ಕ್ಯಾಲೆಂಡರ್‌ನ 2023ರ ವರ್ಷ ಕಳೆಯಲು ಕೆಲವೇ ದಿನಗಳ ಬಾಕಿ ಉಳಿದಿವೆ. ಈ ವರ್ಷವನ್ನು ಒಮ್ಮೆ ಹಿಂದಿರುಗಿ ನೋಡಿದರೆ, ಭಾರತೀಯ ಕ್ರಿಕೆಟ್‌ನಲ್ಲಿ ಕೆಲವು ಕುತೂಹಲಕಾರಿ ಅಂಶಗಳು ಸಿಗುತ್ತವೆ.
ಭಾರತ ಕ್ರಿಕೆಟ್ ತಂಡವು 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ವರ್ಷವನ್ನು ಹೊಂದಿತ್ತು. ಏಕೆಂದರೆ ಟೀಮ್ ಇಂಡಿಯಾ ಈ ವರ್ಷದಲ್ಲಿ ಆಡಿದ ಏಳು ದ್ವಿಪಕ್ಷೀಯ ಸರಣಿಗಳಲ್ಲಿ ಆರು ಸರಣಿಗಳನ್ನು ಗೆದ್ದು ಬೀಗಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2023ರ ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ಪರಿಪೂರ್ಣ ಅಭಿಯಾನವನ್ನು ಹೊಂದಿತ್ತು. ನಿರ್ಣಾಯಕ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮುನ್ನ ಸತತ ಹತ್ತು ಪಂದ್ಯಗಳನ್ನು ಜಯಿಸಿತ್ತು. ವಿಶ್ವಕಪ್ ಟ್ರೋಫಿ ಗೆಲ್ಲದಿರುವ ಒಂದು ದೊಡ್ಡ ಕೊರಗು ಬಿಟ್ಟರೆ, ಉಳಿದಿದ್ದೆಲ್ಲ ಉತ್ತಮವಾಗಿತ್ತು.
ಭಾರತ ಪುರುಷರ ಕ್ರಿಕೆಟ್ ತಂಡ 2023ರಲ್ಲಿ ಒಟ್ಟಾರೆ 35 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 27 ಪಂದ್ಯಗಳನ್ನು ಗೆದ್ದಿದೆ ಮತ್ತು 7 ಪಂದ್ಯಗಳನ್ನು ಸೋತರು ಮತ್ತು 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿತು. ಈ ವರ್ಷ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ದಾಖಲೆ ಭಾರತ ತಂಡ ಮೊದಲ ಸ್ಥಾನದಲ್ಲಿದೆ.
50-ಓವರ್‌ಗಳ ಸ್ವರೂಪದ ಮೂಲಕ ಹಲವು ಭಾರತೀಯ ಆಟಗಾರರು ಭಾರಿ ಮೊತ್ತದ ಪಂದ್ಯ ಶುಲ್ಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮೈದಾನದಲ್ಲಿನ ಯಶಸ್ಸು ಹೆಚ್ಚಿನ ಆಟಗಾರರಿಗೆ ಆರ್ಥಿಕ ಯಶಸ್ಸಿಗೆ ಕಾರಣವಾಗಿದೆ.

ಗಮನಾರ್ಹ ಅಂಶವೆಂದರೆ, ತಂಡದ 11ರ ಬಳಗದಲ್ಲಿ ಒಳಗೊಂಡಿರುವ ಆಟಗಾರರಿಗೆ ಆಡುವ ಪ್ರತಿ ಏಕದಿನ ಪಂದ್ಯಕ್ಕೆ ಬಿಸಿಸಿಐ 6 ಲಕ್ಷ ರೂಪಾಯಿ ಸಂಭಾವನೆಯನ್ನು ಪಾವತಿಸುತ್ತದೆ.
ಎಲ್ಲಾ ಅಂಕಿಅಂಶವನ್ನು ಗಣನೆಗೆ ತೆಗೆದುಕೊಂಡರೆ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು 50-ಓವರ್ ಸ್ವರೂಪದಲ್ಲಿ ಈ ವರ್ಷ 30 ಪಂದ್ಯಗಳನ್ನು ಆಡಿರುವ ಕಾರಣ ಅತಿ ಹೆಚ್ಚು ಸಂಭಾವನೆ ಗಳಿಸಿದ್ದಾರೆ ಮತ್ತು ಪಂದ್ಯದ ಶುಲ್ಕದ ಮೂಲಕ ಒಟ್ಟು 1.80 ಕೋಟಿ ರೂಪಾಯಿ ಜೇಬಿಗಿಳಿಸಿದ್ದಾರೆ.
ಕುಲದೀಪ್ ಯಾದವ್ ಅವರು 2023ರಲ್ಲಿ 49 ವಿಕೆಟ್‌ಗಳನ್ನು ಪಡೆಯುವ ಮೂಲಕ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಚೆಂಡಿನೊಂದಿಗೆ ಒಂದು ಅದ್ಭುತ ವರ್ಷವನ್ನು ಹೊಂದಿದ್ದರು.
ಇನ್ನು ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು 2023ರಲ್ಲಿ ಏಕದಿನ ಪಂದ್ಯಗಳಲ್ಲಿ ಪ್ರಮುಖ ರನ್ ಗಳಿಸಿದ (1584 ರನ್) ಆಟಗಾರನಾಗಿ ಮುಗಿಸಿದರು. ಈ ವರ್ಷ ಆಡಿದ 29 ಪಂದ್ಯಗಳ ಮೂಲಕ 1.74 ಕೋಟಿ ರೂಪಾಯಿ ಸಂಭಾವನೆ ಗಳಿಸುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ತಲಾ 27 ಪಂದ್ಯಗಳನ್ನು ಆಡಿದ್ದಾರೆ ಮತ್ತು 1.62 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ.
ಆಲ್‌ರೌಂಡರ್ ರವೀಂದ್ರ ಜಡೇಜಾ 26 ಪಂದ್ಯಗಳಿಂದ 1.56 ಕೋಟಿ ರೂಪಾಯಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ವೇಗದ ಬೌಲರ್ ಮೊಹಮ್ಮದ್ ಸಿರಾಜ್ 25 ಪಂದ್ಯಗಳಿಂದ 1.50 ಕೋಟಿ ರೂಪಾಯಿ ಜೇಬಿಗಿಳಿಸಿ ಐದನೇ ಸ್ಥಾನದಲ್ಲಿದ್ದಾರೆ.
ಮೊಹಮ್ಮದ್ ಸಿರಾಜ್ 2023ರಲ್ಲಿ 50 ಓವರ್‌ಗಳ ಸ್ವರೂಪದಲ್ಲಿ 44 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ, ಆ ಬಳಿಕ ಮೊಹಮ್ಮದ್ ಶಮಿ 19 ಪಂದ್ಯಗಳಿಂದ 43 ವಿಕೆಟ್‌ಗಳನ್ನು ಪಡೆದಿದ್ದಾರೆ.
2023ರಲ್ಲಿ ಏಕದಿನ ಪಂದ್ಯದ ಶುಲ್ಕದ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ಪುರುಷರ ಕ್ರಿಕೆಟ್ ತಂಡದ ಟಾಪ್ 10 ಗಳಿಸಿದವರ ಪಟ್ಟಿ ಇಲ್ಲಿದೆ.
1. ಕುಲದೀಪ್ ಯಾದವ್ - 1.80 ಕೋಟಿ ರೂಪಾಯಿ
2. ಶುಭಮನ್ ಗಿಲ್ - 1.74 ಕೋಟಿ ರೂಪಾಯಿ
3. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್- 1.62 ಕೋಟಿ ರೂಪಾಯಿ
4. ರವೀಂದ್ರ ಜಡೇಜಾ - 1.56 ಕೋಟಿ ರೂಪಾಯಿ
5. ಮೊಹಮ್ಮದ್ ಸಿರಾಜ್ - 1.50 ಕೋಟಿ ರೂಪಾಯಿ
6. ಸೂರ್ಯಕುಮಾರ್ ಯಾದವ್ - 1.26 ಕೋಟಿ ರೂಪಾಯಿ
7. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ - 1.20 ಕೋಟಿ ರೂಪಾಯಿ
8. ಮೊಹಮ್ಮದ್ ಶಮಿ - 1.14 ಕೋಟಿ ರೂಪಾಯಿ
9. ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್ - 1.02 ಕೋಟಿ ರೂಪಾಯಿ
10. ಶಾರ್ದೂಲ್ ಠಾಕೂರ್ - 96 ಲಕ್ಷ ರೂಪಾಯಿ