Yashasvi Jaiswal: ಐಪಿಎಲ್‌ನಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಸೋಮವಾರ ಜೈಪುರ್‍ದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸವಾಲಿನ ಗುರಿಯನ್ನು ಗುಜರಾತ್, ರಾಜಸ್ಥಾನ ತಂಡಕ್ಕೆ ನೀಡಿತು. ಈ ವೇಳೆ ರಾಜಸ್ಥಾನದ ಇಬ್ಬರು ಯುವ ಆಟಗಾರರು ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. 14 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಮಾಲ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೈಭವ್ ಅಬ್ಬರದ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರೆ, ಯಶಸ್ವಿ ಜೈಸ್ವಾಲ್ ಸಹ ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಿದರು.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 93 ರನ್ ಜೊತೆಯಾಟ ನೀಡಿದರು. ಗಿಲ್ 84, ಬಟ್ಲರ್ ಅಜೇಯ 50 ರನ್ ಬಾರಿಸಿದ ಪರಿಣಾಮ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 209 ರನ್ ಸೇರಿಸಿತು. ಈ ಗುರಿಯನ್ನು ಬೆನಟ್ಟಿದ ರಾಜಸ್ಥಾನ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 166 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಇವರಿಬ್ಬರ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ 15.5 ಓವರ್‌ಗಳಲ್ಲೇ 2 ವಿಕೆಟ್ ಕಳೆದುಕೊಂಡು 212 ರನ್ ಕಲೆ ಹಾಕಿತು.

ಸಚಿನ್ ದಾಖಲೆ ಅಳಿಸಿದ ಯಶಸ್ವಿ
23 ವರ್ಷದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಅನುಭವವನ್ನು ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು 40 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಸಿಡಿಸಿದರು. ಇವರ ಈ ಅಮೋಘ ಬ್ಯಾಟಿಂಗ್ ನೆರವಿನಿಂದ ಇವರು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಇಂಡಿಯನ್ ಪ್ರೀಮೀಯರ್ ಲೀಗ್‌ನಲ್ಲಿ ವೇಗವಾಗಿ 2 ಸಾವಿರ ರನ್‌ಗಳನ್ನು ಕಲೆ ಹಾಕಿದ ಬ್ಯಾಟರ್‌ಗಳ ಲೆಕ್ಕಾಚಾರದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಯಶಸ್ವಿ ಅಳಿಸಿ ಹಾಕಿದ್ದಾರೆ.
ಯಶಸ್ವಿ ಜೈಸ್ವಾಲ್ ಇನಿಂಗ್ಸ್‌ನ 8ನೇ ಓವರ್‌ನ ಎರಡನೇ ಎಸೆತದಲ್ಲಿ ಪ್ರಸಿದ್ಧ ಕೃಷ್ಣಾ ಅವರಿಗೆ ಬೌಂಡರಿ ಬಾರಿಸುತ್ತಲೇ ದೊಡ್ಡ ದಾಖಲೆ ಬರೆದರು. ಈ ಇನಿಂಗ್ಸ್‌ನಲ್ಲಿ 37 ರನ್ ಬಾರಿಸುತ್ತಿದ್ದಂತೆ ಐಪಿಎಲ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದರು. ಯಶಸ್ವಿ ತಮ್ಮ 62ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ಲೀಗ್‌ನಲ್ಲಿ ವೇಗವಾಗಿ 2 ಸಾವಿರ ರನ್ ಕಲೆ ಹಾಕಿದ ಮೂರನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಲೆಕ್ಕಾಚಾರದಲ್ಲಿ ಜೈಸ್ವಾಲ್ ಸಚಿನ್ ಅವರ ದಾಖಲೆಯನ್ನು ಮೀರಿ ನಿಂತರು. ಸಚಿನ್ 2000 ರನ್ ಬಾರಿಸಲು 63 ಇನಿಂಗ್ಸ್ ತೆಗೆದುಕೊಂಡಿದ್ದರು. ಐಪಿಎಲ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದು, ಇವರ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications