For Quick Alerts
ALLOW NOTIFICATIONS  
For Daily Alerts
 

DRS ಮನವಿಯಲ್ಲಿ ಮುಂದುವರಿದ ರೋಹಿತ್ ಕ್ರಿಯೇಟಿವಿಟಿ!: ಅಂಪಾಯರ್, ಅಭಿಮಾನಿಗಳನ್ನು ಯಾಮಾರಿಸಿದ ರೋಹಿತ್

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್‌ನಲ್ಲಿ ಎಷ್ಟು ಕಲಾತ್ಮಕ ಆಟಗಾರ ಎಂಬುದು ತಿಳಿದೇ ಇದೆ. ಇದೀಗ ಡಿಆರ್‌ಎಸ್ ಮನವಿ ಮಾಡುವ ವಿಚಾರದಲ್ಲಿಯೂ ತಾನು ಬಹಳ ಕ್ರಿಯೇಟಿವ್ ಎಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ತೋರಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿದನಾಟದಲ್ಲಿ ವಿಭಿನ್ನವಾಗಿ ಡಿಆರ್‌ಎಸ್ ಮನವಿ ಮಾಡಿ ನಗುತರಿಸಿದ್ದ ರೋಹಿತ್ ಶರ್ಮಾ ಇಂದು ಅಭಿಮಾನಿಗಳಿಗೆ ಮಾತ್ರವಲ್ಲದೆ ಅಂಪೈರ್‌ಗೂ ಚಮಕ್ ನೀಡಿ ಗಮನ ಸೆಳೆದಿದ್ದಾರೆ.

ಎರಡನೇ ದಿನದಾಟದಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ನಡೆಸುತ್ತಿದ್ದಾಗ ಅಲೆಕ್ಸ್ ಕ್ಯಾರಿ ಪ್ಯಾಡ್‌ಗೆ ಚೆಂಡು ಸತತ ಎರಡು ಬಾರಿ ಚೆಂಡು ಬಡಿದಿತ್ತು. ಮೊದಲ ಬಾರಿ ಬಡಿದಾಗ ಟೀಮ್ ಇಂಡಿಯಾ ಆಟಗಾರರೆಲ್ಲರೂ ಔಟ್‌ಗಾಗಿ ಭಾರೀ ಮನವಿ ಮಾಡಿದರು. ಆದರೆ ಅಂಪಯರ್ ನಿರಾಕರಿಸಿದಾಗ ನಂತರ ರೋಹಿತ್ ಶರ್ಮಾ ಕೂಡ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಹೋಗದೆ ಸುಮ್ಮನಾದರು. ನಂತರ ಎಸೆತವೂ ಕೂಡ ಮೊದಲ ಎಸೆತದ ರೀತಿಯಲ್ಲಿಯೇ ಕ್ಯಾರಿ ಪ್ಯಾಡ್‌ಗೆ ಬಡಿದಿತ್ತು.

WTC Final: Rohit Sharma fun continues with DRS, here is how he skip DRS review

ಈ ಸಂದರ್ಭದಲ್ಲಿಯೂ ಬೌಲರ್ ಶಮಿ ಸೇರಿದಂತೆ ಭಾರತದ ಆಟಗಾರರು ಜೋರಾಗಿ ಮನವಿ ಮಾಡಿದರು. ನಾಯಕ ರೋಹಿತ್ ಶರ್ಮಾ ತಕ್ಷಣವೇ ಆಟಗಾರರ ಜೊತೆಗೆ ಚರ್ಚೆಗೆ ಆಗಮಿಸುತ್ತಿದ್ದಂತೆಯೇ ಡಿಆರ್‌ಎಸ್‌ಗೆ ಮನವಿ ಮಾಡುವ ಸನ್ನೆಯನ್ನು ಮಾಡುತ್ತಲೇ ಸುಮ್ಮನಾದರು. ಈ ವೇಳೆ ಅಂಪೈರ್ ಹಾಗೂ ಅಭಿಮಾನಿಗಳೆಲ್ಲಾ ರೋಹಿತ್ ಶರ್ಮಾ ಡಿಆರ್‌ಎಸ್ ಮನವಿ ಮಾಡಿದ್ದಾರೆ ಎಂದೇ ಭಾವಿಸಿದರು. ಆದರೆ ನಾಯಕ ರೋಹಿತ್ ನಾನು ಪೂರ್ಣವಾಗಿ ಕೈ ಸನ್ನೆ ಮಾಡಿಲ್ಲ ಎನ್ನುತ್ತಾ ಎಚ್ಚರಿಗೂ ಚಮಕ್ ನೀಡಿದ್ದಾರೆ.

ಮೊದಲ ದಿನದಾಟದಲ್ಲಿ ಭಿನ್ನವಾಗಿ ಡಿಆರ್‌ಎಸ್ ಮನವಿ

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟದಲ್ಲಿಯೂ ರೋಹಿತ್ ಶರ್ಮಾ ಡಿಆರ್‌ಎಸ್‌ ಮನವಿಯನ್ನು ಭಿನ್ನವಾಗಿ ಸಲ್ಲಿಸಿ ಸುದ್ದಿಯಾಗಿದ್ದರು. ರೋಹಿತ್ ಶರ್ಮಾ ಎಲ್ಲರಂತೆ ಡಿಆರ್‌ಎಸ್ ಮನವಿ ಮಾಡದೆ ಹಿಂಭಾಗದಿಂದ ಕೈಗಳಲ್ಲಿ ಡಿಆರ್‌ಎಸ್ ಮನವಿ ಮಾಡಿದ್ದರು. ಇದು ಕೂಡ ಅಭಿಮಾನಿಗಳಲ್ಲಿ ನಗು ಮೂಡಿಸಿತ್ತು.

ಲಘು ಕ್ಷಣಗಳು ಆಟಗಾರರಿಗೆ ಅಗತ್ಯ

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಥಾ ಕೆಲ ತಮಾಷೆಯ ಕ್ಷಣಗಳು ಆಟಗಾರರಿಗೆ ಅಗತ್ಯ. ಸುದೀರ್ಘ ಕಾಲ ಫೀಲ್ಡಿಂಗ್ ನಡೆಸುವಾಗ ಆಟಗಾರರು ಉಲ್ಲಾಸಿತರಾಗಿ ಮುಂದುವರಿಯಬೇಕಾದರೆ ಇಂಥಾ ಸಣ್ಣ ಸಣ್ಣ ಕ್ಷಣಗಳು ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಲವಲವಿಕೆಯಿಂದಿರಲು ಕಾರಣವಾಗುತ್ತದೆ. ಆದರೆ ಇಂಥಾ ತಮಾಷೆಗಳಿಗೂ ಮಿತಿ ಇರುತ್ತವೆ. ಇಲ್ಲವಾದರೆ ಅಂಪೈರ್‌ಗಳ ಕಾರ್ಯವನ್ನು ಲೇವಡಿ ಮಾಡಿದಂತೆ ಅನಿಸಿಕೊಳ್ಳುವ ಅಪಾಯವಿರುತ್ತದೆ. ಅಂಥಾ ಸಂದರ್ಭದಲ್ಲಿ ಮ್ಯಾಚ್ ರೆಫ್ರಿ ಮಧ್ಯ ಪ್ರವೇಶಿಸುವ ಸಂದರ್ಭವೂ ಬರಬಹುದು ಎಂಬುದು ಕೂಡ ಗಮನದಲ್ಲಿರಬೇಕಾಗುತ್ತದೆ.

Story first published: Thursday, June 8, 2023, 17:01 [IST]
Other articles published on Jun 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+