Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ್ರಾವಿಡ್‌ರನ್ನು ಹೊಗಳಿದ್ದ ಪಾಕ್ ಕ್ರಿಕೆಟರ್ ನಿಂದ ಅದ್ಭುತ ದಾಖಲೆ

ಅಬುಧಾಬಿ, ಅ.13: ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಹಾಡಿ ಹೊಗಳಿದ್ದ ಪಾಕಿಸ್ತಾನದ ಪ್ರತಿಭೆ ಯೂನಿಸ್ ಖಾನ್ ಅವರು ಈಗ 22 ವರ್ಷ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಸಾಧನೆ ಹಾಗೂ ತಂಡಕ್ಕೆ ಮರಳಲು ದ್ರಾವಿಡ್ ಸಲಹೆ ಕಾರಣ ಎಂದಿದ್ದ ಯೂನಿಸ್ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಸುಮಾರು 22 ವರ್ಷ ಹಳೆಯದಾದ ದಾಖಲೆಯನ್ನು ಸರಿಗಟ್ಟಿರುವ 37 ವರ್ಷ ವಯಸ್ಸಿನ ಯೂನಿಸ್ ಅವರು ಪಾಕ್ ಕ್ರಿಕೆಟ್ ನ ದಿಗ್ಗಜ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಕ್ರಿಕೆಟ್ ಜೀವನವೇ ಮುಗಿದು ಹೋಯಿತು ಎಂದು ಕೊಂಡಾಗ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ, ಸಲಹೆ ನನ್ನ ಕೈ ಹಿಡಿದು ಮುನ್ನಡೆಸಿತು, ತಂಡಕ್ಕೆ ಮರಳುವಂತೆ ಮಾಡಿತು ಎಂದು ಟೆಸ್ಟ್ ದಾಖಲೆ ಬರೆದಿರುವ ಯೂನಿಸ್ ಖಾನ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಯೂನಿಸ್ ಖಾನ್ ಅವರು ದ್ರಾವಿಡ್ ಹಾಡಿ ಹೊಗಳಿದ್ದೇಕೆ?]

ಪಾಕಿಸ್ತಾನದ ಟೆಸ್ಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಕೆ ಮಾಡಿದ ದಾಖಲೆ ಬರೆದಿರುವ ಯೂನಿಸ್ ಅವರು ಅವರಿಗೆ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮೂಲಕ ಶುಭ ಹಾರೈಸಿದ್ದು ವಿಶೇಷವಾಗಿತ್ತು.

Younis Khan breaks Javed Miandad's 22-year-old Test record


102ನೇ ಟೆಸ್ಟ್ ಪಂದ್ಯವಾಡುತ್ತಿರುವ ಯೂನಿಸ್ ಅವರು ಮಿಯಾಂದಾದ್ ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದ್ದಾರೆ. ಡಿಸೆಂಬರ್ 1993ರಲ್ಲಿ ಮಿಯಾಂದಾದ್ ನಿವೃತ್ತಿ ಹೊಂದಿದ ಮೇಲೆ ಯಾರೊಬ್ಬರೂ ಈ ದಾಖಲೆ ಸಮೀಪ ಸುಳಿದಿರಲಿಲ್ಲ.[ದ್ರಾವಿಡ್ ವಿಕೆಟ್ ಪಡೆದಿದ್ದ ಸ್ಪಿನ್ನರ್ ಈಗ ಟ್ಯಾಕ್ಸಿ ಡ್ರೈವರ್]

ಯೂನಿಸ್ ಖಾನ್ ಅವರು ಈಗ ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ, ಅತಿ ಹೆಚ್ಚು ರನ್ ಗಳಿಕೆ ಹೊಂದಿರುವ ಆಟಗಾರ ಎನಿಸಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ಯೂನಿಸ್ ಅವರು 2000ರ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಟೆಸ್ಟ್ ಜೀವನದಲ್ಲಿ 54ರನ್ ಸರಾಸರಿ ಹೊಂದಿದ್ದಾರೆ. [ಈ ವರ್ಷಾಂತ್ಯದ ಭಾರತ-ಪಾಕ್ ಕ್ರೀಡಾ ಸಮರ ರದ್ದು!]

ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಕೆ
* ಯೂನಿಸ್ ಖಾನ್ -8,836 (22 ರನ್ ಗಳಿಸಿದ್ದಾಗ) (102 ಟೆಸ್ಟ್ ಪಂದ್ಯಗಳು)
* ಜಾವೇದ್ ಮಿಯಾಂದಾದ್ -8,832 (124 ಟೆಸ್ಟ್)
* ಇನ್ಜಾಮಾಮ್ ಉಲ್ ಹಕ್ -8,829 (119 ಟೆಸ್ಟ್)
* ಮೊಹಮ್ಮದ್ ಯೂಸುಫ್-7,530 (90 ಟೆಸ್ಟ್)
* ಸಲೀಂ ಮಲೀಕ್-5,768 (103 ಟೆಸ್ಟ್)

ಪಾಕಿಸ್ತಾನ ಪರ ಅತಿ ಹೆಚ್ಚು ಶತಕ ಗಳಿಕೆ
* 30-ಯೂನಿಸ್ ಖಾನ್
* 25- ಇನ್ಜಾಮಾಮ್ ಉಲ್ ಹಕ್
* 24- ಮೊಹಮ್ಮದ್ ಯೂಸುಫ್
* 23-ಜಾವೇದ್ ಮಿಯಾಂದಾದ್
* 15- ಸಲೀಂ ಮಲೀಕ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+