Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Irani Cup 2024: ಭಾರತ ತಂಡದಿಂದ ಯುವ ಸ್ಟಾರ್‌ ಆಟಗಾರರ ಬಿಡುಗಡೆ

ಇರಾನಿ ಕಪ್ 2024ರ ಪಂದ್ಯವು ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವೆ ನಡೆಯಲಿದೆ. ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿರುವ ಇರಾನಿ ಕಪ್ 2024ರ ಪಂದ್ಯಕ್ಕೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ ಆತಿಥ್ಯ ವಹಿಸಿದೆ. ಉಭಯ ತಂಡಗಳ ನಡುವೆ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದೆ.

ಇರಾನಿ ಕಪ್ ಪಂದ್ಯದ ಆರಂಭಕ್ಕೂ ಮುನ್ನ ಭಾರತ ತಂಡದಿಂದ ಕೆಲವು ಸ್ಟಾರ್ ಯುವ ಕ್ರಿಕೆಟಿಗರು ಬಿಡುಗಡೆಯಾಗಿದ್ದಾರೆ. ಈ ಆಟಗಾರರು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಇರಾನಿ ಕಪ್ ಪಂದ್ಯಕ್ಕಾಗಿ ಹೊರ ಬಂದಿದ್ದಾರೆ. ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್, ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ ಮತ್ತು ವೇಗದ ಬೌಲರ್ ಯಶ್ ದಯಾಲ್ ಅವರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ.

Young star players released from Indian squad for Irani Cup 2024

ಬಿಡುಗಡೆಗೊಂಡಿರುವ ಎಲ್ಲಾ ಆಟಗಾರರು ಇರಾನಿ ಕಪ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರದಂದು ಲಕ್ನೋದಲ್ಲಿ ನಡೆಯುವ ಇರಾನಿ ಕಪ್‌ನಲ್ಲಿ ಭಾಗವಹಿಸಲು ಭಾರತ ಟೆಸ್ಟ್ ತಂಡದಿಂದ ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ಯಶ್ ದಯಾಲ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಧ್ರುವ್ ಜುರೆಲ್ ಮತ್ತು ಯಶ್ ದಯಾಲ್ ಅವರು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಆಡಲಿದ್ದು, ಸರ್ಫರಾಜ್ ಖಾನ್ ಮುಂಬೈ ತಂಡದ ಪರ ಕಣಕ್ಕೀಳಿಯಲಿದ್ದಾರೆ. ಮುಂಬೈ ತಂಡದ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿದ್ದರೆ, ರೆಸ್ಟ್ ಆಫ್ ಇಂಡಿಯಾವನ್ನು ಋತುರಾಜ್ ಗಾಯಕ್ವಾಡ್ ನಾಯಕರಾಗಿ ಮುನ್ನಡೆಸಲಿದ್ದಾರೆ.

ಲೈವ್ ಸ್ಟೀಮಿಂಗ್

ರೆಸ್ಟ್ ಆಫ್ ಇಂಡಿಯಾ ಮತ್ತು ಮುಂಬೈ ನಡುವಿನ ಇರಾನಿ ಕಪ್ ಪಂದ್ಯವೂ ಬೆಳಗ್ಗೆ 9:30 ಗಂಟೆಗೆ ಆರಂಭವಾಗಲಿದೆ. ಭಾರತದಲ್ಲಿ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಚಾನೆಲ್‌ಗಳಲ್ಲಿ ವಿಕ್ಷೀಸಬಹುದಾಗಿದೆ.

ಉಭಯ ತಂಡಗಳು

ರೆಸ್ಟ್ ಆಫ್ ಇಂಡಿಯಾ: ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಸರನ್ಶ್ ಜೈನ್, ಪ್ರಸಿದ್ಧ ಕೃಷ್ಣ, ಮುಖೇಶ್ ಕುಮಾರ್, ಯಶ್ ದಯಾಳ್, ರಿಕಿ ಭುಯಿ, ಶಾಶ್ವತ್ ರಾವತ್, ಖಲೀಲ್ ಅಹ್ಮದ್, ರಾಹುಲ್ ಚಾಹರ್.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆಯುಷ್ ಮ್ಹಾತ್ರೆ, ಮುಶೀರ್ ಖಾನ್, ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್, ಸೂರ್ಯಾಂಶ್ ಶೆಡ್ಗೆ, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸಿದ್ಧಾಂತ್ ಅಧಾತ್ರಾವ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಸಿಂಗ್ ಕೋಟ್ಯಾನ್, ಹಿದ್ಮಾನ್ ಥಾನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಮೊಹಮ್ಮದ್, ಜುನೈದ್ ಖಾನ್, ರಾಯ್ಸ್ಟನ್ ಡಯಾಸ್.

Story first published: Tuesday, October 1, 2024, 6:30 [IST]
Other articles published on Oct 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+