರರು ಉತ್ತಮ ಸಾಥ್ ನೀಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications