For Quick Alerts
ALLOW NOTIFICATIONS  
For Daily Alerts
 

WTC Points Table: ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಾರಿ ಹೇಗಿದೆ?

WTC Points Table: Team Indias Path To World Test Championship Final After Losing Against Australia In 3rd Test

ಶುಕ್ರವಾರ, ಮಾರ್ಚ್ 3ರಂದು ಇಂದೋರ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಅತಿಥೇಯ ಭಾರತ ತಂಡದ ವಿರುದ್ಧ ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡವು ಜೂನ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.

ಮೂರನೇ ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡವು ಶೇಕಡಾ 66.67 ಅಂಕಗಳನ್ನು ಹೊಂದಿತ್ತು. ಇದೇ ವೇಳೆ ಭಾರತ ತಂಡವು 64.06 ಶೇಕಡಾ ಅಂಕಗಳನ್ನು ಹೊಂದಿತ್ತು.

ಇದೀಗ, ಭಾರತ ತಂಡದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವಿನ ನಂತರ, ಆಸ್ಟ್ರೇಲಿಯಾ ತಂಡವು ಶೇಕಡಾ 68.52 ಅಂಕಗಳನ್ನು ಹೊಂದಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇನ್ನೂ 2ನೇ ಸ್ಥಾನದಲ್ಲಿದ್ದರೂ, ಶೇಕಡಾವಾರು ಅಂಕಗಳಲ್ಲಿ 60.29ಕ್ಕೆ ಇಳಿಕೆ ಕಂಡಿದೆ.

WTC Points Table: Team Indias Path To World Test Championship Final After Losing Against Australia In 3rd Test

ಭಾರತ ತಂಡ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ, ಮಾರ್ಚ್ 9ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಅನ್ನು ಭಾರತ ಗೆಲ್ಲಬೇಕಾಗಿದೆ ಅನಿವಾರ್ಯತೆಯಲ್ಲಿದೆ.

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಶೇ.53.33 ಅಂಕಗಳನ್ನು ಹೊಂದಿದ್ದು, ಹೀಗಾಗಿ ಭಾರತಕ್ಕೆ ನೆಕ್-ಟು-ನೆಕ್ ಫೈಟ್ ನೀಡುತ್ತಿದ್ದಾರೆ. ಮಾರ್ಚ್ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಸೋತು ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿಕೊಂಡರೆ, ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದಿಂದ ಗೆದ್ದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಅಗ್ರ ಎರಡು ತಂಡಗಳಲ್ಲಿ ಇರುವುದಿಲ್ಲ.

ಇದು ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನ ನಂತರ ನವೀಕರಿಸಿದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಇಲ್ಲಿದೆ.

WTC Points Table: Team Indias Path To World Test Championship Final After Losing Against Australia In 3rd Test

ಶುಕ್ರವಾರ, ಮಾರ್ಚ್ 4ರಂದು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಆತಿಥೇಯ ಭಾರತ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರಕ್ಕೆ ತಗ್ಗಿಸಿದೆ.

ಸರಣಿಯಲ್ಲಿ ಕೊನೆಗೂ ಭಾರತ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ, ಸರಣಿ ನಿರ್ಣಾಯಕ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ, ಭಾರತದ ಸರಣಿ ಗೆಲುವಿನ ಅವಕಾಶಕ್ಕೆ ತಣ್ಣೀರೆರಚಿದೆ.

Story first published: Friday, March 3, 2023, 15:57 [IST]
Other articles published on Mar 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+