ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಚಹಾಲ್ ಪತ್ನಿ ಧನಶ್ರೀ ಹೊಸ ವಿಡಿಯೋ

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು ಆಗಾಗ ಪೋಸ್ಟ್‌ಗಳನ್ನು ಹಾಕುತ್ತಾ ಇರುತ್ತಾರೆ. ಮೂಲತಃ ನೃತ್ಯಗಾರ್ತಿಯಾಗಿರುವ ಧನಶ್ರೀ ವರ್ಮಾ ಹೆಚ್ಚಾಗಿ ನೃತ್ಯ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು.
ಹಾಗೂ ಧನಶ್ರೀ ವರ್ಮಾ ಪತಿ ಯುಜ್ವೇಂದ್ರ ಚಹಾಲ್ ತಮ್ಮ ಕ್ರಿಕೆಟ್ ಪಂದ್ಯಗಳ ಕುರಿತು ಆಗಾಗ ಫೋಟೋಗಳನ್ನು ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ ಮತ್ತು ಸಹ ಕ್ರಿಕೆಟಿಗರ ಫೋಟೋಗಳಿಗೆ ತಮಾಷೆಯಾಗಿ ಕಾಮೆಂಟ್ಸ್ ಮಾಡುವ ಮೂಲಕ ಯುಜ್ವೇಂದ್ರ ಚಹಾಲ್ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ. ಇದೀಗ ಯುಜ್ವೇಂದ್ರ ಚಾಹಲ್ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಹೊಸ ವಿಡಿಯೋವೊಂದನ್ನು ಹಾಕಿದ್ದು ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಯುಜ್ವೇಂದ್ರ ಚಹಾಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಜೊತೆ ವ್ಯಾಯಾಮ ಮಾಡುತ್ತಿದ್ದು ದಂಪತಿಗಳು ಪ್ರತಿನಿತ್ಯ ತಾವು ಯಾವ ರೀತಿಯ ವ್ಯಾಯಾಮವನ್ನು ಮಾಡಲಿದ್ದೇವೆ ಎಂಬುದನ್ನು ಈ ವಿಡಿಯೋ ಮೂಲಕ ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ. ಈ ಪುಟ್ಟ ವಿಡಿಯೋ ತುಣುಕಿನಲ್ಲಿ ಭಿನ್ನವಿಭಿನ್ನವಾದ ವ್ಯಾಯಾಮದ ಭಂಗಿಗಳನ್ನು ತೋರಿಸಿಕೊಟ್ಟಿರುವ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಕುರಿತು ಅನುಯಾಯಿಗಳು ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಯುಜ್ವೇಂದ್ರ ಚಹಾಲ್ ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾಗವಹಿಸಲಿದ್ದು ಶ್ರೀಲಂಕಾಗೆ ಹಾರಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಯುಜ್ವೇಂದ್ರ ಚಹಾಲ್ ಗುರುವಾರ ಬಿಸಿಸಿಐ ಪ್ರಕಟಿಸಿದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications