For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ, ಬೆಂಬಲಕ್ಕೆ ನಿಂತ ಯುವರಾಜ್

Yuvraj Singh Tweets and Supports Under-Fire KXIP Skipper KL Rahul

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ ಅಂತಿಮ ಓವರ್ ನಲ್ಲಿ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರಿಗೆ ಬೌಲಿಂಗ್ ಮಾಡಲು ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್ ಅವರ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ರಾಹುಲ್ ಅವರ ತಪ್ಪು ನಿರ್ಧಾರಗಳಿಂದ ಪಂಜಾಬ್ ತಂಡ ಬೆಲೆ ತೆರಬೇಕಾಯಿತು ಎಂದು ಅನೇಕರು ಟೀಕಿಸಿದ್ದಾರೆ.

ಕೊನೆ ಓವರ್ ನಲ್ಲಿ ಕೀರಾನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಸೇರಿದಂತೆ 25 ರನ್ ಗಳಿಸಿತು. ಟಿ20ಯಲ್ಲಿಒಂದು ಕೆಟ್ಟ ಓವರ್ ಒಂದು ಕೆಟ್ಟ ನಿರ್ಧಾರದಿಂದ ಆಟಗಾರರನ್ನು ಅಳೆಯಲಾಗದು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಗೌತಮ್ ಅವರ ದುಬಾರಿ ಓವರ್‌ ನಿಂದಾಗಿ ಮುಂಬೈ ಸವಾಲಿನ (191/4) ಸ್ಕೋರ್ ಮಾಡಲು ಸಾಧ್ಯವಾಯಿತು. ಗೌತಮ್‌ಗೆ ಬೌಲಿಂಗ್ ನೀಡದಿದ್ದರೂ, ಬ್ಯಾಟಿಂಗ್ ನಲ್ಲಿ ಎಲ್ಲರೂ ಕಳಪೆ ಪ್ರದರ್ಶನ ನೀಡಿದರು ಇದರಲ್ಲಿ ರಾಹುಲ್ ತಪ್ಪೇನಿದೆ ಅನೇಕರು ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡಾ ರಾಹುಲ್ ಅವರನ್ನು ಬೆಂಬಲಿಸಿ, ಮತ್ತು ಪ್ರತಿಯೊಬ್ಬರೂ ತಪ್ಪು ಮಾಡಿದ್ದಾರೆ, ಅವರ ಸರಿಯಾದ ವಿಷಯಗಳನ್ನು ನೋಡುವುದು ಅವಶ್ಯಕ ಎಂದಿದ್ದಾರೆ. ಯುವರಾಜ್ ಅವರು ಟ್ವೀಟ್ ಮಾಡಿದ್ದು, ಈ ಬಗ್ಗೆ ಅನೇಕ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.

ಯುವರಾಜ್ ಅವರು ಟ್ವೀಟ್ ನಲ್ಲಿ ಏನಿದೆ?

ಯುವರಾಜ್ ಅವರು ಟ್ವೀಟ್ ಮಾಡಿ, "ಕಳೆದ ರಾತ್ರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕಠಿಣ ಪಂದ್ಯವಾಗಿತ್ತು. ಮುಂಬೈ ಉತ್ತಮವಾಗಿ ಆಡಿ ಗೆಲುವು ಸಾಧಿಸಿತು, ಕೊನೆ ಓವರ್‌ಗಳಲ್ಲಿ ಅನುಭವಿ ಬೌಲರ್‌ನ ಕೊರತೆಯಿದೆ ಆದರೆ, ಇದಕ್ಕೆ ನಾಯಕ ರಾಹುಲ್ ರನ್ನು ಹೊಣೆಯಾಗಿಸುವುದು ಸ್ವಲ್ಪ ಅನ್ಯಾಯ ಎಂದು ನಾನು ಭಾವಿಸುತ್ತೇನೆ, ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ, ನಾಯಕನಾಗಿ ರಾಹುಲ್ ಗೆ ಇದು ಮೊದಲ ಟೂರ್ನಮೆಂಟ್ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ಪೊಲಾರ್ಡ್ ಜೋಡಿ

ಹಾರ್ದಿಕ್ ಪಾಂಡ್ಯ ಮತ್ತು ಪೊಲಾರ್ಡ್ ಜೋಡಿ

ಹಾರ್ದಿಕ್ ಪಾಂಡ್ಯ ಮತ್ತು ಪೊಲಾರ್ಡ್ ಇಬ್ಬರೂ ಅಜೇಯರಾಗಿ ಉಳಿದು ಕ್ರಮವಾಗಿ 30 (11) ಮತ್ತು 47 (20) ಗಳಿಸಿದರು. ಮುಂಬೈನ 191/4 ಕ್ಕೆ ಪ್ರತಿಯಾಗಿ ರನ್ ಚೇಸ್ ಮಾಡಲಾಗದೆ ಕಿಂಗ್ಸ್ ಇಲೆವೆನ್ 48 ರನ್‌ಗಳಿಂದ ಸೋಲು ಕಂಡಿತು. ಉತ್ತಮ ಲಯದಲ್ಲಿದ್ದ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಜೋಡಿ ವಿಕೆಟ್ ಕಳೆದುಕೊಂಡಿತು. ವಿಂಡೀಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಧ್ಯದಲ್ಲಿ ಸ್ವಲ್ಪ ಪ್ರತಿರೋಧ ತೋರಿ, 27 ಎಸೆತಗಳಲ್ಲಿ 44 ರನ್ ಗಳಿಸಿದರು, ಆದರೆ ಕಿಂಗ್ಸ್ ಇಲೆವೆನ್‌ಗೆ ಪಂದ್ಯವನ್ನು ಗೆಲ್ಲಲು ಇದು ಸಾಕಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಪಂಜಾಬ್ ಸೋಲಿಗೆ ಕಾರಣವಾಯಿತು. ಈಗ ನಾಲ್ಕು ಪಂದ್ಯಗಳಲ್ಲಿ ಒಂದು ಜಯದೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ತಂಡದಿಂದ ಕೈ ಬಿಡುವ ಸಮಯ ಬಂದಾಯ್ತು

ರಾಹುಲ್ ಬಗ್ಗೆ ಆರೋಪವೇನು?

ರಾಹುಲ್ ಬಗ್ಗೆ ಆರೋಪವೇನು?

ಶಾರ್ಜಾದಲ್ಲಿ 223ರನ್ ಗಳಿಸಿದರೂ ಎದುರಾಳಿ ತಂಡವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ರಾಜಸ್ಥಾನ್ ರಾಯಲ್ಸ್ ರೋಚಕ ಜಯ ದಾಖಲಿಸಿತು. ರಾಹುಲ್ ತೇವಾಟಿಯಾ ಒಂದೇ ಓವರ್ ನಲ್ಲಿ ಹೀರೋ ಆಗಿ ಮೆರೆದರು. ಅಬುಧಾಬಿಯಲ್ಲಿ ಮುಂಬೈ ವಿರುದ್ಧ 192ರನ್ ಬಿಟ್ಟುಕೊಟ್ಟು ಪಂಜಾಬ್ ಸೋಲಲು ಬೌಲಿಂಗ್ ಹಾಗೂ ಬ್ಯಾಟಿಂಗ್ ಬದಲಾವಣೆ ಕಾರಣವಾಯಿತು. ಇದರ ಹೊಣೆ ನಾಯಕ, ಕೋಚ್ ಹೊರಬೇಕಾಗುತ್ತದೆ. ಜಿಮ್ಮಿ ನೀಶಮ್ ಎಸೆದ 16ನೇ ಹಾಗೂ 18ನೇ ಓವರ್‌ನಲ್ಲಿ 22 ಹಾಗೂ 18 ರನ್ ಬಿಟ್ಟುಕೊಟ್ಟಿದ್ದರು. ಕೃಷ್ಣಪ್ಪ ಗೌತಮ್ ಎಸೆದ ಅಂತಿಮ ಓವರ್‌ನಲ್ಲಿ 25 ರನ್ ನೀಡಿದ್ದರು. ಹೆಚ್ಚುವರಿ ಬೌಲರ್ ಕೊರತೆ ಇದೆ, ನಮ್ಮ ಯೋಜನೆಗಳು ಕೈಕೂಡಲಿಲ್ಲ ಎಂದು ತಪ್ಪನ್ನು ತಿದ್ದುಕೊಳ್ಳುತ್ತೇವೆ ಎಂದು ರಾಹುಲ್ ಪಂದ್ಯದ ನಂತರ ಹೇಳಿದ್ದಾರೆ.

ಇದರಲ್ಲಿ ರಾಹುಲ್ ತಪ್ಪೇನಿದೆ

ಇದು ಪಿಚ್ ಹಾಗೂ ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಎಲ್ಲಾ ನಾಯಕರು ತೆಗೆದುಕೊಳ್ಳುವ ನಿರ್ಧಾರದಂತೆ ರಾಹುಲ್ ಕೂಡಾ ತೆಗೆದುಕೊಂಡರು. ಹೆಚ್ಚು ನಂಬಿಕೆಯುಳ್ಳ ಬೌಲರ್ ಗಳನ್ನು ಮೊದಲಿಗೆ ಒಮ್ಮೆ ಹಾಗೂ ಸ್ಲಾಗ್ ಓವರ್ ಗಳಲ್ಲಿ ಬೌಲ್ ಮಾಡಲು ನೀಡುವುದು ಮಾಮೂಲಿ. ಶಮಿ ಏನಾದರು ಪಾಂಡ್ಯ ಹಾಗೂ ಪೊಲ್ಲಾರ್ಡ್ ವಿಕೆಟ್ ತೆಗೆದಿದ್ದರೆ ಕಥೆ ಬೇರೆಯಾಗುತ್ತಿತ್ತು. ಕೊನೆ ಓವರ್ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು ಎಂದು ಸಂದೇಶ್ ಶ್ರೀನಿವಾಸನ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಮುಂಬೈ ವಿರುದ್ಧ ಪಂಜಾಬ್‌ಗೆ ಸೋಲು, ಟೀಕೆಗೆ ಗುರಿಯಾದ ಅನಿಲ್ ಕುಂಬ್ಳೆ

ಆರಂಭಿಕ ಬ್ಯಾಟ್ಸ್ ಮನ್ ಮೇಲೆ ಅತಿ ನಂಬಿಕೆ

ಆರಂಭಿಕ ಬ್ಯಾಟ್ಸ್ ಮನ್ ಗಳಾದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್ ಮೇಲೆ ಅತಿಯಾದ ನಂಬಿಕೆ ತಂಡಕ್ಕೆ ಮುಳುವಾಯಿತು. ಇಬ್ಬರು ಈ ಟೂರ್ನಮೆಂಟ್ ನ ಟಾಪ್ ರನ್ ಸ್ಕೋರರ್ ಆಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಇತರೆ ಬ್ಯಾಟ್ಸ್ ಮನ್ ಗಳಿಗೆ ಒಳ್ಳೆ ಅವಕಾಶವಿತ್ತು. ಮಧ್ಯಮ ಕ್ರಮಾಂಕ ಸಶಕ್ತವಾಗೇ ಇದೆ. ಅವಕಾಶ ಸಿಕ್ಕಾಗ ಮ್ಯಾಕ್ಸ್ ವೆಲ್, ಪೂರನ್, ಕರುಣ್ ಆಡಿಲ್ಲ ಅಷ್ಟೇ.

ಹೆಚ್ಚುವರಿ ಬೌಲರ್ ಕೊರತೆ ಇರೋದು ನಿಜ

ಹೆಚ್ಚುವರಿ ಬೌಲರ್ ಕೊರತೆ ಇರೋದು ನಿಜ, ಮ್ಯಾಕ್ಸ್ ವೆಲ್ ಹಾಗೂ ನೀಶಂರಿಂದ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ, ಈ ಪಂದ್ಯದಲ್ಲಿ ಇಬ್ಬರೂ ಕ್ಲಿಕ್ ಆಗಲಿಲ್ಲ. ರಾಜಸ್ಥಾನ ವಿರುದ್ಧ ಮ್ಯಾಕ್ಸ್ ವೆಲ್ ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ನಂತರ ಮ್ಯಾಕ್ಸ್ ವೆಲ್ ಹಾಗೂ ಗೌತಮ್ ದುಬಾರಿಯಾದರು. ತಪ್ಪಗಳು ಇಲ್ಲಿ ಮತ್ತೆ ರಿಪೀಟ್ ಆಗಿವೆ ಅಷ್ಟೇ.

Story first published: Friday, October 2, 2020, 18:29 [IST]
Other articles published on Oct 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+