Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ಗೆ ಸಜ್ಜಾಗುತ್ತಿರೋ ಯುವಿಯ ರಿವರ್ಸ್ ಸ್ವೀಪ್ ಸಿಕ್ಸ್ ನೋಡಿ!

Yuvraj impresses fans with reverse sweep six ahead of IPL 2019 - Watch

ನವದೆಹಲಿ, ಫೆಬ್ರವರಿ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಕೆಚ್ಚೆದೆಯ ಮಹಾರಾಜ ಖ್ಯಾತಿಯ ಯುವರಾಜ್ ಸಿಂಗ್ ಆಕರ್ಷಕ ಸಿಕ್ಸ್ ಬಾರಿಸಿದ್ದಾರೆ. ಯುವಿ ಬಾರಿಸಿರುವ ರಿವರ್ಸ್ ಸ್ವೀಪ್ ಸಿಕ್ಸ್ ಅಭಿಮಾನಿಗಳ ಮನ ಗೆದ್ದಿದೆ.

ಮಾಲ್ಡೀವ್ಸ್‌ನಲ್ಲಿರುವ ಯುವರಾಜ್ ಅವರು ಭಾರತ-ಮಾಲ್ಡೀವ್ಸ್ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಸರಣಿ ಆಡುತ್ತಿದ್ದಾರೆ. ಪಂದ್ಯದಲ್ಲಿ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಯುವಿ ಮೇಲ್ ಎಂಬಲ್ಲಿ ಸ್ಥಳೀಯ ತಂಡವೊಂದರ ವಿರುದ್ಧ ಆಕರ್ಷಕ ಸಿಕ್ಸ್ ಸಿಡಿಸಿದರು.

'ಎರಡೂ ದೇಶಗಳ ನಡುವಿನ ಸ್ನೇಹಾಭಿವೃದ್ಧಿಗೆ ನಡೆಸಲಾಗುತ್ತಿರುವ ಕ್ರಿಕೆಟ್‌ಗೆ ನನ್ನನ್ನು ಆರಿಸಿದ್ದಕ್ಕಾಗಿ ನನಗೆ ಖುಷಿಯಾಗಿದೆ' ಎಂದು ವೆಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾತಿಗೆ ಸಿಕ್ಕ ಸಿಂಗ್ ಪ್ರತಿಕ್ರಿಯಿಸಿದರು. ಈ ಬಾರಿ ಐಪಿಎಲ್ ಆಟಗಾರರ ಹರಾಜು ವೇಳೆ ಮುಂಬೈ ಇಂಡಿಯನ್ಸ್ ತಂಡ ಯುವಿ ಅವರನ್ನು 1 ಕೋ.ರೂ.ಗೆ ಖರೀದಿಸಿತ್ತು.

Story first published: Tuesday, February 19, 2019, 16:54 [IST]
Other articles published on Feb 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+