For Quick Alerts
ALLOW NOTIFICATIONS  
For Daily Alerts
 

ನಿನ್ನಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ: ದಿನೇಶ್ ಕಾರ್ತಿಕ್‌ಗೆ ನೆನಪಿಸಿದ ರೋಹಿತ್ ಶರ್ಮಾ

‘You Still Have Some Cricket Left’, Rohit Sharma Reminds Dinesh Karthik

ಭಾರತೀಯ ಕ್ರಿಕೆಟ್‌ನ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಇತ್ತೀಚೆಗೆ ಕಾಮೆಂಟೇಟರ್ ಆಗಿ ಮಿಂಚುತ್ತಿದ್ದಾರೆ. ಸಕ್ರಿಯ ಕ್ರಿಕೆಟ್‌ನಲ್ಲಿ ಇರುವಾಗಲೇ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿ ಮಿಂಚಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಈ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ. ದಿನೇಶ್ ಕಾರ್ತಿಕ್ ಕಾಮೆಂಟರಿಗೆ ಸಾಕಷ್ಟು ಅದ್ಭುತವಾದ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ.

ಸ್ಕೈ ಸ್ಪೋರ್ಟ್ಸ್‌ನ ಕಾಮೆಂಟರಿ ಟೀಮ್‌ನಲ್ಲಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಂತರವೂ ಸಕ್ರಿಯವಾಗಿದ್ದಾರೆ ದಿನೇಶ್ ಕಾರ್ತಿಕ್. ಇಂಗ್ಲೆಂಡ್ ತಂಡದ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಸರಣಿಗೂ ಡಿಕೆ ಕಾಮೆಂಟರಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ನೀಡಿರುವ ಪ್ರತಿಕ್ರಿಯೆ ಸಾಕಷ್ಟು ಗಮನಸೆಳೆದಿದೆ.

ವೀಕ್ಷಕ ವಿವರಿಣೆಯ ಸಂದರ್ಭದ ಫೋಟೋ ಜೊತೆಗೆ ದಿನೇಶ್ ಕಾರ್ತಿಕ್ "ನಾನು ನಾನಾಗಿದ್ದೇನೆ" ಎಂಬ ಅಡಿಬರಹವನ್ನು ನೀಡಿದ್ದರು.ಇದಕ್ಕೆ ಸಾಕಷ್ಟು ಅಭಿಮಾನಿಗಳು ಉತ್ತಮವಾಗಿ ಸ್ಪಂದನೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಫೋಟೋಗೆ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಯಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಕ್ರಿಕೆಟ್ ವಿಚಾರವಾಗಿ ನೆನಪು ಮಾಡಿದ್ದಾರೆ. "ನಿನ್ನಲ್ಲಿ ಇನ್ನೂ ಕೆಲ ಕ್ರಿಕೆಟ್ ಉಳಿದುಕೊಂಡಿದೆ. ನಿನ್ನ ನೆನಪಿಗಾಗಿ" ಎಂದು ರೋಹಿತ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ ನೀಡಿದ ಈ ಪ್ರತಿಕ್ರಿಯೆಗೆ ದಿನೇಶ್ ಕಾರ್ತಿಕ್ ಕೂಡ ಉತ್ತರವನ್ನು ನೀಡಿದ್ದಾರೆ. "ಅದರ ಬಗ್ಗೆ ನನಗೆ ಯಾವತ್ತಿಗೂ ಅನುಮಾನವಿಲ್ಲ" ಎಂದು ದಿನೇಶ್ ಕಾರ್ತಿಕ್ ಬರೆದುಕೊಂಡಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಅವರ ಈ ಫೋಟೋಗೆ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಪೋಸ್ ನೀಡುವುದನ್ನು ನಿಲ್ಲಿಸಿ" ಎಂದು ಶ್ರೀಧರ್ ಕಾಮೆಂಟ್ ಮಾಡಿದ್ದಾರೆ.

ಪಂತ್ ಸಹಾಯಕ್ಕೆ ಬಂದ ಗಂಗೂಲಿ | Rishab Pant | Oneindia Kannada

Story first published: Thursday, July 15, 2021, 21:54 [IST]
Other articles published on Jul 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+