Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೀವು ನಮ್ಮ ಹೃದಯದಿಂದ ಯಾವತ್ತೂ ನಿವೃತ್ತರಾಗಲ್ಲ: ಸಚಿನ್‌ಗೆ ಯುವಿ

You will never retire from our hearts, says Yuvraj Singh to Sachin Tendulkar

ನವದೆಹಲಿ: ನವೆಂಬರ್ 16 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ದಿನ. 2013ರ ನವೆಂಬರ್ 16ರಂದು ಮುಂಬೈಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ 74 ರನ್ ಬಾರಿಸಿದ್ದ ಸಚಿನ್, ನಿವೃತ್ತಿ ಘೋಷಿಸಿದ್ದರು. ಅಂದಿನ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 126 ರನ್‌ಗಳ ಜಯ ದಾಖಲಿಸಿತ್ತು.

7 ವರ್ಷಗಳ ಹಿಂದೆ ಇದೇ ನವೆಂಬರ್ 16ರಂದು ಸಚಿನ್ ಆಟ ನಿಲ್ಲಿಸಿರುವ ದಿನವನ್ನು ಸಚಿನ್ ಮತ್ತು ಕ್ರಿಕೆಟ್ ಜಗತ್ತು ಸ್ಮರಿಸಿಕೊಂಡಿದೆ. ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ ಕೂಡ ಸಚಿನ್ ನಿವೃತ್ತಿ ದಿನವನ್ನು ಸ್ಮರಿಸಿ ತೆಂಡೂಲ್ಕರ್ ಟ್ವೀಟ್‌ಗೆ ರಿಪ್ಲೆ ಮಾಡಿದ್ದಾರೆ.

ಸಚಿನ್ ನಿವೃತ್ತಿ ದಿನ ಅವರಿಗೆ ಬ್ರಿಯಾನ್ ಲಾರಾ ಮತ್ತು ಕ್ರಿಸ್ ಗೇಲ್ ಅವರು ಸ್ಟೀಲ್ ಡ್ರಮ್ ಒಂದನ್ನು ಗಿಫ್ಟಾಗಿ ನೀಡಿದ್ದರು. ಈ ಗಿಫ್ಟ್‌ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ಸಚಿನ್ ಸೋಮವಾರ ವಿಡಿಯೋ ಟ್ವೀಟ್ ಪೋಸ್ಟ್ ಮಾಡಿದ್ದರು. ಈ ಟ್ವೀಟ್‌ಗೆ ಯುವಿ ಪ್ರತಿಕ್ರಿಯಿಸಿದ್ದಾರೆ (ಮೇಲಿನ ಟ್ವೀಟ್‌ನಲ್ಲಿ ಸಚಿನ್ ಡ್ರಮ್ ಬಡಿದಿರುವ ವಿಡಿಯೋ ಇದೆ. ಖಂಡಿತಾ ನೋಡಿ).

'ಇದು ಯಾವತ್ತೂ ಮರೆಯಲಾಗದ ಅವಿಸ್ಮರಣೀಯ ದಿನ. ನೀವು ಮೈದಾನದಿಂದ ನಿವೃತ್ತರಾಗಿರಬಹುದು. ಆದರೆ ನಮ್ಮ ಮನಸ್ಸಿನಿಂದ ಯಾವತ್ತೂ ನಿವೃತ್ತರಾಗಲಾರಿರಿ. ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್' ಎಂದು ಯುವಿ ತನ್ನ ರಿಪ್ಲೇಯಲ್ಲಿ ಬರೆದುಕೊಂಡಿದ್ದಾರೆ.

Story first published: Tuesday, November 17, 2020, 17:42 [IST]
Other articles published on Nov 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+