Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೈ ತಪ್ಪೋ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಮಾಡಿದ ಯುವರಾಜ್: ವಿಡಿಯೋ

Yuvraj Singh pulls off brilliant juggling catch in Canada Global T20 League

ಒಟ್ಟಾವಾ, ಆಗಸ್ಟ್ 5: ಗ್ಲೋಬಲ್ ಟಿ20 ಕೆನಾಡಾ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಬ್ಯಾಟಿಂಗ್‌ಗಾಗಿ ಗಮನ ಸೆಳೆಯುತ್ತಿರುವ ಸಿಕ್ಸರ್ ಕಿಂಗ್ ಯುವಿ ಶನಿವಾರದ (ಆಗಸ್ಟ್ 3) ಪಂದ್ಯದಲ್ಲಿನ ಅದ್ಭುತ ಕ್ಯಾಚ್‌ಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.

ಒಂಟಾರಿಯೋದ ಬ್ರಾಂಪ್ಟನ್ ನಲ್ಲಿರುವ ಸಿಎಎ ಸೆಂಟರ್ ಗ್ರೌಂಡ್‌ನಲ್ಲಿ ನಡೆದ ಟೊರೊಂಟೋ ನ್ಯಾಷನಲ್ಸ್ vs ಬ್ರಾಂಪ್ಟನ್ ವೂಲ್ವ್ಸ್ ನಡುವಣ ಪಂದ್ಯದಲ್ಲಿ ಯುವಿ, ಇನ್ನೇನು ಬಿಟ್ಟರು ಅನ್ನಿಸಿದ ಕ್ಯಾಚನ್ನು ಅದ್ಭುತ ರೀತಿಯಲ್ಲಿ ಹಿಡಿದಿದ್ದರು. ಯುವಿ ಕ್ಯಾಚ್‌ನಿಂದ ಲೆಂಡ್ಲ್ ಸಿಮನ್ಸ್ 19 ರನ್ನಿಗೆ ನಿರ್ಗಮಿಸುವಂತಾಯ್ತು.

ಪಂದ್ಯದ 4ನೇ ಓವರ್‌ (3.2 ಓವರ್‌)ನಲ್ಲಿ ಸಿಮನ್ಸ್ ಬ್ಯಾಟ್‌ ತಾಗಿದ ಚೆಂಡು ಮಿಡ್‌ ಆಫ್‌ನಲ್ಲಿ ನಿಂತಿದ್ದ ಯುವರಾಜ್ ಅವರತ್ತ ಚಿಮ್ಮಿ ಬಂತು. ಯುವಿ ಆ ಚೆಂಡನ್ನು ಹಿಡಿಯಲು ಯತ್ನಿಸಿದರಾದರೂ ಚೆಂಡು ಕೈಗೆ ಸಿಗದೆ ಮೇಲೆ ಚಿಮ್ಮಿತು. ಎರಡನೇ ಯತ್ನವೂ ಕೈಗೂಡಲಿಲ್ಲ. ಅಂತೂ ಮೂರನೇ ಯತ್ನದಲ್ಲಿ ಯುವಿ ಚೆಂಡನ್ನು ಕ್ಯಾಚ್ ಮಾಡಿದರು.

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬ್ರಾಂಪ್ಟನ್ ವೂಲ್ವ್ಸ್ ತಂಡ, ಜಾರ್ಜ್ ಮುನ್ಸೆ 66, ಬಾಬರ್ ಹಯಾತ್ 48 ರನ್ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 222 ರನ್ ಮಾಡಿತ್ತು. ಗುರಿ ಬೆಂಬತ್ತಿದ ಟೊರೊಂಟೋ ನ್ಯಾಷನಲ್ಸ್, ಬ್ರೆಂಡನ್ ಮೆಕಲಮ್ 36, ನಾಯಕ ಯುವರಾಜ್ ಸಿಂಗ್ 51 ರನ್ ಹೊರತಾಗಿಯೂ 221 ರನ್ ಬಾರಿಸಿ 11 ರನ್‌ನಿಂದ ಶರಣಾಯಿತು.

Story first published: Monday, August 5, 2019, 19:03 [IST]
Other articles published on Aug 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+