WPL 2025: ಶುಭಾರಂಭದ ನಿರೀಕ್ಷೆಯಲ್ಲಿ ಮುಂಬೈ, ಡೆಲ್ಲಿ
ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಜಯ ಸಾಧಿಸಿದೆ. ಶನಿವಾರ ಟೂರ್ನಿಯ ಎರಡನೇ ಪಂದ್ಯ ನಡೆಯಲಿದೆ. ಈ ಪಂದ್ಯ ವಡೋಧರಾದಲ್ಲಿ ನಡೆಯಲಿದ್ದು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಲಿದೆ. ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಶುಭಾರಂಭ ಮಾಡುವ ಕನಸಿನಲ್ಲಿವೆ.
ದೆಹಲಿ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದೆ. ತಂಡದಲ್ಲಿ ಸ್ಟಾರ್ ಆಟಗರ್ತಿಯರ ಬಳಗವೇ ಇದ್ದು, ಮುಂಬೈ ತಂಡವನ್ನು ಕಟ್ಟಿ ಹಾಕಲು ಸಜ್ಜಾಗಿದೆ. ಇನ್ನು ಮುಂಬೈ ಸಹ ಘಟಾನುಘಟಿ ಆಟಗರರನ್ನು ಹೊಂದಿದೆ.

ಸ್ಟಾರ್ ಆಟಗಾರ್ತಿಯರೇ ಬಲ
ಡೆಲ್ಲಿ ತಂಡದಲ್ಲಿ ಸ್ಟಾರ್ ಆಟಗರ್ತಿಯರು ಇದ್ದಾರೆ. ಇವರು ಈ ತಂಡದ ಆಸ್ತಿ. ಇವರನ್ನು ಕಟ್ಟಿ ಹಾಕುವುದು ಅಷ್ಟು ಸಲುಭದ ಮಾತಲ್ಲ. ಈ ಆಟಗಾರ್ತಿಯರು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆಸೀಸ್ ಪರ ತಮ್ಮ ಅಮೋಘ ಆಟದ ನೆರವಿನಿಂದ ಆರ್ಭಟಿಸಿರುವ ಮೆಗ್ ಲ್ಯಾನಿಂಗ್ ಈ ತಂಡದ ಬ್ಯಾಟಿಂಗ್‌ಗೆ ಆಧಾರ. ಉಳಿದಂತೆ ಟಾಪ್ ಆರ್ಡರ್ ಬ್ಯಾಟರ್‌ಗಳು ಹಾಗೂ ಮಿಡ್ಲ್ ಆರ್ಡರ್ ಬ್ಯಾಟರ್‌ಗಳು ತಂಡದ ಪರ ರನ್‌ಗಳನ್ನು ಕಲೆ ಹಾಕಿ ಮಿಂಚಬಲ್ಲರು.
ದೆಹಲಿ ಪರ ರನ್ ಸಾಧಕರು
- ಮೆಗ್ ಲ್ಯಾನಿಂಗ್, 18 ಪಂದ್ಯ, 676 ರನ್
- ಶಫಾಲಿ ವರ್ಮಾ, 18 ಪಂದ್ಯ, 561 ರನ್
- ಆಲಿಸ್ ಕ್ಯಾಪ್ಸೆ, 17 ಪಂದ್ಯ, 389 ರನ್

ಡೆಲ್ಲಿ ಬ್ಯಾಟಿಂಗ್‌ನ ಹಾಗೆ ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿದೆ. ಈ ವೇಳೆ ಭಾರತೀಯ ಆಟಗಾರರು ಹಾಗೂ ವಿದೇಶಿ ಆಟಗಾರರು ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಈ ವಿದೇಶಿ ಬೌಲರ್‌ಗಳು ಸಹ ಶಿಸ್ತು ಬದ್ಧ ದಾಳಿ ಸಂಘಟಿಸುವ ವಿಶ್ವಾಸ ಹೊಂದಿದ್ದಾರೆ. ಜೆಸ್ ಜೊನಾಸೆನ್ ಹಾಗೂ ಮರಿಜಾನ್ನೆ ಕಪ್ ಈ ಹಿಂದೆ ಎದುರಾಳಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ್ದರು.
