For Quick Alerts
ALLOW NOTIFICATIONS  
For Daily Alerts
 

WPL: ದೀಪಾವಳಿ ವೇಳೆಗೆ ಮುಂದಿನ ಮಹಿಳಾ ಪ್ರೀಮಿಯರ್ ಲೀಗ್; ಜಯ್ ಶಾ ಸುಳಿವು

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್) ಪಂದ್ಯಾವಳಿ ಮುಗಿದು ಕೇವಲ 20 ದಿನಗಳಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಉದ್ಘಾಟನಾ ಟ್ರೋಫಿಯನ್ನು ಗೆದ್ದುಕೊಂಡಿದೆ.

ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಮುಂದಿನ ಆವೃತ್ತಿಯನ್ನು ತವರಿನ ಮತ್ತು ಎದುರಾಳಿ ಮೈದಾನದಲ್ಲಿ ಆಡುವ ಸ್ವರೂಪವನ್ನು ಖಚಿತಪಡಿಸಿದ್ದು, ಇದೇ ವೇಳೆ ಡಬ್ಲ್ಯುಪಿಎಲ್ ಪಂದ್ಯಾವಳಿಯನ್ನು 2023ರ ದೀಪಾವಳಿ ಹಬ್ಬದ ವೇಳೆಗೆ ನಡೆಸಲಾಗುವುದು ಎಂದು ಬಹಿರಂಗಪಡಿಸಿದ್ದಾರೆ.

WPL: Next Womens Premier League Likely To Start In Diwali Says Jay Shah

ಈ ಮಹಿಳಾ ಪ್ರೀಮಿಯರ್ ಲೀಗ್‌ 2023ರ 2ನೇ ಋತು ಆಗಿರುವುದಿಲ್ಲ. ಆದರೆ ಮುಂದಿನ ಆವೃತ್ತಿಯಾಗಿ ಬೇರೆ ಸಮಯ ವಿಂಡೋದಲ್ಲಿ ಆಡಲಾಗುವುದು ಎಂದು ಜಯ್ ಶಾ ತಿಳಿಸಿದ್ದಾರೆ.

2023ರ ನವೆಂಬರ್ 12ರಂದು ಭಾರತದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಮತ್ತು ಭಾರತ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಐಸಿಸಿ ಏಕದಿನ ವಿಶ್ವಕಪ್ 2023 ಅನ್ನು ಆಯೋಜಿಸುತ್ತಿದೆ. ಆದ್ದರಿಂದ, ದೀಪಾವಳಿ ನಂತರ ಮಹಿಳಾ ಪ್ರೀಮಿಯರ್ ಲೀಗ್‌ನ ಮುಂದಿನ ಆವೃತ್ತಿಗೆ ಮೀಸಲಾದ ವೇಳಾಪಟ್ಟಿಯನ್ನು ರಚಿಸುವ ಅವಕಾಶವಿದೆ.

"ನಾವು ಮಹಿಳಾ ಪ್ರೀಮಿಯರ್ ಲೀಗ್‌ ಅನ್ನು ತವರಿನ ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪದಲ್ಲಿ, ದೀಪಾವಳಿ ವೇಳೆಗೆ ನಿಗದಿಪಡಿಸುವ ಸಾಧ್ಯತೆಯನ್ನು ಪರಿಗಣಿಸುತ್ತಿದ್ದೇವೆ. ವರ್ಷದಲ್ಲಿ ಎರಡು ಋತು ಆಗಿರುವುದಿಲ್ಲ. ಆದರೆ ವಿಭಿನ್ನ ಸಮಯದ ವೇಳಾಪಟ್ಟಿಯಾಗಿದೆ," ಎಂದು ಏಪ್ರಿಲ್ 14ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಜಯ್ ಶಾ ಹೇಳಿದರು.

WPL: Next Womens Premier League Likely To Start In Diwali Says Jay Shah

ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯು ಐದು ತಂಡಗಳ ನಡುವೆ 22 ಪಂದ್ಯಗಳಲ್ಲಿ ಮಾರ್ಚ್ 4ರಿಂದ 26ರವರೆಗೆ ಕೇವಲ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಎರಡು ಮೈದಾನದಲ್ಲಿ ಆಡಿಸಲಾಯಿತು.

ಪುರುಷರ ಐಪಿಎಲ್ ಪಂದ್ಯಾವಳಿಯಲ್ಲಿ ತವರು ಮತ್ತು ಎದುರಾಳಿ ಮೈದಾನದಲ್ಲಿ ಆಡುವ ಸ್ವರೂಪಕ್ಕೆ ಮರಳುವುದರೊಂದಿಗೆ, ಮಹಿಳಾ ಕ್ರಿಕೆಟ್ ಅನ್ನು ಮತ್ತಷ್ಟು ಬೆಳೆಸಲು ಮತ್ತು ಹೊಸ ಪ್ರೇಕ್ಷಕರನ್ನು ಗುರಿಯಾಗಿಸಲು ಮಹಿಳಾ ಪ್ರೀಮಿಯರ್ ಲೀಗ್‌ಗೂ ಅದೇ ಸ್ವರೂಪವನ್ನು ಆಡಿಸಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಘೋಷಿಸಿದ್ದರು.

IPL 2023: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಯುವ ಬ್ಯಾಟರ್ ಆರ್ಯ ದೇಸಾಯಿ ಎಂಟ್ರಿ

"ಮಹಿಳಾ ಪ್ರೀಮಿಯರ್ ಲೀಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ಇದನ್ನು ಮುಂದುವರೆಸುತ್ತೇವೆ. ನಾವು ಐದು ತಂಡಗಳೊಂದಿಗೆ ಲೀಗ್ ಪ್ರಾರಂಭಿಸಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ತಂಡಗಳಿಗೆ ಅವಕಾಶವಿದೆ. ಮುಂದಿನ ವರ್ಷಗಳಲ್ಲಿ ಬರಲಿರುವ ಮಹಿಳಾ ಕ್ರಿಕೆಟರ್‌ಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ," ಎಂದು ಏಪ್ರಿಲ್ 5ರಂದು ಅರುಣ್ ಧುಮಾಲ್ ಹೇಳಿದ್ದರು.

WPL: Next Womens Premier League Likely To Start In Diwali Says Jay Shah

ಜೂನ್‌ನಲ್ಲಿ 3 ಏಕದಿನ ಪಂದ್ಯಗಳಿಗೆ ಅಫ್ಘಾನಿಸ್ತಾನಕ್ಕೆ ಭಾರತ ಆತಿಥ್ಯ: ಜಯ್ ಶಾ
ಮತ್ತೊಂದು ಬೆಳವಣಿಗೆಯಲ್ಲಿ, 2023ರ ಏಕದಿನ ವಿಶ್ವಕಪ್ ತಯಾರಿಗಾಗಿ ಭಾರತ ಪುರುಷರ ತಂಡವು ಜೂನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಜೂನ್ 7ರಿಂದ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮುಕ್ತಾಯದ ನಂತರ ಅಫ್ಘಾನಿಸ್ತಾನ ವಿರುದ್ಧದ ಸರಣಿಯು ಜೂನ್ 16ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಬಿಸಿಸಿಐ ಮಧ್ಯಂತರದಲ್ಲಿ ಪ್ರಸಾರಕರನ್ನು ಹುಡುಕಬೇಕಾಗುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಏಕದಿನ ಸರಣಿಯ ನಂತರ ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಒಪ್ಪಂದವು ಕೊನೆಗೊಂಡಿದೆ. ನಾಲ್ಕು ವರ್ಷಗಳ ಮಾಧ್ಯಮ ಹಕ್ಕುಗಳ ಟೆಂಡರ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮೂರು ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸುತ್ತದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ ಮಧ್ಯಂತರ ಪ್ರಸಾರಕರನ್ನು ಹುಡುಕುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಜಯ್ ಶಾ ತಿಳಿಸಿದರು.

Story first published: Saturday, April 15, 2023, 8:30 [IST]
Other articles published on Apr 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+