
ಟೀಂ ಇಂಡಿಯಾಕ್ಕೆ ಕೊಡುಗೆ ನೀಡಲು ನಾಯಕನೇ ಆಗಿರಬೇಕು ಎಂಬಂತಿಲ್ಲ, ಬ್ಯಾಟಿಂಗ್ ಮೂಲಕವೂ ಸಾಧಿಸಬಹುದು ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ತಂಡದ ಆಟಗಾರನಾಗಿ ಕೂಡ ನಾಯಕನಂತೆ ಯೋಚಿಸಬಲ್ಲೆ ಮತ್ತು ಅದನ್ನೇ ಮಾಡುತ್ತೇನೆ ಎಂದು ಹೇಳಿದರು. ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ ಆಸಕ್ತಿದಾಯಕ ಮಾತುಗಳನ್ನ ಆಡಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋಲಿನ ನಂತರ ವಿರಾಟ್ ಕೊಹ್ಲಿ ಸುದೀರ್ಘ ಸ್ವರೂಪದ ನಾಯಕತ್ವದಿಂದ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ ಅವರನ್ನು ಏಕದಿನ ನಾಯಕತ್ವದಿಂದ ವಜಾಗೊಳಿಸಿತ್ತು.ಅವರು ಟಿ20 ನಾಯಕತ್ವವನ್ನು ತ್ಯಜಿಸಿದ್ದರು. ಈ ಮೂಲಕ ಅವರ ಏಳು ವರ್ಷಗಳ ನಾಯಕತ್ವವನ್ನು ಕೊನೆಗೊಂಡಿತು.
'ಫೈರ್ ಸೈಡ್ ಚಾಟ್ ವಿತ್ ವಿಕೆ' ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. ಬ್ಯಾಟಿಂಗ್ ನತ್ತ ಹೆಚ್ಚಿನ ಗಮನ ಹರಿಸುವ ಮೂಲಕ ತಂಡದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು. ಕಾಲಮಿತಿ ಇದೆ ಎಂಬ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ನೀವು ಏನು ಸಾಧಿಸಿದ್ದೀರಿ ಎಂದು ಎಲ್ಲಾ ಜನರು ಹೇಳಬಹುದು. ಆದರೆ ನೀವು ಅಗ್ಗವಾಗಿ ಹೋಗಲು ನಿರ್ಧರಿಸಿದರೆ ನೀವೇ ಮೂರ್ಖರಾಗುತ್ತೀರಿ ಎಂದಿದ್ದಾರೆ.
''ಒಬ್ಬರು ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಸ್ವೀಕರಿಸಬೇಕು. ನಾನು ಧೋನಿ ನಾಯಕತ್ವದಲ್ಲಿ ಆಡಿದ್ದೇನೆ ಮತ್ತು ನಾನು ದೀರ್ಘ ಕಾಲದವರೆಗೆ ತಂಡದ ನಾಯಕನಾಗಿದ್ದೇನೆ. ಆದ್ರೆ ನನ್ನ ಮನ್ಸಸ್ಥಿತಿ ಬದಲಾಗಿಲ್ಲ'' ಎಂದು ಕೊಹ್ಲಿ ಹೇಳಿದ್ದಾರೆ.
ನಾಯಕನಾಗಲು ನೀವು ಕ್ಯಾಪ್ಟನ್ ಆಗಬೇಕಾಗಿಲ್ಲ. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದಾಗ ಅವರು ಕ್ಯಾಪ್ಟನ್ ಆಗಿರಲಿಲ್ಲವಂತೆ. ನಾವು ಇನ್ನೂ ಅವರಿಂದ ಅಮೂಲ್ಯವಾದ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಗೆಲುವುಗಳು ನಮ್ಮ ಕೈಯಲ್ಲಿಲ್ಲ. ದಿನವೂ ಒಳ್ಳೆಯದಾಗುವುದು ನಮ್ಮ ಕೈಯಲ್ಲಿಲ್ಲ. ಕಡಿಮೆ ಸಮಯದಲ್ಲಿ ಮಾಡುವ ಕೆಲಸವೂ ಅಲ್ಲ ಎಂದ ವಿರಾಟ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.