For Quick Alerts
ALLOW NOTIFICATIONS  
For Daily Alerts
 

ಬುಷ್‌ಫೈರ್ ರಿಲೀಫ್‌ ಪಂದ್ಯಕ್ಕೆ ಯುವರಾಜ್‌ ಸಿಂಗ್, ವಾಸಿಮ್ ಅಕ್ರಮ್

Yuvraj Singh to play in Australia’s Bushfire Cricket Bash | Yuvraj Singh|Bush fire Match|Australia
Yuvraj Singh, Wasim Akram join Bushfire relief match

ನವದೆಹಲಿ, ಜನವರಿ 26: ಭಾರತ ತಂಡವನ್ನು 2011ರ ವಿಶ್ವಕಪ್‌ನಲ್ಲಿ ಗೆಲ್ಲಿಸಿಕೊಟ್ಟಿದ್ದ ಹೀರೋ ಯುವರಾಜ್‌ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಮಾರಕ ವೇಗಿ ವಾಸಿಮ್ ಅಕ್ರಮ್ ಬುಷ್‌ಫೈರ್ ರಿಲೀಫ್‌ (ಬುಷ್‌ಫೈರ್ ಕ್ರಿಕೆಟ್ ಬ್ಯಾಷ್) ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನಿಂದ ಹಾನಿಯಾಗಿದ್ದಕ್ಕೆ ಪರಿಹಾರಾರ್ಥವಾಗಿ ಈ ಪಂದ್ಯ ನಡೆಸಲು ಉದ್ದೇಶಿಸಲಾಗಿದೆ.

ಬುಷ್‌ಫೈರ್ ರಿಲೀಫ್‌ ಪಂದ್ಯದ ಮೂಲಕ ಆಸ್ಟ್ರೇಲಿಯಾದ ಲೀಗ್‌ ಟೂರ್ನಿ ಬಿಗ್‌ಬ್ಯಾಷ್‌ ಕೊನೆಗೊಳ್ಳಲಿದೆ. ಅಂದರೆ ಫೆಬ್ರವರಿ 8ರಂದು ಬಿಗ್‌ಬ್ಯಾಷ್‌ ಲೀಗ್ ಫೈನಲ್ ಮತ್ತು ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯಗಳು ನಡೆಯಲಿದೆ. ಪಂದ್ಯದಲ್ಲಿ ರಿಕಿ ಪಾಂಟಿಂಗ್ XI ಮತ್ತು ಶೇನ್ ವಾರ್ನ್ XI ತಂಡಗಳು ಕಾದಾಡಲಿವೆ.

www.cricket.com.au ಪ್ರಕಾರ ಯುವರಾಜ್‌ ಸಿಂಗ್, ವಾಸಿಮ್ ಅಕ್ರಮ್ ಜೊತೆಗೆ ಆಸ್ಟ್ರೇಲಿಯಾದ ದಂತಕತೆ ಆರಂಭಿಕ ಜೋಡಿಯಾದ ಜಸ್ಟಿನ್ ಲ್ಯಾಂಗರ್ ಮತ್ತು ಮ್ಯಾಥ್ಯೂ ಹೇಡನ್ ಕೂಡ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್‌ ಮಾಜಿ ವೇಗಿ ಕರ್ಟ್ನಿ ವಾಲ್ಷ್ ಕೂಡ ಬುಷ್‌ಫೈರ್ ಕ್ರಿಕೆಟ್‌ ಬ್ಯಾಷ್‌ ಪಂದ್ಯದ ಭಾಗವಾಗಿರಲಿದ್ದಾರೆ. ಅಂದರೆ ಸಚಿನ್ ಅವರು ಪಾಟಿಂಗ್ XIಗೆ, ವಾಲ್ಷ್ ಅವರು ವಾರ್ನ್ XIಗೆ ಕೋಚ್‌ ಆಗಿರಲಿದ್ದಾರೆ.

Story first published: Sunday, January 26, 2020, 21:37 [IST]
Other articles published on Jan 26, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+