ತ್ವರಿತಗತಿಯಲ್ಲಿ 200 ವಿಕೆಟ್ ಗಳಿಸಿ 82 ವರ್ಷ ಹಳೆ ದಾಖಲೆ ಮುರಿದ ಯಾಸಿರ್ ಶಾ

ಬೆಂಗಳೂರು, ಡಿಸೆಂಬರ್ 06: ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 200 ವಿಕೆಟ್ ಗಳಿಸಿದ್ದಾರೆ. ಈ ಮೂಲಕ 82ವರ್ಷ ಹಳೆಯ ಟೆಸ್ಟ್ ದಾಖಲೆಯನ್ನು ಮುರಿದಿದ್ದಾರೆ.
ಎರಡನೇ ವಿಶ್ವಯುದ್ಧಕ್ಕೂ ಮುನ್ನ 1936ರಲ್ಲಿ ಆಸ್ಟ್ರೇಲಿಯಾದ ಲೆ ಗ್ ಸ್ಪಿನ್ನರ್ ಕ್ಲಾರಿ ಗ್ರಿಮ್ಮೆಟ್ ಅವರು 36 ಪಂದ್ಯಗಳಲ್ಲೇ 200 ವಿಕೆಟ್ ಗಳಿಸಿ ದಾಖಲೆ ಬರೆದಿದ್ದರು.
ಪಾಕಿಸ್ತಾನಿ ಸ್ಪಿನ್ನರ್ ಯಾಸೀರ್ ಶಾಗೆ ನಿಷೇಧ
ಈಗ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ಗುರುವಾರ ( ಡಿಸೆಂಬರ್ 06) ಈ ದಾಖಲೆ ಬರೆದಿದ್ದಾರೆ. ಯಾಸಿರ್ ಅವರು 33ನೇ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಗಳಿಸಿ ದಾಖಲೆ ಮುರಿದಿದ್ದಾರೆ.
ಈ ಹಿಂದೆ ಗ್ರಿಮ್ಮೆಟ್ ಅವರ ದಾಖಲೆ ಮುರಿಯುವ ಅವಕಾಶ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಒದಗಿತ್ತು. ಆದರೆ, ಅಶ್ವಿನ್ ಅವರು 37ನೇ ಟೆಸ್ಟ್ ಪಂದ್ಯದಲ್ಲಿ ಈ ಗುರಿ ಮುಟ್ಟಿದರು.

1. ಯಾಸೀರ್ ಶಾ - ಪಾಕಿಸ್ತಾನ 33 ಟೆಸ್ಟ್
32 ವರ್ಷ ವಯಸ್ಸಿನ ಪಾಕಿಸ್ತಾನ ಲೆಗ್ ಸ್ಪಿನ್ನರ್ ಅವರು ಅಬುಧಾಬಿ ಹಾಗೂ ಶಾರ್ಜಾದ ಪಿಚ್ ಗಳಲ್ಲಿ ಹೆಚ್ಚಿನ ವಿಕೆಟ್ ಗಳನ್ನು ಪಡೆದಿದ್ದಲ್ಲದೆ, 17 ಟೆಸ್ಟ್ ಗಳಲ್ಲಿ 100 ವಿಕೆಟ್ ಪಡೆದು ಈ ದಾಖಲೆ ಬರೆದ ಎರಡನೇ ಬೌಲರ್ ಎನಿಸಿದ್ದರು. ಇಂಗ್ಲೆಂಡ್ ಜಾರ್ಜ್ ಲೊಹ್ಮನ್ ಅವರು 1896ರಲ್ಲಿ 16 ಟೆಸ್ಟ್ ಗಳಲ್ಲಿ 100 ವಿಕೆಟ್ ಗಳಿಸಿ ದಾಖಲೆ ಬರೆದಿದ್ದರು.

2. ಕ್ಲಾರಿ ಗ್ರಿಮ್ಮೆಟ್(ಆಸ್ಟ್ರೇಲಿಯಾ 36 ಟೆಸ್ಟ್ )
ನ್ಯೂಜಿಲೆಂಡ್ ಸಂಜಾತ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಕ್ಲಾರಿ ಗ್ರಿಮ್ಮೆಟ್ ಅವರು 37 ಟೆಸ್ಟ್ ಪಂದ್ಯಗಳಲ್ಲಿ 216 ವಿಕೆಟ್ ಗಳಿಸಿದ್ದರು. ಅವರ ಜತೆಗೆ ಲೆಗ್ ಸ್ಪಿನ್ನರ್ ಬಿಲ್ ಓ ರೇಲಿ ಅವರು 27 ಟೆಸ್ಟ್ ಗಳಿಂದ 144 ವಿಕೆಟ್ ಪಡೆದಿದ್ದರು. ಇವರಿಬ್ಬರನ್ನು ಫಾಕ್ಸ್ ಹಾಗೂ ಟೈಗರ್ ಎಂದು ಕರೆಯಲಾಗುತ್ತಿತ್ತು.

ಆರ್ ಅಶ್ವಿನ್ (ಭಾರತ-37 ಟೆಸ್ಟ್)
ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ಈ ಸಾಧನೆ ಮಾಡಿದರು. 30 ವರ್ಷ ವಯಸ್ಸಿನ ಅಶ್ವಿನ್ ಅವರು ವಖಾರ್ ಯೂನಿಸ್ ಹಾಗೂ ಡೆನ್ನಿಸ್ ಲಿಲ್ಲಿ ದಾಖಲೆ ಮುರಿದು ತ್ವರಿತ ಗತಿಯಲ್ಲಿ 37 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದರು. ಅಶ್ವಿನ್ 64 ಟೆಸ್ಟ್ ಪಂದ್ಯಗಳಿಂದ ಒಟ್ಟು 336 ವಿಕೆಟ್ ಗಳಿಸಿದ್ದಾರೆ.

ಡೆನ್ನಿಸ್ ಲಿಲ್ಲಿ/ ವಖಾರ್ ಯೂನಿಸ್ (38ಟೆಸ್ಟ್ ಪಂದ್ಯ)
ಆಸ್ಟ್ರೇಲಿಯಾ ವೇಗಿ ಡೆನ್ನಿಸ್ ಲಿಲ್ಲಿ ಹಾಗೂ ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಅವರು 38 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಗಳಿಸಿದರು. ಲಿಲ್ಲಿ ಒಟ್ಟಾರೆ 70 ಟೆಸ್ಟ್ ಗಳಿಂದ 355 ವಿಕೆಟ್ ಹಾಗೂ ಯೂನಿಸ್ 87 ಟೆಸ್ಟ್ ಗಳಿಂದ 373 ವಿಕೆಟ್ ಗಳಿಸಿದ್ದಾರೆ.

5. ಡೇಲ್ ಸ್ಟೈನ್ (39 ಟೆಸ್ಟ್ ಪಂದ್ಯ)
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರು ಅನೇಕ ಬಾರಿ ಗಾಯಾಳುವಾಗಿ ತಂಡದಿಂದ ಹೊರಗುಳಿದರೂ, ಆಡಿದಾಗೆಲ್ಲ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 39 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಗಳಿಸಿದ್ದಾರೆ. ಒಟ್ಟಾರೆ 88 ಟೆಸ್ಟ್ ಪಂದ್ಯಗಳಿಂದ 421 ವಿಕೆಟ್ ಕಿತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications