For Quick Alerts
ALLOW NOTIFICATIONS  
For Daily Alerts
 

WTC 2023: ಭಾರತ ತಂಡದ ಫೈನಲ್ ಆಸೆಯನ್ನು ಹಾಳು ಮಾಡಲಿದೆಯೇ ಶ್ರೀಲಂಕಾ?; ಹೇಗಿದೆ ಲೆಕ್ಕಾಚಾರ?

WTC 2023: How Is Team India And Sri Lanka Teams World Test Championship Final Road?

ಗುರುವಾರ, ಮಾರ್ಚ್ 9ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದೆ.

ಇಂದೋರ್‌ನಲ್ಲಿ ನಡೆದ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ವಿರುದ್ಧ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ.

ಮತ್ತೊಂದೆಡೆ, ಭಾರತ ತಂಡವು ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಆದರೆ, ಶ್ರೀಲಂಕಾ ತಂಡ ಭಾರತದ ಆಸೆಗೆ ತಣ್ಣೀರೆರಚಬಹುದು.

ಇತ್ತ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಅತ್ತ ಶ್ರೀಲಂಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಡುತ್ತಿದೆ.

WTC 2023: How Is Team India And Sri Lanka Teams World Test Championship Final Road?

ಆಸ್ಟ್ರೇಲಿಯಾ ತಂಡವು ಶೇಕಡಾ 68.52 ಅಂಕಗಳನ್ನು ಗಳಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇನ್ನೂ 2ನೇ ಸ್ಥಾನದಲ್ಲಿದ್ದರೂ, ಶೇಕಡಾವಾರು ಅಂಕಗಳಲ್ಲಿ 60.29ಕ್ಕೆ ಇಳಿಕೆ ಕಂಡಿದೆ.

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಶೇ.53.33 ಅಂಕಗಳನ್ನು ಹೊಂದಿದ್ದು, ಹೀಗಾಗಿ ಭಾರತಕ್ಕೆ ತೀವ್ರ ಫೈಟ್ ನೀಡುತ್ತಿದೆ.

ದಿಮುತ್ ಕರುಣಾರತ್ನೆ ನಾಯಕತ್ವದ ಶ್ರೀಲಂಕಾ ತಂಡ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಭರವಸೆಯನ್ನು ಹೇಗೆ ಹಾಳು ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.

WTC 2023: How Is Team India And Sri Lanka Teams World Test Championship Final Road?

ಭಾರತ ತಂಡಕ್ಕೆ ಸರಳ ಹಾದಿ ಯಾವುದು?
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಖಚಿತಪಡಿಸುತ್ತದೆ. ಇದರಿಂದ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಫೈನಲ್ ರೇಸ್‌ನಿಂದ ಹೊರಗುಳಿಯಲಿದೆ.

ಆಸ್ಟ್ರೇಲಿಯಾ ವಿರುದ್ಧ ಸೋಲು ಅಥವಾ ಡ್ರಾ ಭಾರತ ತಂಡಕ್ಕೆ ಅಪಾಯ
ಒಂದು ವೇಳೆ ಭಾರತ ತಂಡವು ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತರೆ ಅಥವಾ ಡ್ರಾ ಮಾಡಿಕೊಂಡರೆ, ಶ್ರೀಲಂಕಾ ತಂಡಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧ ತನ್ನ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.

ಶ್ರೀಲಂಕಾ ಎರಡೂ ಟೆಸ್ಟ್‌ ಪಂದ್ಯಗಳನ್ನು ಸೋತರೆ ಕಥೆ ಏನು?
ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ತಂಡ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಗೆಲ್ಲಲು ವಿಫಲವಾದರೆ, ಭಾರತ ತಂಡವು ತನ್ನ ಅಂತಿಮ ಪಂದ್ಯದ ಫಲಿತಾಂಶವನ್ನು ಪರಿಗಣನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಪ್ರವೇಶಿಸುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಉಸ್ಮಾನ್ ಖವಾಜಾ ಅವರ ಶತಕದ ಸಹಾಯದಿಂದ ಪ್ರವಾಸಿ ತಂಡ ಆಸ್ಟ್ರೇಲಿಯಾ ತಂಡ 4 ವಿಕೆಟ್‌ಗೆ 255 ರನ್ ಗಳಿಸಿದೆ.

Story first published: Thursday, March 9, 2023, 19:27 [IST]
Other articles published on Mar 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+