Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಹಲ್‌ನಿಂದ ಬೇಸತ್ತು ಹೋಗಿದ್ದೇವೆ ಎಂದು ಅಳಲನ್ನು ತೋಡಿಕೊಂಡ ಕ್ರಿಸ್ ಗೇಲ್!

You Are Very Annoying On Social Media Man Chris Gayle To Chahal

ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಚಾಹಲ್ ಕ್ರಿಕೆಟ್ ಅಂಗಳದಷ್ಟೇ ಸದ್ದನ್ನು ಅಂಗಳದಾಚೆಯೂ ಮಾಡುತ್ತಿರುತ್ತಾರೆ. ಸದಾ ಕಾಲೆಳೆಯುತ್ತಾ ಹಾಸ್ಯವನ್ನು ಮಾಡುತ್ತಾ ಅಭಮಾನಿಗಳಿಗೆ ರಸದೌತಣವನ್ನು ನೀಡುತ್ತಿರುತ್ತಾರೆ ಯುಜುವೇಂದ್ರ ಚಾಹಲ್. ಇಂತಾ ಚಾಹಲ್ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್‌ ಗೇಲ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಅವರಿಂದಾಗಿ ಕ್ರಿಸ್‌ಗೇಲ್ ಬೇಸತ್ತು ಹೋಗಿದ್ದಾರಂತೆ. ಇನ್ನು ನನ್ನಿಂದ ಸಹಿಸಿಕೊಳ್ಳು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ ಕ್ರಿಸ್ ಗೇಲ್. ಇಷ್ಟು ಮಾತ್ರವಲ್ಲ ಇನ್ನು ನಿನ್ನ ಮುಖವ್ನೇ ನೋಡಲಾರೆ ಎಂದುಬಿಟ್ಟಿದ್ದಾರೆ ಕ್ರಿಸ್ ಗೇಲ್.

ಆರ್‌ಸಿಬಿಯಲ್ಲಿ ಒಂದೇ ತಂಡದಲ್ಲಿದ್ದ ಈ ಇಬ್ಬರು ಆಟಗಾರರ ಮಧ್ಯೆ ಅಂತಾದ್ದೇನಾಯಿತು ಅಂತೀರಾ. ಈ ಎಲ್ಲದಕ್ಕೂ ಕಾರಣ ಯುಜುವೇಂದ್ರ ಚಾಹಲ್ ಅವರ ಒಂದು ಹವ್ಯಾಸ. ಏನದು ಮುಂದೆ ಓದಿ..

ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಚಾಹಲ್

ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಚಾಹಲ್

ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಕ್ರಿಕೆಟಿಗರಿಗಿಂತಲೂ ಹೈಪರ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಚಾಹಲ್ ಮಾಡುವ ಫನ್ನಿ ಟಿಕ್‌ಟಾಕ್‌ಗಳು ಫುಲ್ ವೈರಲ್ ಆಗುತ್ತಿವೆ. ತಮಾಷೆಯಾಗಿ ಮಾಡುವ ಈ ವಿಡಿಯೋಗಳು ಸಹ ಕ್ರಿಕೆಟಿಗರು ಕಾಲೆಳೆಯಲು ಆಹಾರವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ!

ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ!

ಇದೇ ಕಾರಣಕ್ಕೆ ಕ್ರಿಸ್ ಗೇಲ್ ಕೂಡ ಚಾಹಲ್‌ಗೆ ಕಾಲೆಳೆದಿದ್ದಾರೆ. ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಬಂದಿದ್ದ ಕ್ರಿಸ್‌ಗೇಲ್ ಯುಜುವೇಂದ್ರ ಚಾಹಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೀನು ತುಂಬಾ ಕಿರಿಕಿರಿ ಮಾಡುತ್ತಿದ್ದೀಯಾ, ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಹೊರಗೆ ಬರಬೇಕು ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

ಬೇಸತ್ತು ಹೋಗಿದ್ದೇವೆ

ಬೇಸತ್ತು ಹೋಗಿದ್ದೇವೆ

ಟಿಕ್‌ಟಾಕ್ ಸಂಸ್ಥೆಗೆ ನಾನು ಹೇಳುತ್ತಿದ್ದೇನೆ, ಅವರು ನಿನ್ನನ್ನು ಬ್ಲಾಕ್ ಮಾಡಲಿ, ಈ ಕ್ಷಣವೇ ನೀನು ಸಾಮಾಜಿಕ ಜಾಲತಾಣದಿಂದ ಆಚೆ ಬರಬೇಕು, ನಿಮ್ಮಿಂದ ನಾವು ಬೇಸತ್ತು ಹೋಗಿದ್ದೇವೆ ಚಾಹಲ್ ಎಂದು ತಮಾಷೆಯಾಗಿ ನಗುತ್ತಲೇ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಲೈವ್ ವೇಳೆ ಹೇಳಿಕೊಂಡಿದ್ದಾರೆ.

ಬ್ಲಾಕ್ ಮಾಡಿಬಿಡುತ್ತೇನೆ!

ಬ್ಲಾಕ್ ಮಾಡಿಬಿಡುತ್ತೇನೆ!

ಇಷ್ಟು ಮಾತ್ರವಲ್ಲ ಇನ್ನು ಮುಂದುವರಿದು ಈ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದರು, 'ಇನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ, ನಾನು ನನ್ನ ಜೀವನದಲ್ಲಿ ನಿನ್ನನ್ನು ನೋಡಲು ಇಷ್ಟಪಡುವುದಿಲ್ಲ, ನಿನ್ನನ್ನು ಬ್ಲಾಕ್ ಮಾಡುತ್ತೇನೆ' ಎಂದು ಕ್ರಿಸ್ ಗೇಲ್ ಈ ವಿಡಿಯೋದ ಅಂತ್ಯದಲ್ಲಿ ಹೇಳಿಕೊಂಡಿದ್ದಾರೆ.

ವಿರಾಟ್, ರೋಹಿತ್ ಕೂಡ ಮಾಡಿದ್ರು ಟ್ರೋಲ್

ವಿರಾಟ್, ರೋಹಿತ್ ಕೂಡ ಮಾಡಿದ್ರು ಟ್ರೋಲ್

ಯುಜುವೇಂದ್ರ ಚಾಹಲ್ ಅವರನ್ನು ಕ್ರಿಕೆಟಿಗರು ಹೀಗೆ ಟ್ರೋಲ್ ಮಾಡುತ್ತಿರುವುದು ಇದೇನು ಮೊದಲಲ್ಲ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕೂಡ ಅನೇಕ ಬಾರಿ ಕಾಲೆಳೆದಿದ್ದಾರೆ. ಇತ್ತೀಚೆಗೆ ಎಬಿ ಡಿ ವಿಲಿಯರ್ಸ್ ಜೊತೆಗೆ ಲೈವ್ ಮಾತುಕತೆಯ ಸಂದರ್ಭದಲ್ಲಿ ವಿರಾಟ್ ಆತನೋರ್ವ ಸಂಪೂರ್ಣ ಹಾಸ್ಯಗಾರ ಎಂದು ಹೇಳಿದ್ದಾರೆ.

Story first published: Sunday, April 26, 2020, 12:18 [IST]
Other articles published on Apr 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+