US Open: ಯೂಕಿ ಭಾಂಬ್ರಿ ಜೋಡಿ ಸೆಮಿಫೈನಲ್‌ಗೆ
ಯುಎಸ್ ಓಪನ್‌ನಲ್ಲಿ ಭಾರತದ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಬಂದಿದೆ. ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪರ ಯಾವೊಬ್ಬ ಆಟಗಾರ ಸ್ಥಾನ ಪಡೆಯುವಲ್ಲಿ ವಿಫಲರಾದರೂ, ಡಬಲ್ಸ್‌ನಲ್ಲಿ ಭಾರತದ ಸ್ಟಾರ್ ಆಟಗಾರ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಯೂಕಿ ಭಾಂಬ್ರಿ ಪುರುಷರ ಡಬಲ್ಸ್‌ನಲ್ಲಿ ತಮ್ಮ ನ್ಯೂಜಿಲೆಂಡ್ ಪಾಲುದಾರ ಮೈಕೆಲ್ ವೀನಸ್ ಜೊತೆ ಆಡುತ್ತಿದ್ದಾರೆ. ಗುರುವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಯೂಕಿ ಜೋಡಿ ಅಬ್ಬರಿಸಿದೆ.
ಯೂಕಿ ಮತ್ತು ವೀನಸ್ ಜೋಡಿ ಮೂರು ಸೆಟ್‌ಗಳ ಕಾಲ ನಡೆದ ಪಂದ್ಯದಲ್ಲಿ ನಿಕೋಲಾ ಮೆಕ್ಟಿಕ್ ಮತ್ತು ರಾಜೀವ್ ರಾಮ್ ಜೋಡಿಯನ್ನು ಸೋಲಿಸಿ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಮೆಕ್ಟಿಕ್ ಮತ್ತು ರಾಜೀವ್ ಜೋಡಿ ಯೂಕಿ ಮತ್ತು ವೀನಸ್ ಜೋಡಿಯ ಸವಾಲನ್ನು ಮೆಟ್ಟಿ ನಿಲ್ಲಲು ಆಗಲಿಲ್ಲ. ಯೂಕಿ ಮತ್ತು ವೀನಸ್ ಜೋಡಿ 6-3, 7-6, 6-3 ರಿಂದ ಗೆದ್ದು ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ. ಈಗ ಯೂಕಿ ಭಾಂಬ್ರಿ ಮತ್ತು ಮೈಕೆಲ್ ವೀನಸ್ ಜೋಡಿ ಸೆಮಿಫೈನಲ್‌ನಲ್ಲಿ ನೀಲ್ .,ನಸ್ಕುಪ್ಸ್ಕಿ ಮತ್ತು ಜೋ ಸಾಲಿಸ್‌ಬರಿ ಜೋಡಿಯನ್ನು ಎದುರಿಸಲಿದೆ.

ಮೊದಲ ಸೆಟ್‌ನಿಂದಲೂ ಭಾರತ ಹಾಗೂ ಕಿವೀಸ್ ಜೋಡಿ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿತು. ಆದರೆ ಎರಡನೇ ಸೆಟ್‌ನಲ್ಲಿ ಉಭಯ ಜೋಡಿಗಳ ನಡುವೆ ಭರ್ಜರಿ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಈ ವೇಳೆ ಎರಡನೇ ಸೆಟ್ ಟೈ ಬ್ರೇಕರ್ ವರೆಗೆ ನಡೆದ ಪಂದ್ಯದಲ್ಲಿ ಯೂಕಿ ಜೋಡಿ 7-6 (8-6) ಅಂತರದಿಂದ ಗೆದ್ದಿತು. ಕೊನೆಯ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಯೂಕಿ ಹಾಗೂ ವೀನಸ್ ಜೋಡಿ ಏಕಪಕ್ಷೀಯವಾಗಿ ಜಯ ಸಾಧಿಸಿತು. ಈ ಮೂಲಕ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯಿತು.
ಇದೇ ಮೊದಲ ಬಾರಿಗೆ ಭಾರತದ ಭರವಸೆಯ 33 ವರ್ಷದ ಯೂಕಿ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. ಕಳೆದ ಬಾರಿ ಯೂಕಿ ಭಾಂಬ್ರಿ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದಿತ್ತು. ಆದರೆ ಈ ಬಾರಿ ಇತಿಹಾಸ ನಿರ್ಮಿಸುವ ಕನಸಿನಲ್ಲಿ ಯೂಕಿ ಜೋಡಿ ಇದೆ.
ಸಿನ್ನರ್‌ಗೆ ಜಯ
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಜಾನಿಕ್ ದಿ ಸಿನ್ನರ್ 6-1, 6-4, 6-2 ರಿಂದ ತಮ್ಮದೇ ದೇಶದ ಲೊರೆಂಜೊ ಮುಸೆಟ್ಟಿ ಅವರನ್ನು ಮೂರು ನೇರ ಸೆಟ್‌ಗಳಲ್ಲಿ ಮಣಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದರು. ಇನ್ನು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ನವೋಮಿ ಓಸಾಕ 6-4, 7-6 ರಿಂದ ಕರೋಲಿನಾ ಮುಚೋವಾ ರಿಂದ ಮಣಿಸಿರೆ, ಇನ್ನೊಂದು ಪಂದ್ಯದಲ್ಲಿ ಇಗಾ ಸ್ವಿಟಿಕಾ 6-4, 6-3 ರಿಂದ ಅಮಂಡಾ ಅನಿಸಿಮೊವ್ ಜಯ ಸಾಧಿಸಿ ಉಪಾಂತ್ಯ ಪ್ರವೇಶಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications