ಜೈಸ್ವಾಲ್ ಸ್ಫೋಟಕ ಶತಕ, ಅಫ್ಘಾನ್ ಮಣಿಸಿದ ಭಾರತ ಅಂಡರ್-19 ತಂಡ

ಲಕ್ನೋ, ನವೆಂಬರ್ 23: ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಜೇಯ ಶತಕದ ನೆರವಿನಿಂದ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂ ಗ್ರೌಂಡ್ 'ಬಿ'ನಲ್ಲಿ ಶುಕ್ರವಾರ (ನವೆಂಬರ್ 22) ನಡೆದ ಭಾರತ ಅಂಡರ್ 19 ಮತ್ತು ಅಫ್ಘಾನಿಸ್ತಾನ ಅಂಡರ್ 19 ತಂಡಗಳ ನಡುವಿನ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಸುಲಭ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನ್ ಅಂಡರ್ 19 ತಂಡ, ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತು. ಸೇದಿಕುಲ್ಲ ಅತಲ್ 32, ರಹಮುಲ್ಲ 29, ಅಬ್ದುಲ್ ರಹ್ಮಾನ್ 30 ರನ್ ಗಳಿಸಿದ್ದೇ ಹೆಚ್ಚೆನಿಸಿತು. ಅಫ್ಘಾನ್ ಇನ್ನಿಂಗ್ಸ್‌ನಲ್ಲಿ ಭಾರತದ ಕಾರ್ತಿಕ್ ತ್ಯಾಗಿ 2, ರವಿ ಬಿಷ್ಣೋಯ್ 3, ಅಥರ್ವ ಅಂಕೋಲೆಕರ್ 3, ಯಶಸ್ವಿ ಜೈಸ್ವಾಲ್ 2 ವಿಕೆಟ್ ಪಡೆದು ಗಮನ ಸೆಳೆದರು.
ಗುರಿ ಬೆನ್ನತ್ತಿದ ಭಾರತ ಅಂಡರ್ 19 ತಂಡ, ಯಶಸ್ವಿ ಜೈಸ್ವಾಲ್ 108 (83 ಎಸೆತ), ಅರ್ಜುನ್ ಅಝಾದ್ 29, ತಿಲಕ್ ವರ್ಮಾ 29 ರನ್‌ನೊಂದಿಗೆ 27.4ನೇ ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 172 ರನ್ ಮಾಡಿತು. ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications