ಐಪಿಎಲ್ 2019: ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಯುವಿಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

ಬೆಂಗಳೂರು, ಮಾರ್ಚ್ 28: ಭಾರತದ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೆ ಹಿಂದಿನ ಸ್ಫೋಟಕ ಬ್ಯಾಟಿಂಗ್‌ನತ್ತ ಮರಳುತ್ತಿದ್ದಾರೆ. ಗುರುವಾರ (ಮಾರ್ಚ್ 28) ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲೂ ಯುವಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 7ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಯುವರಾಜ್ 12 ಎಸೆತಗಳಿಗೆ 23 ರನ್ ಬಾರಿಸಿದರು. ಅದರಲ್ಲೂ ಬೆನ್ನು ಬೆನ್ನಿಗೆ ಸಿಕ್ಸ್ ಬಾರಿಸಿದ ಯುವಿ ಹಿಂದೊಮ್ಮೆ ಓವರ್‌ಗೆ ಸತತ 6 ಸಿಕ್ಸ್ ಬಾರಿಸಿದ ರೋಮಾಂಚಕ ಕ್ಷಣವನ್ನು ನೆನೆಪಿಸಿದರು.
ಚಾಹಲ್ ಅವರ 14ನೇ ಓವರ್‌ನಲ್ಲಿ ಯುವಿ 6-6-6 ರನ್ ಬಾರಿಸಿ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದರು. 4ನೇ ಸಿಕ್ಸ್‌ಗೆ ಯುವಿ ಬ್ಯಾಟ್ ಬೀಸಿದಾಗ ಚಿಮ್ಮಿದ ಚೆಂಡು ಬೌಂಡರಿ ಸಮೀಪದಲ್ಲಿ ಮೊಹಮ್ಮದ್ ಸಿರಾಜ್ ಕೈ ಸೇರಿತು. ಯುವಿ ನಿರ್ಗಮಿಸಿದರು.
ಆದರೆ ಪಂದ್ಯದ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯುವಿಗೆ ಟ್ವಿಟರ್‌ನಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಯುವಿ ಬ್ಯಾಟಿಂಗ್ ಕುರಿತ ಟ್ವೀಟ್‌ಗಳಲ್ಲಿ ಆಯ್ದ ಕೆಲವು ಇಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications