Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ

Wridiman saha

ಕಾನ್ಪುರದ ಗ್ರೀನ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನ ಅಂತಿಮ ದಿನದಾಟದಲ್ಲಿ ಟೀಂ ಇಂಡಿಯಾ ಗೆಲುವಿಗೆ 9 ವಿಕೆಟ್‌ಗಳ ಅವಶ್ಯಕತೆ ಇದೆ. ಟಾಮ್ ಲಥಾಮ್ ಮತ್ತು ನೈಟ್ ವಾಚ್‌ಮಾನ್ ಆಗಿ ಕಣಕ್ಕಿಳಿದಿದ್ದ ಸೊಮರ್ವಿಲ್ಲೆ ಉತ್ತಮವಾಗೇ ಬ್ಯಾಟಿಂಗ್ ಆರಂಭಿಸಿದ್ದಾರೆ.

ಕಿವೀಸ್ ಓಪನರ್‌ ಲಥಾಮ್ ಭದ್ರ ಬುನಾದಿ ಹಾಕಿಕೊಡುವ ಹೆಜ್ಜೆ ಇಟ್ಟಿದ್ದಾರೆ. ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್ಸ್ ನಿರಂತರ ಕಠಿಣ ಶ್ರಮ ಒಂದು ಕಡೆಯಾದ್ರೆ, ಅಂತಿಮ ದಿನದಾಟದ ಆರಂಭದಲ್ಲಿ ಆಶ್ಚರ್ಯ ಕಾದಿತ್ತು. ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಬದಲು ಕೆ.ಎಸ್. ಭರತ್ ಗ್ಲೌಸ್ ತೊಟ್ಟು ಕಣಕ್ಕಿಳಿದರು.

ಇದನ್ನು ನೋಡಿದ ಅಭಿಮಾನಿಗಳು ವೃದ್ದಿಮಾನ್ ಸಾಹಾಗೆ ಏನಾಯಿತು? ಎನ್ನುವಷ್ಟರಲ್ಲಿ ಬಿಸಿಸಿಐ ಸಾಹ ಇಂಜ್ಯುರಿ ಕುರಿತು ಅಪ್‌ಡೇಟ್‌ ನೀಡಿದೆ. ಹೌದು, ವೃದ್ದಿಮಾನ್ ಸಾಹ ಅವರು ಮತ್ತೊಮ್ಮೆ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರನ್ನು ಬಿಸಿಸಿಐ ವೈದ್ಯಕೀಯ ತಂಡ ಪರೀಕ್ಷೆ ನಡೆಸುತ್ತಿದೆ. ಹೀಗಾವಿ ಇವರ ಬದಲಿಗೆ ಕೆ.ಎಸ್‌ ಭರತ್ ಕೀಪಿಂಗ್ ಗ್ಲೌಸ್ ತೊಟ್ಟು ಕಣಕ್ಕಿಳಿಯುತ್ತಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದ 37 ವರ್ಷದ ವೃದ್ದಿಮಾನ್ ಸಾಹಾ ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. 12 ಎಸೆತಗಳನ್ನ ಎದುರಿಸಿ ಕೇವಲ 1ರನ್ ಗೆ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ವೃದ್ದಿಮಾನ್ ಸಾಹಾ ಅಜೇಯ 61 ರನ್‌ಗಳಿಸಿ ತಂಡಕ್ಕೆ ನೆರವಾದ್ರು.

ವೃದ್ದಿಮಾನ್ ಸಾಹಾ ಈ ಮೊದಲು ಮೂರನೇ ದಿನದಾಟದಲ್ಲೂ ಇದೇ ಸಮಸ್ಯೆಯಿಂದ ಕಣಕ್ಕಿಳಿಯಲಿಲ್ಲ. ಕೆ.ಎಸ್‌ ಭರತ್ ಅವರ ಜವಾಬ್ದಾರಿ ಹೊತ್ತರು. ಇದೀಗ ಮತ್ತೊಮ್ಮೆ ಭರತ್‌ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುತ್ತಿದ್ದು, 37 ವರ್ಷದ ವೃದ್ದಿಮಾನ್ ಸಾಹಾ ಫಿಟ್ನೆಸ್ ಕುರಿತು ಟೀಕೆಗಳು ಕೇಳಿಬಂದಿವೆ.

ರಿಷಭ್ ಪಂತ್ ಬದಲು ಸ್ಥಾನ ಪಡೆದಿರುವ ವೃದ್ದಿಮಾನ್ ಸಾಹಾ ಮುಂದಿನ ಸರಣಿಗೆ ಆಯ್ಕೆಯಾಗುವುದು ಬಹುತೇಕ ಅನುಮಾನಗೊಂಡಿದೆ. ಯುವ ಆಟಗಾರ ಕೆ.ಎಸ್ ಭರತ್‌ ಇನ್ಮುಂದೆ ಸ್ಟ್ಯಾಂಡ್ ಬೈ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 345 ರನ್‌ಗಳಿಗೆ ಆಲೌಟ್ ಆದ ಬಳಿಕ, ನ್ಯೂಜಿಲೆಂಡ್ ಎರಡನೇ ದಿನದಾಟದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಆದ್ರೆ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್ಸ್‌ ಕಂಬ್ಯಾಕ್ ಮಾಡಿ ಕಿವೀಸ್ ಪಡೆಯಲ್ಲಿ 296ರನ್‌ಗಳಿಗೆ ಆಲೌಟ್ ಮಾಡಿದ್ರು. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಈ ಮೂಲಕ ನ್ಯೂಜಿಲೆಂಡ್‌ಗೆ 284 ರನ್‌ಗಳ ಟಾರ್ಗೆಟ್ ನೀಡಿದೆ.

Story first published: Monday, November 29, 2021, 13:00 [IST]
Other articles published on Nov 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+