Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಈ ಮೂರು ಕಾರಣಕ್ಕೆ ಹೇಜಲ್‌ವುಡ್ ಹೆದರಿಕೆಯಿಂದ ಭಾರತ ಬಚಾವ್!!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಈ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡದೊಂದು ಹಿನ್ನಡೆಯುಂಟಾಗಿರುವುದು ಸ್ಪಷ್ಟ. ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಈ ಪಂದ್ಯಕ್ಕೂ ಮುನ್ನ ಗಾಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇದು ಭಾರತಕ್ಕೆ ಅನುಕೂಲಕರವಾಗಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ಟೀಮ್ ಇಂಡಿಯಾದಲ್ಲಿಯೂ ಅನುಭವಿ ವೇಗದ ಬೌಲರ್ ಜಸ್ಪ್ರಿತ್ ಬೂಮ್ರಾ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅಲಭ್ಯವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಬೂಮ್ರಾ ಅಲಭ್ಯತೆಯಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದ ನೇತೃತ್ವವನ್ನು ಮೊಹಮ್ಮದ್ ಶಮಿ ವಹಿಸಿಕೊಳ್ಳಲಿದ್ದು ಅವರಿಗೆ ಮೊಹಮ್ಮದ್ ಸಿರಾಜ್ ಬೆಂಬಲ ದೊರೆಯಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದಲ್ಲಿಯೂ ಸ್ಟಾರ್ ವೇಗಿಗಳು ಇದ್ದರು ಕೂಡ ಜೋಶ್ ಹೇಜಲ್‌ವುಡ್ ಅವರ ಈ ಅಂಕಿಅಂಶಗಳು ಭಾರತಕ್ಕೆ ಅವರ ಅಲಭ್ಯತೆ ಖಂಡಿತಾ ಲಾಭವನ್ನುಂಟು ಮಾಡಲಿದೆ ಎಂದು ಸಾರುತ್ತಿದೆ.

WTC Final: These 3 points explains Josh Hazlewood being ruled out is big advantage for India

ಹಾಗಾದರೆ ಜೋಶ್ ಹೇಜಲ್‌ವುಡ್ ಅಲಭ್ಯತೆ ಆಸ್ಟ್ರೇಲಿಯಾ ತಂಡಕ್ಕೆ ಹೇಗೆ ಕಾಡಲಿದೆ? ಅದಕ್ಕೆ ಪೂರಕವಾಗಿ ಮೂರು ಅಂಶಗಳು ಇಲ್ಲಿದೆ. ಮುಂದೆ ಓದಿ..

ಜೋಶ್ ಹೇಜಲ್‌ವುಡ್ ಅನುಭವ

ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದಿಂದ ಆಸ್ಟ್ರೇಲಿಯಾ ತಂಡದ ಭಾಗವಾಗಿರುವ ಜೋಶ್ ಹೇಜಲ್‌ವುಡ್ ಅವರ ಅನುಭವವನ್ನು ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಖಂಡಿತಾ ಕಳೆದುಕೊಳ್ಳಲಿದೆ. 2014ರಲ್ಲಿ ಆಸ್ಟ್ರೇಲಿಯಾ ಪರವಾಗಿ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ ಬಳಿಕ ಜೋಶ್ 59 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 222 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಜೋಶ್ ಹೇಜಲ್‌ವುಡ್ ಅವರ ಲೈನ್ ಹಾಗೂ ಲೆಂತ್ ಅದ್ಭುತವಾಗಿದ್ದು ಎಷ್ಟೇ ಕೌಶಲ್ಯ ಹೊಂದಿರುವ ದಾಂಡಿಗರು ಕೂಡ ಹಿಮ್ಮೆಟ್ಟಿಸುವಂತಾ ಸಾಮರ್ಥ್ಯ ಹೊಂದಿದ್ದಾರೆ.

ಭಾರತದ ವಿರುದ್ಧ ಹೇಜಲ್‌ವುಡ್ ಹೊಂದಿರುವ ದಾಖಲೆ

ಟೀಮ್ ಇಂಡಿಯಾ ವಿರುದ್ಧ ಜೋಶ್ ಹೇಜಲ್‌ವುಡ್ ಟೆಸ್ಟ್ ಮಾದರಿಯಲ್ಲಿ ಅಮೋಘ ದಾಖಲೆ ಹೊಂದಿದ್ದಾರೆ. ಹಾಗಾಗಿಯೇ ಜೋಶ್ ಅವರು ಗಾಯಗೊಂಡಿರುವುದು ರೋಹಿತ್ ಪಡೆಗೆ ಮೂಡಿಸಿರುವುದು ಸುಳ್ಳಲ್ಲ. ಜೋಶ್ ಹೇಜಲ್‌ವುಡ್ ಭಾರತದ ವಿರುದ್ಧ ಈವರೆಗೆ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಅವರು 51 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಇದರಲ್ಲಿ ನಾಲ್ಕು ಐದು ವಿಕೆಟ್‌ಗಳ ಗೊಂಚಲು ಸೇರಿದೆ. ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ ಮತ್ತು ವಿರಾಟ್ ಕೊಹ್ಲಿಯಂತಾ ಪ್ರಮುಖ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಿದ ದಾಖಲೆ ಹೊಂದಿದ್ದಾರೆ ಜೋಶ್ ಹೇಜಲ್‌ವುಡ್.

ಪೂಜಾರ ಅವರನ್ನು ಜೋಶ್ ಹೇಜಲ್‌ವುಡ್ ಆರು ಬಾರಿ ಔಟ್ ಮಾಡಿದ್ದರೆ ಅಜಿಂಕ್ಯಾ ರಹಾನೆ ಐದು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಮೂರು ಬಾರಿ ಟೆಸ್ಟ್‌ನಲ್ಲಿ ಕೊಹ್ಲಿಗೆ ಔಟಾಗಿದ್ದಾರೆ. ಹೀಗಾಗಿ ಪ್ಯಾಟ್ ಕಮ್ಮಿನ್ಸ್ ಬಳಗ ಜೋಶ್ ಹೇಜಲ್‌ವುಡ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮಿಸ್ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಇಂಗ್ಲೆಂಡ್ ನೆಲದಲ್ಲಿ ಹೇಜಲ್‌ವುಡ್ ಅದ್ಭುತ ದಾಖಲೆ!

ಇನ್ನು ಜೋಶ್ ಹೇಜಲ್‌ವುಡ್ ಅವರು ಇಂಗ್ಲೆಂಡ್ ನೆಲದಲ್ಲಿ ಹೊಂದಿರುವ ದಾಖಲೆಗಳು ಕೂಡ ಅಮೋಘವಾಗಿದೆ. ಈ ಅಂಕಿಅಂಶಗಳು ಕೂಡ ಜೋಶ್ ಹೇಜಲ್‌ವುಡ್ ಅವರನ್ನು ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಿಸ್ ಮಾಡಿಕೊಳ್ಳುವುದು ಖಂಡಿತಾ ಎಂದು ಹೇಳುವಂತಿದೆ. ಇಂಗ್ಲೆಂಡ್‌ನಲ್ಲಿ ಅವರು 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 23.58ರ ಸರಾಸರಿಯಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ದೇಶಗಳ ಪೈಕಿ ಹೇಜಲ್‌ವುಡ್ ಅವರ ಅತ್ಯುತ್ತಮ ದಾಖಲೆಯಿರುವುದು ಇಂಗ್ಲೆಂಡ್ ನೆಲದಲ್ಲಿಯೇ. ಹೀಗಾಗಿ ಇದು ಕೂಡ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಲಾಭವಾಗಲಿದೆ.

Story first published: Monday, June 5, 2023, 13:25 [IST]
Other articles published on Jun 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+