For Quick Alerts
ALLOW NOTIFICATIONS  
For Daily Alerts
 

WPLನಲ್ಲಿ 5 ಅಲ್ಲ ಇನ್ನು 6 ತಂಡ: ಇಲ್ಲಿದೆ ಕನ್ನಡತಿ ನೀಡಿರುವ ಮಾಹಿತಿ

ಮಹಿಳಾ ಪ್ರೀಮಿಯರ್ ಲೀಗ್‌ಗೆ ಭರದ ಸಿದ್ಧತೆಗಳು ಆರಂಭವಾಗಿವೆ. ಐದು ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಈಗಾಗಲೇ ರಿಲೀಸ್ ಮಾಡಿದೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಮಾಲೀಕರು ಸಹ ಅಳೆದು ತೂಗಿ ಆಟಗಾರರ ಖರೀದಿಗೆ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಮಾಜಿ ಆಟಗಾರ್ತಿ ದೊಡ್ಡದೊಂದು ಸುದ್ದಿಯನ್ನು ತಿಳಿಸಿದ್ದಾರೆ. ಈ ಸುದ್ದಿ ಈಗ ಬಹಳ ಚರ್ಚೆಗೆ ಕಾರಣವಾಗಿದೆ.

ಮಹಿಳಾ ಕ್ರಿಕೆಟ್‌ಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಬೇಕು ಎಂಬ ಮಾತುಗಳ ನಡುವೆ, ಇತ್ತೀಚಿಗೆ ಭಾರತ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್‌ ಎತ್ತಿ ಸಂಭ್ರಮಿಸಿದೆ. ಇನ್ನು ಈ ಪ್ರಶಸ್ತಿ ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಇನ್ನು ಹೆಚ್ಚು ಉತ್ತೇಜನ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೆ ಮಾಜಿ ಆಟಗಾರ್ತಿ ಕನ್ನಡತಿ ವೇದಾ ಕೃಷ್ಣಮೂರ್ತಿ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

WPL set to expand to 6 teams by 2028 Veda Krishnamurthy shares major update on league

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈಗ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ಈ ವೇಳೆ ಹಲವು ಆಟಗಾರ್ತಿಯರು ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ ಇನ್ನು ತಂಡಗಳು ಸೇರ್ಪಡೆ ಆದರೆ ಬೆಸ್ಟ್‌ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಮಾಜಿ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಈ ಬಗ್ಗೆ ಬಿಗ್ ಅಪ್‌ಡೇಟ್‌ ನೀಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.

ಮಹಿಳಾ ಲೀಗ್‌ನಲ್ಲಿ 6 ತಂಡಗಳ ಭಾಗವಹಿಸುವಿಕೆ ಈ ವರ್ಷ ಆಗದು. ಆದರೆ 2028ರಲ್ಲಿ ಒಟ್ಟು 6 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಅಲ್ಲದೆ ನವೆಂಬರ್‌ 27 ರಂದು ನಡೆಯಲಿರುವ ಮೆಗಾ ಆಕ್ಷನ್‌ ಕೇವಲ 2 ವರ್ಷದ ಅವಧಿಗೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಾಮಾನ್ಯವಾಗಿ ಮೆಗಾ ಹರಾಜು ಮೂರು ವರ್ಷಗಳಿಗೆ ನಡೆದರೆ ಈ ಬಾರಿ ಮಾತ್ರ ಎರಡು ವರ್ಷದ್ದಾಗಿದ್ದು, 2028ರಲ್ಲಿ ಮತ್ತೊಂದು ತಂಡ ಮಹಿಳಾ ಪ್ರೀಮಿಯರ್ ಲೀಗ್‌ ಸೇರಲಿದೆ ಎಂದಿದ್ದಾರೆ.

ಹೆಚ್ಚು ತಂಡಗಳು ಭಾಗವಹಿಸುವುದರಿಂದ ಏನು ಪ್ರಯೋಜನ?

ಹೆಚ್ಚು ತಂಡಗಳು ಡಬ್ಲ್ಯೂಪಿಎಲ್‌ನಲ್ಲಿ ಭಾಗವಹಿಸುವುದರಿಂದ ಪ್ರತಿಭಾನ್ವಿತ ಆಟಗಾರರಿಗೆ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗಲಿವೆ. ಈ ಮೂಲಕ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಭಾರತದಲ್ಲಿ ಹೆಚ್ಚು ಪ್ರತಿಭಾನ್ವಿತ ಆಟಗಾರ್ತಿಯರ ದಂಡೇ ಇದೆ. ಈ ಅವಕಾಶವನ್ನು ಬಳಸಿಕೊಳ್ಳಲು ಕಾತುರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನವೆಂಬರ್ 27 ರಂದು ಹರಾಜು

ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ನವೆಂಬರ್ 27 ರಂದು ನಡೆಯಲಿದೆ. ಇದಕ್ಕಾಗಿ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರ್ತಿಯರ ಲೀಸ್ಟ್‌ ನೀಡಿವೆ. ಸ್ಟಾರ್ ಆಟಗಾರ್ತಿಯರ ಮೇಲೆ ಹಣದ ಹೊಳೆ ಹರಿಸಲು ಮಾಲೀಕರು ಸಹ ಚಿತ್ತ ನೆಟ್ಟಿವೆ. ಇದಕ್ಕಾಗಿ ಫ್ರಾಂಚೈಸಿಗಳು ಮೆಗಾ ಪ್ಲ್ಯಾನ್ ನಡೆಸಿವೆ.

Story first published: Monday, November 10, 2025, 13:54 [IST]
Other articles published on Nov 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+