ಬುಮ್ರಾ ದಾಖಲೆ ಮುರಿಯಲು ಯುಜವೇಂದ್ರ ಚಹಾಲ್‌ಗೆ ಇನ್ನೊಂದೇ ಹೆಜ್ಜೆ

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಯುಜವೇಂದ್ರ ಚಹಾಲ್ ಒಂದು ವಿಕೆಟ್ ಪಡೆದ್ರೆ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಆಗಲಿದ್ದಾರೆ. ಈ ಮೂಲಕ ಅವರು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲೂ ಆಡಿರುವ ಚಹಾಲ್, ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದರು. 31 ವರ್ಷದ ಈ ಲೆಗ್ ಸ್ಪಿನ್ನರ್ ಇಲ್ಲಿಯವರೆಗೆ 60 ಪಂದ್ಯಗಳನ್ನಾಡಿರುವ ಚಹಾಲ್, 27.88 ಸರಾಸರಿಯೊಂದಿಗೆ 104 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಆದ್ರೀಗ ಟಿ20 ಕ್ರಿಕೆಟ್‌ನಲ್ಲೂ ಹೊಸ ಮೈಲಿಗಲ್ಲು ತಲುಪಲು ಚಹಾಲ್ ರೆಡಿಯಾಗಿದ್ದಾರೆ. ಟೀಂ ಇಂಡಿಯಾದ ನಂಬರ್ ಒನ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಖಾತೆಯಲ್ಲಿ 66 ಟಿ20 ವಿಕೆಟ್‌ಗಳಿವೆ. ಆದ್ರೆ ಇಂದು ಚಹಾಲ್ ತಂಡದಲ್ಲಿ ಸ್ಥಾನ ಪಡೆದು ಒಂದು ವಿಕೆಟ್ ಉರುಳಿಸಿಬಿಟ್ರೆ ಬುಮ್ರಾ ಅವರನ್ನೇ ಹಿಂದಿಕ್ಕಲಿದ್ದಾರೆ.
ಯುಜವೇಂದ್ರ ಚಹಾಲ್ ಇದುವರೆಗೂ 52 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 66 ವಿಕೆಟ್ ಕಬಳಿಸಿದ್ದಾರೆ. 8.28 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಚಹಾಲ್ ಒಮ್ಮೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, ಇವರ ಬೆಸ್ಟ್ ಬೌಲಿಂಗ್ ಫಿಗರ್ 25 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
ಆದ್ರೆ ಅದೇ ಜಸ್ಪ್ರೀತ್ ಬುಮ್ರಾ 55 ಟಿ20 ಪಂದ್ಯದಲ್ಲಿ 6.52 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು 66 ವಿಕೆಟ್ ಪಡೆದಿದ್ದಾರೆ. ಇವರ ಬೆಸ್ಟ್ ಬೌಲಿಂಗ್ ಫಿಗರ್ 11 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.
ಭಾರತದ ಪರ ಜಸ್ಪ್ರೀತ್ ಬುಮ್ರಾ ಇದುವರೆಗೂ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಟೇಕರ್ ಆಗಿದ್ದರು. ಆದ್ರೆ ಚಹಾಲ್‌ಗೆ ಒಂದು ವಿಕೆಟ್ ಪಡೆದ್ದಲ್ಲಿ ಬುಮ್ರಾ ದಾಖಲೆ ಸರಿಗಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications