Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final 2023: ಭಾರತ vs ಆಸ್ಟ್ರೇಲಿಯಾ ಸೆಣೆಸಾಟ: ಪಂದ್ಯಕ್ಕೂ ಮುನ್ನ ನಿಮಗೆ ತಿಳಿದಿರಬೇಕಾದ ಸಂಪೂರ್ಣ ಮಾಹಿತಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಇಂದಿನಿಂದ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 11 ಮತ್ತು 10 ಪಂದ್ಯಗಳನ್ನು ಗೆದ್ದುಕೊಂಡಿದ್ದು ಈ ಮೂಲಕ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಟೀಮ್ ಇಂಡಿಯಾಗೆ ಇದು ಎರಡನೇ ವಿರ್ಶವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವಾಗಿದ್ದರೆ ಆಸ್ಟ್ರೇಲಿಯಾ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

ಇನ್ನು ಈ ವರ್ಷದ ಆರಂಭದಲ್ಲಿ ಈ ಎರಡು ತಂಡಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮುಖಾಮುಖಿಯಾಗಿ ಕಾದಾಟ ನಡೆಸಿದೆ. ಈ ಸರಣಿಯನ್ನು ಭಾರತ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಟೆಸ್ಟ್ ಮಾದರಿಯಲ್ಲಿ ಈ ಎರಡು ತಂಡಗಳು ಕೂಡ ಅತ್ಯುತ್ತಮ ಪ್ರದರ್ಶನ ನಿಡುತ್ತಿದ್ದು ಎರಡು ಬಲಿಷ್ಠ ತಂಡಗಳ ಕಾದಾಟ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.

WTC Final 2023: India vs Australia mega fight, complete details of the match

ಇನ್ನು ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಪ್ರಯತ್ನ ಇಲ್ಲಿದೆ. ಮುಂದೆ ಓದಿ..

  • ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಯಾವಾಗ ನಡೆಯಲಿದೆ?

ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಜೂನ್ 7 ಮತ್ತು ಜೂನ್ 12 ರಿಂದ ನಡೆಯಲಿದೆ.

  • ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?

ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ದಿ ಓವಲ್‌ನಲ್ಲಿ (ಕೆನ್ನಿಂಗ್ಟನ್ ಓವಲ್) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ

  • ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಸಮಯ?

ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗಲಿದೆ.

  • ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮೀಸಲು ದಿನವಿದೆಯೇ?

ಹೌದು, ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಜೂನ್ 12 ಮೀಸಲು ದಿನವಾಗಿದೆ.

  • ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಯಾವ ಚೆಂಡನ್ನು ಬಳಸಲಾಗುವುದು?

ಇಂಗ್ಲೆಂಡ್‌ನಲ್ಲಿ ಬಳಸುವ ಡ್ಯೂಕ್ ಬಾಲನ್ನು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪೊಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಬಳಸಲಾಗುತ್ತದೆ

  • WTC ಫೈನಲ್ 2023 ರಲ್ಲಿ ಓವಲ್ ಪಿಚ್ ಹೇಗೆ ವರ್ತಿಸುವ ನಿರೀಕ್ಷೆಯಿದೆ?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಓವಲ್ ಪಿಚ್ ಬಗ್ಗೆ ಮಾತನಾಡಿದ್ದು ವೇಗಿಗಳಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಈ ಪಂದ್ಯಕ್ಕಾಗಿ ಫ್ಲಾಟ್ ಟ್ರ್ಯಾಕ್ ನೀಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಸಾಂಪ್ರದಾಯಿಕವಾಗಿ ಓವಲ್ ಪಿಚ್ ವೇಗಿಗಳಿಗೆ ಮತ್ತು ಸ್ಪಿನ್ನರ್‌ಗಳಿಗೆ ಸಹಾಯ ಮಾಡಿದೆ. ಆಟ ಮುಂದುವರೆದಂತೆ ಸ್ಪಿನ್ನರ್‌ಗಳು ಈ ಪಿಚ್‌ನ ಸಹಾಯ ಪಡೆಯುತ್ತಾರೆ.

  • WTC ಫೈನಲ್ ಪಂದ್ಯದಲ್ಲಿ ಯಾವುದೇ ನಿಯಮ ಬದಲಾವಣೆ ಇದೆಯೇ?

ಅಂಪೈರ್‌ಗಳ ಆನ್-ಫೀಲ್ಡ್ ಸಾಫ್ಟ್ ಸಿಗ್ನಲ್ ಅನ್ನು WTC ಫೈನಲ್ ಪಂದ್ಯಕ್ಕೆ ರದ್ದುಗೊಳಿಸಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳು ಯಾರು?
ರಿಚರ್ಡ್ ಇಲಿಂಗ್‌ವರ್ತ್ ಮತ್ತು ಕ್ರಿಸ್ ಗಫಾನಿ ಮೈದಾನದ ಅಂಪೈರ್‌ಗಳಾಗಿದ್ದು ರಿಚರ್ಡ್ ಕೆಟಲ್‌ಬರೋ ಮೂರನೇ ಅಂಪೈರ್ ಆಗಿದ್ದಾರೆ. ರಿಚಿ ರಿಚರ್ಡ್ಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನ ಮ್ಯಾಚ್ ರೆಫರಿಯಾಗಿದ್ದಾರೆ.

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಹವಾಮಾನ ಮುನ್ಸೂಚನೆ ಹೇಗಿದೆ?

ಮೊದಲನೇ ದಿನ ಬಿಸಿಲಿನಿಂದ ಕೂಡಿದ್ದರೆ ನಂತರದ ಎರಡು ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. 4 ನೇ ದಿನ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. 5 ನೇ ದಿನ ಮೋಡಕವಿದ ವಾತಾವರಣವಿರಲಿದೆ. ಮಳೆಯಾದಲ್ಲಿ ಮೀಸಲು ದಿನವನ್ನು ಹೊಂದಿರುವ ಕಾರಣ ಫಲಿತಾಂಶದ ನಿರೀಕ್ಷೆ ಮಾಡಬಹುದು.

  • ನೇರಪ್ರಸಾರದ ಮಾಹಿತಿ

ಭಾರತ vs ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಲೈವ್‌ಸ್ಟ್ರೀಮಿಂಗ್ ಮಾಡಲಾಗುತ್ತದೆ. ಕನ್ನಡದಲ್ಲಿಯೂ ವೀಕ್ಷಕವಿವರಣೆಯಿದೆ.

Story first published: Wednesday, June 7, 2023, 11:07 [IST]
Other articles published on Jun 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+