For Quick Alerts
ALLOW NOTIFICATIONS  
For Daily Alerts
 

2011ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಸಚಿನ್ ತೆಂಡೂಲ್ಕರ್ ಹೇಳಿದ್ದ ಗುಟ್ಟು ರಟ್ಟು ಮಾಡಿದ ಯುವರಾಜ್ ಸಿಂಗ್!

ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸಹ ಆತಿಥ್ಯದಲ್ಲಿ ನಡೆದ 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಆ ವಿಶ್ವಕಪ್ ಅಭಿಯಾನದಲ್ಲಿ ಭಾರತ ತಂಡಕ್ಕೆ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನೀಡಿದ ಮಹತ್ವದ ಸಲಹೆಯನ್ನು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಇದೀಗ ಬಹಿರಂಗಪಡಿಸಿದ್ದಾರೆ.

1983ರ ವಿಶ್ವಕಪ್ ಗೆಲುವಿನ 28 ವರ್ಷಗಳ ಬಳಿಕ 2011ರ ವಿಶ್ವಕಪ್‌ನಲ್ಲಿ ಭಾರತ ತಂಡ ಮತ್ತೊಮ್ಮೆ ಐಸಿಸಿ ಟ್ರೋಫಿ ಎತ್ತಿಹಿಡಿದಿತ್ತು. ಅದು ತವರಿನ ಮೈದಾನದಲ್ಲಿ ಎಂಬುದು ಗಮನಾರ್ಹ. ಈ ವೇಳೆ ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಭಾರತದ ಗೆಲುವಿನ ಅಭಿಯಾನದಲ್ಲಿ ದೊಡ್ಡ ಪಾತ್ರ ವಹಿಸಿದ್ದರು.

yuvraj-singh-reveals-secrets

ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಒಳಗೊಂಡ 362 ರನ್ ಬಾರಿಸಿ, 15 ವಿಕೆಟ್ ಪಡೆದ ಯುವರಾಜ್ ಸಿಂಗ್ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಯುವರಾಜ್ ಸಿಂಗ್ ಅವರ ಪ್ರದರ್ಶನವು ಭಾರತವನ್ನು ಚಾಂಪಿಯನ್‌ನತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ಟೂರ್ನಿಯುದ್ದಕ್ಕೂ ನಾಲ್ಕು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡರು.

ಇನ್ನು ಸಚಿನ್ ತೆಂಡೂಲ್ಕರ್ ಸಹ ಪ್ರಮುಖ ಕೊಡುಗೆ ನೀಡಿದ್ದರು. ಫೈನಲ್ ಪಂದ್ಯದಲ್ಲಿ ಕೇವಲ 18 ರನ್‌ಗಳನ್ನು ಗಳಿಸಿದರೂ, ಪಂದ್ಯಾವಳಿಯುದ್ದಕ್ಕೂ ಒಟ್ಟು 482 ರನ್‌ಗಳನ್ನು ಗಳಿಸಿದರು. ಈ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನ ಸ್ಥಾನ ಪಡೆದರು.

ಇದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಪಂದ್ಯಾವಳಿ ಸಹ ಆಗಿತ್ತು ಮತ್ತು ಅವರ ಕೊಡುಗೆಗಳನ್ನು ಭಾರತ ತಂಡದ ಸದಸ್ಯರು ಗುರುತಿಸಿ, ತಮ್ಮ ವಿಶ್ವಕಪ್ ಗೆಲುವನ್ನು ಕ್ರಿಕೆಟ್ ದೇವರಿಗೆ ಅರ್ಪಿಸಿದರು.

2011ರ ವಿಶ್ವಕಪ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಗುಂಪಿನ ಪಂದ್ಯದಲ್ಲಿ ಸೋತ ಕಾರಣ, ಭಾರತವು ಅಜೇಯ ಅಭಿಯಾನವನ್ನು ಹೊಂದಿರಲಿಲ್ಲ.

ಸೋಲಿನ ನಂತರ ಮಾಧ್ಯಮಗಳು ಭಾರತದ ಆಟಗಾರರನ್ನು ಟೀಕಿಸುತ್ತವೆ ಮತ್ತು ಹೊರಗಿನ ಮಾತುಗಳನ್ನು ಕೇಳಿಸಿಕೊಳ್ಳದಿರಲು ಸಚಿನ್ ತೆಂಡೂಲ್ಕರ್ ನೀಡಿದ ಅಮೂಲ್ಯ ಸಲಹೆಯನ್ನು ಇದೀಗ ಯುವರಾಜ್ ಸಿಂಗ್ ಬಹಿರಂಗಪಡಿಸಿದರು.

ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದಂತೆ, ಸಚಿನ್ ತೆಂಡೂಲ್ಕರ್ ಅವರು ಮಾಧ್ಯಮಗಳ ಮಾತು, ಪ್ರಶ್ನೆಗಳನ್ನು ಕೇಳಿಸಿಕೊಳ್ಳದಿರಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಜನಸಂದಣಿಯ ಮೂಲಕ ಹೋಗುವಾಗ ಹೆಡ್‌ಫೋನ್ ಬಳಸುವಂತೆ ತಂಡಕ್ಕೆ ಸಲಹೆ ನೀಡಿದ್ದರು ಎಂದು ಮಾಜಿ ಆಲ್‌ರೌಂಡರ್ ಹೇಳಿದರು.

yuvraj-singh-reveals-secrets

ಸಚಿನ್ ತೆಂಡೂಲ್ಕರ್ ಅವರ ಆ ಸಲಹೆಯನ್ನು ಇಡೀ ಭಾರತ ತಂಡವು ಒಪ್ಪಿಕೊಂಡಿತು ಮತ್ತು ಅದು ಅಂತಿಮವಾಗಿ ಕೆಲಸ ಮಾಡಿತು ಎಂದು ಯುವರಾಜ್ ಸಿಂಗ್ ತಿಳಿಸಿದರು.

"ಈಗ ವ್ಯಾಕುಲತೆ ಸ್ವಲ್ಪ ಹೆಚ್ಚಿದೆ. ಏಕೆಂದರೆ ಆ ಸಮಯದಲ್ಲಿ ಯಾವುದೇ ಸಾಮಾಜಿಕ ಮಾಧ್ಯಮ ಇರಲಿಲ್ಲ. ಮಾಧ್ಯಮಗಳು ಮತ್ತು ಜನರೊಂದಿಗೆ ಗೊಂದಲವಿತ್ತು. ನಾವು ಆಟದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೆವು ಮತ್ತು ವಿಶ್ವಕಪ್‌ನಲ್ಲಿ ನಾವು ದಕ್ಷಿಣ ಆಫ್ರಿಕಾ ವಿರುದ್ಧ ಸೋತೆವು. ಅದು ನಾವು ಗೆಲ್ಲಲೇಬೇಕಾದ ಪಂದ್ಯವಾಗಿತ್ತು".

"ಆಗ ಸಚಿನ್ ಪಾಜಿ ತಂಡದೊಂದಿಗೆ ಕುಳಿತು, ನಾವು ದೂರದರ್ಶನ ನೋಡುವುದನ್ನು ನಿಲ್ಲಿಸಬೇಕು, ಪೇಪರ್ ಓದುವುದನ್ನು ನಿಲ್ಲಿಸಬೇಕು. ನಾವು ವಿಮಾನ ನಿಲ್ದಾಣಗಳಲ್ಲಿ ಜನಸಂದಣಿಯಿಂದ ಹೋಗುತ್ತಿರುವಾಗ ನಿಮ್ಮ ಹೆಡ್‌ಫೋನ್‌ಗಳನ್ನು ಬಳಸಿ. ಕೇವಲ ವಿಶ್ವಕಪ್‌ನತ್ತ ಗಮನ ಹರಿಸಿ. ಅದನ್ನು ತಂಡವು ಒಪ್ಪಿಕೊಂಡಿತು, ನಾವು ಅದನ್ನು ಅನುಸರಿಸಿದೆವು ಮತ್ತು ಅದು ನಿಜವಾಗಿಯೂ ಕೆಲಸ ಮಾಡಿತು," ಎಂದು ಯುವರಾಜ್ ಸಿಂಗ್ ಹೇಳಿದರು.

"ಏಕೆಂದರೆ ಹೇಗಾದರೂ ತುಂಬಾ ಒತ್ತಡವಿರುತ್ತದೆ. ಭಾರತದ ಸಮಸ್ಯೆ ಏನೆಂದರೆ, ಭಾರತ ತಂಡ ಮಾತ್ರ ಗೆಲ್ಲುತ್ತದೆ ಮತ್ತು ಗೆಲ್ಲಬೇಕು ಎಂದು ಜನರು ಭಾವಿಸುತ್ತಾರೆ. ಇದು ದೊಡ್ಡ ವಿಶ್ವಕಪ್, ಹಲವು ಉತ್ತಮ ತಂಡಗಳಿವೆ ಮತ್ತು ನಾವು ನಮ್ಮ ಕಾರ್ಯಗಳ ಮೇಲೆ ನಿಜವಾಗಿಯೂ ಗಮನಹರಿಸಬೇಕು," ಎಂಬ ಸಲಹೆ ನೀಡಿದ್ದರು ಎಂದು ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಿಳಿಸಿದರು.

Story first published: Friday, September 29, 2023, 18:47 [IST]
Other articles published on Sep 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+