WTC Final: ಭಾರತ vs ನ್ಯೂಜಿಲೆಂಡ್, ಕುತೂಹಲಕಾರಿ ಅಂಕಿ-ಅಂಶಗಳು

ಸೌತಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಜೂನ್ 18-22 ಇಂಗ್ಲೆಂಡ್ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. 3.30 PMಗೆ ಪಂದ್ಯ ಶುರುವಾಗಲಿದೆ. ಚೊಚ್ಚಲ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುತ್ತಿರುವುದರಿಂದ ಭಾರತ-ನ್ಯೂಜಿಲೆಂಡ್ ಕದನ ಕುತೂಹಲ ಮೂಡಿಸಿದೆ. ಎರಡೂ ಬಲಿಷ್ಠ ತಂಡಗಳೇ ಆಗಿರುವುದರಿಂದ ಚಾಂಪಿಯನ್ಸ್ ಯಾರಾಗಲಿದ್ದಾರೆ ಅನ್ನೋದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಂದ್ಹಾಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 1955ರಿಂದಲೂ 59 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದಿದೆ. 12 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆದ್ದಿದೆ. ಇನ್ನುಳಿದ 26 ಪಂದ್ಯಗಳು ಡ್ರಾದೊಂದಿಗೆ ಅಂತ್ಯಕಂಡಿತ್ತು.

ಎರಡೂ ಬಲಿಷ್ಠ ತಂಡಗಳೇ
ಹಿಂದಿನ ಪಂದ್ಯಗಳ ಬಲಾಬಲ ಲೆಕ್ಕಾಚಾರದಲ್ಲಿ ಭಾರತ ಸ್ವಲ್ಪ ಬಲಿಷ್ಠ ತಂಡವಾಗಿ ಕಾಣಿಸಿದೆ. ಕಳೆದ ಏಳು ಪಂದ್ಯಗಳಲ್ಲಿನ ಬಲಾಬಲ ಗಮನಿಸಿದರೆ, ಎರಡೂ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದಿದ್ದು, 1 ಪಂದ್ಯ ಡ್ರಾ ಎನಿಸಿದೆ. ಹಿಂದಿನ ಸಾರಿ ಇತ್ತಂಡಗಳ ಎರಡು ಮುಖಾಮುಖಿಯಲ್ಲಿ ಎರಡೂ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದು ಪಾರಮ್ಯ ಮೆರೆದಿತ್ತು.

ಮೈದಾನದ ಕುತೂಹಲಕಾರಿ ಸಂಗತಿ
ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದು ಮೊದಲ ಬಾರಿ. ಇದಕ್ಕೂ ಮುನ್ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಭಾರತ ಸೋತಿತ್ತು. ಆ ಎರಡೂ ಪಂದ್ಯಗಳೂ ಇಂಗ್ಲೆಂಡ್ ವಿರುದ್ಧ ನಡೆದಿದ್ದವು.

ಕ್ಯಾಚ್‌ನಲ್ಲಿ ಯಾರು ಮೇಲು?
ಪುರುಷರ ವಿಭಾಗದ ಕಳೆದ 8 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಸೋಲಿಲ್ಲದ ತಂಡವಾಗಿ ಕಾಣಿಸಿದೆ. ಆಡಿರುವ 8 ಪಂದ್ಯಗಳಲ್ಲಿ 7 ಜಯ, 1 ಡ್ರಾ ಕಂಡಿತ್ತು. ಇತ್ತಂಡಗಳ ಕ್ಯಾಚ್ ಶೇಕಡಾವಾರು ತೆಗೆದರೆ ನ್ಯೂಜಿಲೆಂಡ್ 80 ಶೇ. ಗಳಿಸಿದೆ. ಭಾರತ ಅದಕ್ಕಿಂತ ನಾಲ್ಕು ಶೇಕಡಾ ಕಡಿಮೆ ಅಂದರೆ 76 ಶೇ. ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications