For Quick Alerts
ALLOW NOTIFICATIONS  
For Daily Alerts
 

WTC Final: ಮಹಾಕದನದಲ್ಲಿ ದಿಗ್ಗಜರಿಗೆ ಇದೆ ದಾಖಲೆ ಮೇಲೆ ಕಣ್ಣು: ಮುರಿಯಲಿದೆಯಾ ಕುಂಬ್ಳೆ, ಗಂಗೂಲಿ ದಾಖಲೆ!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು ಲಂಡನ್‌ನ ಓವಲ್ ಕ್ರೀಡಾಂಗಣ ಈ ಪಂದ್ಯದ ಆತಿಥ್ಯವಹಿಸಿಕೊಳ್ಳಲು ಸಿದ್ಧವಾಗಿದೆ. ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಎರಡು ತಂಡಗಳು ಕೂಡ ಸರ್ವಸನ್ನಧವಾಗಿದೆ. ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಬಹುದು ಎಂಬುದು ಈಗ ಇರುವ ಕುತೂಹಲ.

ಕಳೆದ ಬಾರಿಯ WTC ಫೈನಲ್‌ಗೆ ಭಾರತ ಪ್ರವೇಶ ಪಡೆದುಕೊಂಡಿದ್ದರೂ 8 ವಿಕೆಟ್‌ಗಳ ಅಂತರದಿಂದ ಟೀಮ್ ಇಂಡಿಯಾ ಸೋಲು ಅನುಭವಿಸಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ ಎರಡನೇ ಬಾರಿಗೆ ಆ ಸಾಧನೆ ಮಾಡಿರುವ ಭಾರತ ತಂಡ ಈ ಬಾರಿ ಸುದೀರ್ಘ ಕಾಲದ ಐಸಿಸಿ ಟ್ರೋಫಿಯ ಬರವನ್ನು ನೀಗಿಸುವ ಗುರಿಯಿಟ್ಟುಕೊಂಡಿದೆ.

WTC Final, India vs Australia: These records can be broken by both team players in mega clash

ಇನ್ನು ಆಸ್ಟ್ರೇಲಿಯಾ ವಿರುದ್ಧದ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳ ಕೆಲ ಆಟಗಾರರು ಪ್ರಮುಖ ದಾಖಲೆಗಳ ಸನಿಹದಲ್ಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಕುತೂಹಲಕಾರಿ ದಾಖಲೆಗಳು ಮುರಿಯುವ ಸಾಧ್ಯತೆಯಿದೆ. ಅಂಥಾ ಸಂಭಾವ್ಯ ದಾಖಲೆಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

* ರೋಹಿತ್ ಶರ್ಮಾ ಈ ಪಂದ್ಯದಲ್ಲಿ 36 ರನ್‌ಗಳನ್ನು ಗಳಿಸಿದರೆ ಎಂಎಸ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿರುವ 17092 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದಂತಾಗುತ್ತದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಐದನೇ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

* ಆರ್ ಅಶ್ವಿನ್ ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಂತಾಗುತ್ತದೆ. ಅನಿಲ್ ಕುಂಬ್ಳೆ(953 ವಿಕೆಟ್) ಹಾಗೂ ಹರ್ಭಜನ್ ಸಿಂಗ್(707 ವಿಕೆಟ್) ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

* ಇನ್ನು ಈ ಪಂದ್ಯದಲ್ಲಿ ಅಶ್ವಿನ್ ಮೂರು ವಿಕೆಟ್ ಪಡೆದರೆ ಅನಿಲ್ ಕುಂಬ್ಳೆ ಹೆಸರಿನಲ್ಲಿರುವ ಮತ್ತೊಂದು ಪ್ರಮುಖ ದಾಖಲೆಯನ್ನು ಮುರಿದಂತಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನಿಲ್ ಕುಂಬ್ಳೆ 142 ವಿಕೆಟ್ ಪಡೆದುಕೊಂಡಿದ್ದು ಈ ದಾಖಲೆ ಮುರಿದು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.

* ಈ ಪಂದ್ಯದದಲ್ಲಿ ಚೇತೇಶ್ವರ್ ಪೂಜಾರ 59 ರನ್‌ಗಳನ್ನು ಗಳಿಸಿದರೆ ಸೌರವ್ ಗಂಗೂಲಿ ಅವರ 7212 ರನ್‌ಗಳ ಟೆಸ್ಟ್ ರನ್‌ಗಳನ್ನು ಹಿಂದಿಕ್ಕಿ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 88 ರನ್‌ಗಳನ್ನು ಗಳಿಸಿದರೆ ಸೆಹ್ವಾಗ್ ಅವರ 8503 ರನ್‌ ದಾಖಲೆಯನ್ನು ಹಿಂದಿಕ್ಕಲಿದ್ದು ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯ್ಲಲಿ 5ನೇ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ.

* ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 21 ರನ್‌ಗಳಿಸಿದರೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2000ಕ್ಕೂ ಅಧಿಕ ರನ್‌ಗಳಿಸಿದ ಅಪರೂಪದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಹಾಗೂ ಚೇತೇಶ್ವರ್ ಪೂಜಾರ ಮಾತ್ರವೇ ಈ ಸಾಧನೆ ಮಾಡಿರುವ ಇತರ ಭಾರತೀಯ ಬ್ಯಾಟರ್‌ಗಳು.

* ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ 31 ರನ್‌ಗಳನ್ನು ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲಿದ್ದಾರೆ. 17112 ರನ್‌ಗಳಿಸಿದ ಮೈಕಲ್ ಕ್ಲಾರ್ಕ್ ಸಾಧನೆಯನ್ನು ಹಿಂದಿಕ್ಕಿ ಈ ದಾಖಲೆ ಮಾಡಿದಂತಾಗುತ್ತದೆ.

* ಆಸಿಸ್ ವೇಗಿ ಮೈಕಲ್ ಸ್ಟಾರ್ಕ್ ಈ ಪಂದ್ಯದಲ್ಲಿ 2 ವಿಕೆಟ್ ಪಡೆದರೆ ಆಸ್ಟ್ರೇಲಿಯಾ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಸಾಧನೆ ಮಾಡಿದ 4ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಶೇನ್ ವಾರ್ನ್(999) ಗ್ಲೆನ್ ಮೆಕ್‌ಗ್ರಾಥ್(948) ಮತ್ತು ಬ್ರೆಟ್ ಲೀ(718) ಮಾತ್ರವೇ ಈ ಸಾಧನೆ ಮಾಡಿದ ಉಳಿದ ಮೂವರು ಆಸಿಸ್ ಆಟಗಾರರು.

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಒಂದು ಕ್ಯಾಚ್ ಪಡೆದರೆ ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಕ್ಯಾಚ್ ಪಡೆದ ಭಾರತದ 7ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆಯಲು ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ 4 ವಿಕೆಟ್‌ಗಳ ಅಗತ್ಯವಿದೆ.

* ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ರನ್‌ಗಳ ಮೈಲಿಗಲ್ಲು ದಾಟಲು ವಿರಾಟ್ ಕೊಹ್ಲಿಗೆ 55 ರನ್‌ಗಳ ಅಗತ್ಯವಿದೆ.

Story first published: Wednesday, June 7, 2023, 13:21 [IST]
Other articles published on Jun 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+