Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಹಾಲ್ ಹೊಸ ಹೇರ್‌ಸ್ಟೈಲ್‌: ನಮ್ಮೂರಲ್ಲಿ 50 ರೂಪಾಯಿಗೆ ಇನ್ನೂ ಚೆನ್ನಾಗಿರುವ ಹೇರ್‌ಕಟ್ ಆಗ್ತಿತ್ತು ಎಂದ ಅಭಿಮಾನಿ

Yuzvendra chahal

ಐಪಿಎಲ್ 15ನೇ ಸೀಸನ್‌ನಲ್ಲಿ ಡ್ರೀಮ್ ಬೌಲಿಂಗ್ ಮಾಡಿದ ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ವಿಜೇತರಾದರು. ರಾಜಸ್ತಾನ್ ರಾಯಲ್ಸ್ ಪರ ವಿಕೆಟ್ ಬೇಟೆಯಾಡಿದ ಚಹಾಲ್ 26 ವಿಕೆಟ್‌ ಪಡೆಯುವ ಮೂಲಕ ಸೀಸನ್‌ನ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು.

ರಾಜಸ್ತಾನ್ ರಾಯಲ್ಸ್ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಗ್ಗರಿಸಿ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತು. ಈ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದ ಚಹಾಲ್ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗನನ್ನು ಹಿಂದಿಕ್ಕಿ ಪರ್ಪಲ್ ಕ್ಯಾಪ್ ಗೆದ್ದುಕೊಂಡರು.

ಐಪಿಎಲ್ ಮುಗಿದ ಬಳಿಕ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯಾಗಿ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಎದುರಿಸಲಿದೆ. 9ನೇ ಜೂನ್‌ರಿಂದ ಪ್ರಾರಂಭಗೊಳ್ಳಲಿರುವ ಈ ಸರಣಿಯಲ್ಲಿ ಯುಜಿ ಕೂಡ ಭಾಗಿಯಾಗಲಿದ್ದಾರೆ.

ಹೀಗಾಗಿ ಈ ಸರಣಿಗೂ ಮುನ್ನ ಯುಜವೇಂದ್ರ ಪೂರ್ಣವಾಗಿ ಟ್ರಿಮ್ ಆಗುತ್ತಿದ್ದು, ಹೊಸ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಖ್ಯಾತ ಹೇರ್‌ಸ್ಟೈಲಿಸ್ಟ್‌ ಅಲಿಮ್ ಹಕೀಮ್ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಶೇರ್ ಮಾಡಿದ್ದು, ಚಹಾಲ್‌ರ ಹೊಸ ಹೇರ್‌ಸ್ಟೈಲ್ ಅನ್ನು ಹರಿಬಿಟ್ಟಿದ್ದಾರೆ.

"ನಮ್ಮ @yuzi_chahal23 ಗಾಗಿ ತಾಜಾ ಬೇಸಿಗೆ ಕಟ್" ಎಂದು ಹಕೀಮ್ ಶೀರ್ಷಿಕೆ ನೀಡಿದ್ದಾರೆ. ಚಹಾಲ್ ಅವರ ವಿಭಿನ್ನ ಹೇರ್‌ಸ್ಟೈಲ್‌ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೂ ಕಾರಣವಾಗಿದೆ. ಕೆಲ ಅಭಿಮಾನಿಗಳು ಅವರನ್ನು ಶ್ಲಾಘಿಸಿದ್ರೆ, ಮತ್ತೆ ಕೆಲವು ಕಾಲೆಳೆದಿದ್ದಾರೆ.

ಆಲಿಮ್ ಭಾರತೀಯ ಕ್ರಿಕೆಟ್ ವಲಯದಲ್ಲಿ ಜನಪ್ರಿಯ ಹೇರ್ ಸ್ಟೈಲಿಸ್ಟ್ ಆಗಿದ್ದು, ಅವರು ಈ ಹಿಂದೆ ಎಂಎಸ್ ಧೋನಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮುಂತಾದ ಕ್ರಿಕೆಟಿಗರೊಂದಿಗೆ ಗುರುತಿಸಿಕೊಂಡಿದ್ದರು.

ಯುಜವೇಂದ್ರ ಚಹಾಲ್ ಅವರ ಹೊಸ ಹೇರ್‌ಸ್ಟೈಲ್‌ಗೆ ಅಭಿಮಾನಿಗಳು ಯಾವ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

yuzi
yuzi 2

Story first published: Friday, June 3, 2022, 20:38 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+