For Quick Alerts
ALLOW NOTIFICATIONS  
For Daily Alerts
 

RCB vs CSK IPL 2025: ಆರ್‌ಸಿಬಿಗೆ ಜಯದ ಯಶ: ರೋಚಕ ಪಂದ್ಯ ಗೆದ್ದ ರೆಡ್‌ ಆರ್ಮಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ 18ನೇ ಆವೃತ್ತಿಯ 52ನೇ ಪಂದ್ಯ ರೋಚಕತೆ ಹುಟ್ಟಿಸಿತ್ತು. ಕೊನೆಯ ಓವರ್‌ನಲ್ಲಿ ಯಶ್ ದಯಾಳ್‌ ನಡೆಸಿದ ಅಮೋಘ ಬೌಲಿಂಗ್ ನಡೆಸಿದ ಪರಿಣಾಮ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 2 ರನ್‌ ರೋಚಕ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಲೀಗ್‌ ಹಂತದಲ್ಲಿ ಈ ಹಿಂದೆ ಎರಡು ಬಾರಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮಣಿಸಿದ ಹಿರಿಮೆಯನ್ನು ರಜತ್ ಪಟಿದಾರ್‌ ತನ್ನದಾಗಿಸಿಕೊಂಡಿದೆ.

ಡೆತ್‌ ಓವರ್‌ಗಳಲ್ಲಿ ಅಮೋಘ ಬೌಲಿಂಗ್ ನಡೆಸಿದ ಆರ್‌ಸಿಬಿ ಬೌಲರ್ಸ್‌ ಅಬ್ಬರಿಸಿದರು. ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ಸೋಲು ಕಂಡಿದೆ. ವಿಜಯಲಕ್ಷ್ಮಿ ಕೊನೆಯ ವರೆಗೆ ಚಂಚಲೆಯಾಗಿದ್ದಳು. ಆದರೆ ಕೊನೆಯ ಓವರ್‌ನಲ್ಲಿ ಯಶ್‌ ದಯಾಳ್‌ ಬಿಗುವಿನ ದಾಳಿ ನಡೆಸಿದರು. ಈ ಓವರ್‌ನಲ್ಲಿ ಒಂದು ನೋಬಾಲ್‌ ಎಸೆದ್ರೂ ಸಿಎಸ್‌ಕೆ ಇದರ ಲಾಭವನ್ನು ಪಡೆಯುವಲ್ಲಿ ವಿಫಲರಾದರು. ದಯಾಳ್‌ ಎಸೆತದ ಲೋ ಫುಲ್‌ ಟಾಸ್‌ ಎಸೆತಗಳಿಗೆ ಉತ್ತರಿಸುವಲ್ಲಿ ಸಿಎಸ್‌ಕೆ ಬ್ಯಾಟರ್‌ಗಳು ವಿಫಲರಾದರು. ಕೊನೆಯ ಓವರ್‌ನಲ್ಲಿ 15 ರನ್‌ ಡಿಫೆಂಡ್‌ ಮಾಡಿಕೊಂಡ ಆರ್‌ಸಿಬಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಜಯದ ಮೂಲಕ ಆರ್‌ಸಿಬಿ ಆಡಿರುವ 11 ಪಂದ್ಯಗಳಲ್ಲಿ 8 ಜಯ ದಾಖಲಿಸಿದ್ದು, 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.

Yash Dayal Holds Nerve in Final Over as RCB Edge CSK by 2 Runs in IPL Thriller

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 213 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್‌ ಸಿಡಿಸಿ ಸೋಲು ಕಂಡಿತು.

3ನೇ ವಿಕೆಟ್‌ಗೆ ಶತಕದ ಜೊತೆಯಾಟ

ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಕಳಪೆಯಾಗಿತ್ತು. ಪವರ್‌ ಪ್ಲೇನಲ್ಲಿ ಸಿಎಸ್‌ಕೆ ಶೇಖ್‌ ರಸೀದ್ ಹಾಗೂ ಸ್ಯಾಮ್ ಕರನ್‌ ಅವರ ವಿಕೆಟ್‌ ಕಳೆದುಕೊಂಡಿತು. 58 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಒತ್ತಡದಲ್ಲಿದ್ದ ಸಿಎಸ್‌ಕೆ ತಂಡಕ್ಕೆ ಆಯುಷ್ ಮಾತ್ರೆ ಹಾಗೂ ರವೀಂದ್ರ ಜಡೇಜಾ ಆಧಾರವಾದ್ರು. ಈ ಜೋಡಿ ಮೂರನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ವಿಫಲವಾಯಿತು. ಈ ಜೋಡಿ 64 ಎಸೆತಗಳಲ್ಲಿ 114 ರನ್‌ ಕಾಣಿಕೆ ನೀಡಿತು. 17 ವರ್ಷದ ಆಯುಷ್ ಮಾತ್ರೆ 48 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಬ್ಬರಿಸಿದರು.

Yash Dayal Holds Nerve in Final Over as RCB Edge CSK by 2 Runs in IPL Thriller

ರವೀಂದ್ರ ಜಡೇಜಾ ಕೊನೆಯ ವರೆಗೂ ಹೋರಾಟ ನಡೆಸಿ ಅಜೇಯ 77 ರನ್‌ ಸಿಡಿಸಿದರು. ಮಹೇಂದ್ರ ಸಿಂಗ್ ಧೊನಿ (12), ಶಿವಂ ದುಬೆ (ಅಜೇಯ 8) ಅಗತ್ಯ ರನ್ ಕಲೆ ಹಾಕುವಲ್ಲಿ ವಿಫಲರಾದರು.

ಲುಂಗಿ ಎನ್‌ಗಿಡಿಗೆ 3 ವಿಕೆಟ್‌

ಜೋಶ್‌ ಹ್ಯಾಜಲ್‌ವುಡ್ ಬದಲಿಗೆ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಲುಂಗಿ ಎನ್‌ಗಿಡಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇವರು 4 ಓವರ್‌ಗಳಲ್ಲಿ 30 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಉಳಿದಂತೆ ಕೃನಾಲ್‌ ಪಾಂಡ್ಯ, ಯಶ್ ದಯಾಳ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

Yash Dayal Holds Nerve in Final Over as RCB Edge CSK by 2 Runs in IPL Thriller

ಭರ್ಜರಿ ಆರಂಭ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭಿಕರಾದ ಜಾಕಬ್‌ ಬೇತೆಲ್‌ ಹಾಗೂ ವಿರಾಟ್ ಕೊಹ್ಲಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 97 ರನ್‌ ಸಿಡಿಸಿ ತಂಡಕ್ಕೆ ನೆರವಾದರು. ಬೇತೆಲ್‌ ತಮ್ಮ ಐಪಿಎಲ್‌ ವೃತ್ತಿ ಜೀವನದ ಮೊದಲ ಅರ್ಧಶತಕ ಬಾರಿಸಿದರು. ವಿರಾಟ್‌ 33 ಎಸೆತಗಳಲ್ಲಿ 62 ರನ್‌ ಬಾರಿಸಿದರು. ಡೆತ್‌ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ರೊಮಾರಿಯೊ ಶೆಫರ್ಡ್ ಇತಿಹಾಸ ಬರೆದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಮಾರಿಯೋ 4 ಬೌಂಡರಿ, 6 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು.

Story first published: Saturday, May 3, 2025, 23:45 [IST]
Other articles published on May 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+