WPL Auction 2023: ಈ ಆಟಗಾರ್ತಿ ಅತ್ಯಂತ ದುಬಾರಿ ಖರೀದಿಯಾಗಲಿದ್ದಾರೆ; ಆಕಾಶ್ ಚೋಪ್ರಾ ಭವಿಷ್ಯ

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜು ಪ್ರಕ್ರಿಯೆ ಇಂದು (ಸೋಮವಾರ, ಫೆಬ್ರವರಿ 13) ಮಧ್ಯಾಹ್ನ 2:30ಕ್ಕೆ ಮುಂಬೈನಲ್ಲಿ ನಡೆಯಲಿದ್ದು, ಒಟ್ಟು 409 ಭಾರತ ಹಾಗೂ ವಿದೇಶಿ ಆಟಗಾರ್ತಿಯರ ಹೆಸರು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಐದು ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, 2023ರ ಮಹಿಳಾ ಐಪಿಎಲ್‌ಗಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಅಲಿಸ್ಸಾ ಹೀಲಿ ಮತ್ತು ಮರಿಜಾನ್ನೆ ಸೇರಿದಂತೆ ಹಲವರು ದೊಡ್ಡ ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆಯಿದೆ.
ಇದೇ ವೇಳೆ, ಸೋಮವಾರ, ಫೆಬ್ರವರಿ 13ರಂದು ನಡೆಯುವ ಮಹಿಳಾ ಐಪಿಎಲ್ ಹರಾಜಿನಲ್ಲಿ ಸ್ಮೃತಿ ಮಂಧಾನ ಅವರಿಗಾಗಿ ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡಲಿದೆ ಮತ್ತು ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ್ತಿಯಾಗುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಹೇಳಿದರು.
ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 409 ಆಟಗಾರ್ತಿಯರ ಪೈಕಿ 246 ಭಾರತೀಯರು ಮತ್ತು 163 ವಿದೇಶಿ ಆಟಗಾರ್ತಿಯರು ಸೇರಿದ್ದಾರೆ. 5 ತಂಡಗಳು ಒಟ್ಟು 90 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಾಗಿದ್ದು, ಅವುಗಳಲ್ಲಿ 30 ವಿದೇಶಿ ಮೀಸಲು ಸ್ಲಾಟ್‌ಗಳಾಗಿವೆ.

ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಸೇರಿದಂತೆ ಒಟ್ಟು 24 ಆಟಗಾರ್ತಿಯರು 50 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ .
ಭಾರತ ಮಹಿಳಾ ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ ಮತ್ತು ಬಿಗ್ ಬ್ಯಾಷ್ ಲೀಗ್ ಮತ್ತು ವುಮೆನ್ಸ್ ಹಂಡ್ರೆಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಭಾರತದ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿಯೂ ಟ್ರೇಲ್‌ಬ್ಲೇಜರ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
"ನನ್ನ ಅಭಿಪ್ರಾಯದ ಪ್ರಕಾರ, ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿಯಾಗಲಿದ್ದಾರೆ. 2ನೇ ದುಬಾರಿ ಆಟಗಾರ್ತಿಯಾಗಿ ಹರ್ಮನ್‌ಪ್ರೀತ್ ಕೌರ್ ಹರಾಜಾಗಲಿದ್ದರೆ, ದೀಪ್ತಿ ಶರ್ಮಾ 3ನೇ ಸ್ಥಾನದಲ್ಲಿ ದುಬಾರಿ ಅಟಗಾರ್ತಿಯಾಗಲಿದ್ದಾರೆ".

"4ನೇ ದುಬಾರಿ ಆಟಗಾರ್ತಿಯಾಗುವ ಎಲ್ಲಿಸ್ ಪೆರ್ರಿ ಒಂದು ತಂಡಕ್ಕೆ ನಾಯಕಿಯಾಗುವುದನ್ನು ಎದುರು ನೋಡುತ್ತಿದ್ದೇನೆ. 5ನೇ ದುಬಾರಿಯಾಗಿ ಆಶ್ಲೀಗ್ ಗಾರ್ಡ್ನರ್, ಮೆಗ್ ಲ್ಯಾನಿಂಗ್ ಆಗಿರುತ್ತಾರೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದರು.
2023ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಭಾರತೀಯ ಆಟಗಾರ್ತಿಯರು ಹೆಚ್ಚು ಮೊತ್ತ ಗಳಿಸಲಿದ್ದರೆ, ಆಸ್ಟ್ರೇಲಿಯಾದ ಆಟಗಾರ್ತಿಯರು ನಿಕಟವಾಗಿ ಮೊತ್ತ ಗಳಿಸಲಿದ್ದಾರೆ. ಆಸೀಸ್‌ನ ಎಲ್ಲೆಸ್ ಪೆರ್ರಿ, ಅಲಿಸ್ಸಾ ಹೀಲಿ, ಆಶ್ ಗಾರ್ಡ್ನರ್, ಮೆಗ್ ಲ್ಯಾನಿಂಗ್, ಬೆತ್ ಮೂನಿ ಮುಂತಾದವರು ಎಲ್ಲಾ 5 ಐಪಿಎಲ್ ತಂಡಗಳ ಯೋಚನೆಯಲ್ಲಿ ಇರಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.
2023ರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಮಾರ್ಚ್ 3ರಿಂದ 26ರವರೆಗೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications