Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vipraj Nigam: ಚೆನ್ನೈಗೆ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಮಿಂಚಿದ ವಿಪ್ರಜ್‌

ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನಲ್ಲಿ ಹೀನಾಯ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಈ ಗೆಲುವಿನಲ್ಲಿ ಕಾಣಿಕೆ ನೀಡಿದ ಆಟಗಾರರ ಪಟ್ಟಿ ದೊಡ್ಡದಿದೆ. ಆದರೆ ಎಲ್ಲರ ಚಿತ್ತ ಈ ಯುವ ಪ್ಲೇಯರ್‌ ಮೇಲೆ ನೆಟ್ಟಿರುತ್ತದೆ. ಯುವ ಸ್ಪಿನ್ ಬೌಲರ್‌ ಅಮೋಘ ಸ್ಪಿನ್ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 183 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 158 ರನ್‌ ಕಲೆ ಹಾಕಿ ತವರಿನಲ್ಲಿ ಮತ್ತೊಂದು ಸೋಲು ಕಂಡಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್ ಅಮೋಘ ಬ್ಯಾಟಿಂಗ್ ನಡೆಸಿದ ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

Young Spinner Vipraj Nigam Shines as Delhi Capitals Crush CSK for Third Straight IPL Win

ದೆಹಲಿ ತಂಡ ಮೊದಲು ಬ್ಯಾಟ್ ಮಾಡಿದ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಅವರ ಪಾತ್ರ ದೊಡ್ಡದು. ಆರಂಭಿಕರಾಗಿ ಕಣಕ್ಕೆ ಇಳಿದ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 51 ಎಸೆತಗಳಲ್ಲಿ 77 ರನ್‌ ಸಿಡಿಸಿದರು. ಈ ವೇಳೆ 6 ಬೌಂಡರಿ, 3 ಸಿಕ್ಸರ್‌ ಬಾರಿಸಿದ್ದಾರೆ. ಇವರನ್ನು ಬಿಟ್ಟರೆ, ಬೌಲಿಂಗ್‌ನಲ್ಲಿ ಡೆಲ್ಲಿ ತಂಡಕ್ಕೆ ಕುಲ್‌ದೀಪ್ ಯಾದವ್, ಮಿಚೆಲ್ ಸ್ಟಾರ್ಕ್‌ ಬಿಗುವಿನ ದಾಳಿ ನಡೆಸಿದರು. ಆದರೆ ಇದೇ ಪಂದ್ಯದಲ್ಲಿ ಕಟ್ಟುನಿಟ್ಟಿನ ಬೌಲಿಂಗ್ ನಡೆಸಿದ ಯುವ ಸ್ಪಿನ್ ಬೌಲರ್‌ ವಿಪ್ರಜ್‌ ನಿಗಮ್‌.

ಯುವ ಸ್ಪಿನ್ ಬೌಲರ್ ಕಮಾಲ್‌

ವಿಪ್ರಜ್‌ ನಿಗಮ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಸ್ಪಿನ್ ಬೌಲರ್. ಉತ್ತರ ಪ್ರದೇಶ ತಂಡದ ಪರ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ವಿಪ್ರಜ್‌ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಣೆ ಹಾಕಿತು. ಇವರು ಸಹ ಸಿಕ್ಕ ಅವಕಾಶವನ್ನು ಅಮೋಘವಾಗಿ ಬಳಸಿಕೊಂಡು ಅಬ್ಬರಿಸಿದ್ದಾರೆ. ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ವಿಪ್ರಜ್‌ 4 ಓವರ್‌ ಬೌಲಿಂಗ್‌ ಮಾಡಿ 6.75ರ ಸರಾಸರಿಯಲ್ಲಿ ರನ್‌ ನೀಡಿ 2 ಅಮೂಲ್ಯ ವಿಕೆಟ್‌ ಕಬಳಿಸಿದ್ದಾರೆ.

Young Spinner Vipraj Nigam Shines as Delhi Capitals Crush CSK for Third Straight IPL Win

ವಿಪ್ರಜ್, ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ನಾಯಕ ನೀಡಿದಾಗ ಅವರು ಈ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಓವರ್‌ನಲ್ಲಿ ಚೆನ್ನೈ ತಂಡದ ಅನುಭವಿ ಆಟಗಾರ ಡೆನ್ವೆ ಕಾನ್ವೇ ಖೆಡ್ಡಾ ತೊಡಿದ ವಿಪ್ರಜ್‌, 10ನೇ ಓವರ್‌ನಲ್ಲಿ ಸ್ಪೋಟಕ ಆಟಗಾರ ಶಿವಂ ದುಬೆಗೆ ಪೆವಿಲಿಯನ್ ಹಾದಿ ತೋರಿಸಿದರು. ಇವರ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಚೆನ್ನೈ ತಂಡದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು.

Story first published: Saturday, April 5, 2025, 20:55 [IST]
Other articles published on Apr 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+