- ಜೆಸ್ ಜೊನಾಸೆನ್, 16 ಪಂದ್ಯ, 20 ವಿಕೆಟ್,
- ಮರಿಜಾನ್ನೆ ಕಪ್, 16 ಪಂದ್ಯ, 20 ವಿಕೆಟ್
- ಶಿಖಾ ಪಾಂಡ್ಯೆ, 18 ಪಂದ್ಯ, 19 ವಿಕೆಟ್,
WPL 2025: ಮೊದಲ ಪಂದ್ಯದಲ್ಲೇ ಸ್ಮೃತಿ ಪಡೆ ಇತಿಹಾಸ; ಆರ್‌ಸಿಬಿಗೆ ಜಯ 'ಘೋಷ'
ದೆಹಲಿ ಕ್ಯಾಪಿಟಲ್ಸ್: ಆಲಿಸ್ ಕ್ಯಾಪ್ಸೆ, ಮೆಗ್ ಲ್ಯಾನಿಂಗ್, ಸಾರಾ ಬ್ರೈಸ್, ಅನ್ನಾಬೆಲ್ ಸದರ್ಲ್ಯಾಂಡ್, ಮಿನ್ನು ಮಣಿ, ಶಫಾಲಿ ವರ್ಮಾ, ಅರುಂಧತಿ ರೆಡ್ಡಿ, ಎನ್ ಚರಣಿ, ಶಿಖಾ ಪಾಂಡೆ, ಜೆಮಿಮಾ ರೋಡ್ರಿಗಸ್, ನಂದಿನಿ ಕಶ್ಯಪ್, ಸ್ನೇಹಾ ದೀಪ್ತಿ, ಜೆಸ್ ಜೊನಾಸೆನ್, ನಿಕಿ ಪ್ರಸಾದ್, ತಾನಿಯಾ ಭಾಟಿಯಾ, ರಾಹು ಯಾನೆ ಭಾಟಿಯಾ, ಮರಿಧಾ ಭಾಟಿಯಾ, ಮರಿಜಾನ್ನೆ ಕಪ್, ರಾಧಾ ಯಾದವ್, ಟೈಟಾಸ್ ಸಾಧು
ಅನುಭವಿಗಳೇ ಆಧಾರ
ಮುಂಬೈ ಇಂಡಿಯನ್ಸ್ ಈಗಾಗಲೇ ಒಂದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ತಂಡದ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದೆ. ಈ ತಂಡದಲ್ಲಿರುವ ಅನುಭವಿ ಆಟಗಾರರೇ ತಂಡದ ಬಲ. ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಕಿವರ್-ಬ್ರಂಟ್ ಅವರಂತಹ ಆಟಗಾರರು ಎದುರಾಳಿ ಬೌಲರ್‌ಗಳ ಲೈನ್ ಹಾಗೂ ಲೆಂಥ್ ಹಾಳು ಮಾಡಬಲ್ಲರು.
- ಹರ್ಮನ್ ಪ್ರೀತ್ ಕೌರ್, 17 ಪಂದ್ಯ, 549 ರನ್
- ಸ್ಕಿವರ್-ಬ್ರಂಟ್, 19 ಪಂದ್ಯ, 504 ರನ್
- ಹೇಲಿ ಮ್ಯಾಥ್ಯೂಸ್, 19 ಪಂದ್ಯ, 451 ರನ್
ಬೌಲಿಂಗ್ ವಿಭಾಗದಲ್ಲೂ ಈ ತಂಡ ಹಲವು ಸ್ಟಾರ್ ಆಟಗಾರ್ತಿಯರನ್ನು ಹೊಂದಿದೆ. ಈ ವೇಳೆ ತಂಡದ ಪರ ಅನುಭವಿ ಆಟಗಾರ್ತಿ ಸೈಕಾ ಇಶಾಕ್ ಅವರು ವಿಕೆಟ್ ಬೇಟೆ ನಡೆಸಿ ಎದುರಾಳಿಗಳಿಗೆ ಕಾಡಬಲ್ಲರು. ಇವರಿಗೆ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ ಉತ್ತಮ ಸಾಥ್ ನೀಡಲಿದ್ದಾರೆ. ತಂಡದ ಬ್ಯಾಟಿಂಗ್ ಲೈನ್‌ಅಪ್‌ನಂತೆ ಮುಂಬೈ ತಂಡದ ಬೌಲಿಂಗ್ ಲೈನ್ ಅಪ್ ಸಹ ಬಲಾಢ್ಯವಾಗಿದೆ.
- ಸೈಕಾ ಇಶಾಕ್, 19 ಪಂದ್ಯ, 24 ವಿಕೆಟ್
- ಹೇಲಿ ಮ್ಯಾಥ್ಯೂಸ್, 19 ಪಂದ್ಯ, 23 ವಿಕೆಟ್
- ಅಮೆಲಿಯಾ ಕೆರ್, 19 ಪಂದ್ಯ, 22 ವಿಕೆಟ್
ಮುಂಬೈ ಇಂಡಿಯನ್ಸ್: ಅಕ್ಷಿತಾ ಮಹೇಶ್ವರಿ, ಹರ್ಮನ್‌ಪ್ರೀತ್ ಕೌರ್, ಪೂಜಾ ವಸ್ತ್ರಾಕರ್, ಅಮನ್‌ದೀಪ್ ಕೌರ್, ಹೇಲಿ ಮ್ಯಾಥ್ಯೂಸ್, ಸೈಕಾ ಇಶಾಕ್, ಅಮನ್‌ಜೋತ್ ಕೌರ್, ಜಿಂತಿಮಣಿ ಕಲಿತಾ, ಸಜೀವನ್ ಸಜಾನಾ, ಅಮೆಲಿಯಾ ಕೆರ್, ಕೀರ್ತನಾ ಬಾಲಕೃಷ್ಣನ್, ಸಂಸ್ಕೃತಿ ಗುಪ್ತಾ, ಕ್ಲೋಯ್ ಕಮಾಲಿಮ್, ನಾದಿನೆ ಟ್ರಯೋನ್, ನಾದಿನೆ, ಶಾಬ್ ಟ್ರಯೋನ್. ಸ್ಕಿವರ್-ಬ್ರಂಟ್, ಯಾಸ್ತಿಕಾ ಭಾಟಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications