Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಿಖರ್ ಧವನ್ ಸ್ಲಿಪ್ಪರ್ ನೋಡಿ ಯುವರಾಜ್ ನಕ್ಕಿದ್ದೇಕೆ?

ಗಾಲೆ, ಜುಲೈ 27: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದನ್ನು 'ಗಬ್ಬರ್ ಸಿಂಗ್' ಶಿಖರ್ ಧವನ್ ಅವರು ಭರ್ಜರಿಯಾಗಿ ಸಮರ್ಥಿಸಿಕೊಂಡಿದ್ದಾರೆ.

ಗಾಲೆಯಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 190ರನ್ ಸಿಡಿಸಿದ ಶಿಖರ್ ಧವನ್ ಅವರು ಬಿಳಿ ಜರ್ಸಿ ಮತ್ತೊಮ್ಮೆ ತೊಟ್ಟು ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದು ನೋಡಿ ಯುವರಾಜ್ ಸಿಂಗ್ ನಗೆಯಾಡಿದ್ದಾರೆ. ಅರೇ, ಶಿಖರ್ ನೋಡಿ ಯುವರಾಜ್ ಯಾಕೆ ನಗಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...

India Vs Sri Lanka: Yuvraj Singh trolls Shikhar Dhawan for wearing slippers during photo shoot

ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರ ಫೋಟೋ ಶೂಟ್ ಮಾಡಿ ಕೆಲವರ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿತ್ತು. ಇದರಲ್ಲಿ ಶಿಖರ್ ಧವನ್ ಚಿತ್ರ ವಿಶೇಷವಾಗಿತ್ತು.



ಎಲ್ಲರೂ ಟೀಂ ಇಂಡಿಯಾ ಟೆಸ್ಟ್ ಜರ್ಸಿ ತೊಟ್ಟು ಶೂ ಧರಿಸಿ ಬಂದಿದ್ದರೆ, ಧವನ್ ಮಾತ್ರ ಸ್ಲಿಪ್ಪರ್ ತೊಟ್ಟು ಪೋಸ್ ನೋಡಿದ್ದರು. ಇದನ್ನು ನೋಡಿ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. ಇದಕ್ಕೆ ಧವನ್ ಕೂಡಾ ಪ್ರತಿಕ್ರಿಯಿಸಿದ್ದರು.


ಗಾಯಗೊಂಡ ಮುರಳಿ ವಿಜಯ್ ಬದಲಿಗೆ ತಂಡವನ್ನು ಸೇರಿದ ಶಿಖರ್ ಧವನ್ ಅವರು ಟೆಸ್ಟ್ ತಂಡಕ್ಕೆ ಸೂಕ್ತವೇ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಧವನ್ ತಕ್ಕ ಉತ್ತರ ನೀಡಿದ್ದಾರೆ. 168 ಎಸೆತಗಳಲ್ಲಿ 190ರನ್ ಸಿಡಿಸಿದ್ದಾರೆ. ಚೇತೇಶ್ವರ್ ಪೂಜಾರಾ ಜತೆ 253ರನ್ ಗಳ ಜೊತೆಯಾಟ ಸಾಧಿಸಿದರು.


ಈಗ ಆ ಚಿತ್ರದ ವಿಷಯಕ್ಕೆ ಬರೋಣ.. ಧವನ್ ಶೂ ಹಾಕಿಕೊಂಡು ಫೋಟೋಗೆ ಪೋಸ್ ನೀಡಬಾರದೇ? ಎಂದು ಯುವಿ ಕೇಳಿದ್ದಾರೆ. ಇದಕ್ಕೆ ಪಂಜಾಬಿಯಲ್ಲಿ ಟ್ವೀಟ್ ಮಾಡಿರುವ ಧವನ್, ಪರ್ವಾಗಿಲ್ಲ, ನಾನು ಶೂ ಇಲ್ಲದೆಯೇ ಸ್ಟೈಲಿಷ್ ಆಗಿದ್ದೇನೆ. ಯಾರಿಗೆ ಗೊತ್ತಿತ್ತು, ಅವರು ಫುಲ್ ಫೋಟೋ ಹಾಕುತ್ತಾರೆ ಎಂದು, ಎಂದು ಉತ್ತರಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+