US Open 2025: ಸೆಮಿಫೈನಲ್‌ನಲ್ಲಿ ಯೂಕಿಗೆ ಸೋಲು, ಪ್ರಯಾಣ ಅಂತ್ಯ
2025 ರ ಯುಎಸ್ ಓಪನ್‌ನಲ್ಲಿ ಭಾರತೀಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಪ್ರಯಾಣ ಅಂತ್ಯವಾಗಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯೂಕಿ ಹಾಗೂ ನ್ಯೂಜಿಲೆಂಡ್ ಆಟಗಾರ ಮೈಕೆಲ್ ವೀನಸ್ ಜೋಡಿ ಸೋಲು ಕಂಡಿದೆ. ಈ ಇಬ್ಬರೂ ಸ್ಟಾರ್ ಆಟಗಾರರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಉಪಾಂತ್ಯ ಪಂದ್ಯದಲ್ಲಿ ಯೂಕಿ ಜೋಡಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ನಾಲ್ಕರ ಘಟ್ಟದ ಪಂದ್ಯದಲ್ಲಿ ಯೂಕಿ ಜೋಡಿ ಬ್ರಿಟನ್ ಜೋಡಿಯ ಕಠಿಣ ಸವಾಲು ಎದುರಿಸಿ ಸೋಲು ಕಂಡಿತು.
ಯುಕಿ ಭಾಂಬ್ರಿ ಮತ್ತು ಮೈಕೆಲ್ ವೀನಸ್ ಯುಎಸ್ ಜೋಡಿ 7-2, 6-7, 6-4 ರಿಂದ ಬ್ರಿಟಿಷ್ ಜೋಡಿ ನೀಲ್ ಸ್ಕುಪ್ಸ್ಕಿ ಮತ್ತು ಜೋಸ್ ಸಾಲಿಸ್‌ಬರಿ ಅವರ ವಿರುದ್ಧ ಸೋಲು ಕಂಡಿತು. ಯೂಕಿ ಜೋಡಿ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಅಲ್ಲದೆ ಮೊದಲ ಸೆಟ್ ಟ್ರೈ ಬ್ರೇಕರ್ ವರೆಗೆ ಸಾಗಿತು. ಈ ವೇಳೆ ಭಾರತದ ಜೋಡಿ 7-2 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಈ ಮೂಲಕ ಸೆಮಿಫೈನಲ್ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು.

ಎರಡನೇ ಸೆಟ್‌ನಲ್ಲಿ ಬ್ರಿಟಿಷ್ ಜೋಡಿ ಭರ್ಜರಿ ಪುಟಿದೇದ್ದಿತು. ಈ ವೇಳೆ ಭಾರತ ಹಾಗೂ ಕಿವೀಸ್ ಜೋಡಿಯ ರಣತಂತ್ರವನ್ನು ಮೆಟ್ಟಿ ನಿಂತು ಆಡಿದ ಬ್ರಿಟಿಷ್ ಜೋಡಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಪರಿಣಾಮ ಈ ಪಂದ್ಯ ಸಹ ಟೈ ಬ್ರೈಕರ್ ವರೆಗೆ ಸಾಗಿತು. ಈ ಒಂದು ಸೆಟ್ ಗೆದ್ದು ಫೈನಲ್‌ಗೆ ಪ್ರವೇಶಿಸುವ ಆಸೆಯನ್ನು ಯೂಕಿ ಹಾಗೂ ವೀನಸ್ ಜೋಡಿ ಹೊಂದಿತ್ತು. ಆದರೆ ಬ್ರಿಟಿಷ್ ಜೋಡಿ 7-6 (5) ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಮುನ್ನಡೆಯಿತು.
ನಿರ್ಣಾಯಕ ಸೆಟ್
ಉಭಯ ಜೋಡಿ ತಲಾ ಒಂದು ಪಂದ್ಯ ಗೆದ್ದಿದ್ದರಿಂದ ಮೂರನೇ ಹಾಗೂ ನಿರ್ಣಾಯಕ ಪಂದ್ಯ ರೋಚಕತೆ ಹೆಚ್ಚಿಸಿತ್ತು. ಈ ಅವಧಿಯಲ್ಲಿ ಬ್ರಿಟಿಷ್ ಜೋಡಿ, ಭಾರತ ಹಾಗೂ ಕಿವೀಸ್ ಜೋಡಿಗೆ ಪುನರಾಗಮನ ಮಾಡಲು ಯಾವುದೇ ಅವಕಾಶ ನೀಡಲೇ ಇಲ್ಲ. ಈ ಸೆಟ್‌ನಲ್ಲಿ ಬ್ರಿಟಿಷ್ ಜೋಡಿ 6-4 ಅಂತರದಲ್ಲಿ ಗೆದ್ದು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ, ಬ್ರಿಟಿಷ್ ಜೋಡಿ ಮಾರ್ಸೆಲ್ ಗ್ರಾನೋಲ್ಲರ್ಸ್ ಮತ್ತು ಹೊರಾಸಿಯೊ ಜೆಬಲ್ಲೋಸ್ ಜೋಡಿಯನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications