ವೇಗಿ ಜಸ್‌ಪ್ರೀತ್ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!

ನಾಗ್ಪುರ, ನವೆಂಬರ್ 11: ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್, ವೇಗಿ ಜಸ್‌ಪ್ರೀತ್ ಬೂಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮೀರಿಸಿದ್ದಾರೆ. ಭಾರತ vs ಬಾಂಗ್ಲಾದೇಶ ನಡುವಿನ 3ನೇ ಟಿ20 ಪಂದ್ಯದಲ್ಲಿ ಚಾಹಲ್, ವಿಶೇಷ ಮೈಲಿಗಲ್ಲಿಗಾಗಿ ಗಮನ ಸೆಳೆದದಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ನೆವಂಬರ್ 10) ನಡೆದ ಅಂತಿಮ ಟಿ20 ಪಂದ್ಯದಲ್ಲಿ ಯುಜುವೇಂದ್ರ ಚಾಹಲ್, ಬಾಂಗ್ಲಾ ನಾಯಕ ಮೊಹಮದ್ದುಲ್ಲ ಅವರನ್ನು 8 ರನ್ನಿಗೆ ಪೆವಿಲಿಯನ್‌ಗಟ್ಟಿದರು.
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 50 ವಿಕೆಟ್ ಪಡೆದ ವಿಶ್ವದ ಆಟಗಾರರ ಟಾಪ್ 5 ಪಟ್ಟಿಯಲ್ಲಿ ಚಾಹಲ್ ಕೂಡ ಸೇರಿಕೊಂಡಿದ್ದಾರೆ.

ಬೂಮ್ರಾ ದಾಖಲೆ ಬದಿಗೆ
ಒಟ್ಟು 4 ಓವರ್ ಎಸೆದು 43 ರನ್ ನೀಡಿ ಚಾಹಲ್ ಕೊಂಚ ದುಬಾರಿ ಬೌಲರ್ ಎನಿಸಿದರೂ, ಬಾಂಗ್ಲಾ ನಾಯಕ ಮೊಹಮದ್ದುಲ್ಲ ವಿಕೆಟ್ ಅವರನ್ನು ದಾಖಲೆ ಸಾಲಿನಲ್ಲಿ ತಂದು ಕೂರಿಸಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗದಲ್ಲಿ 50 ವಿಕೆಟ್ ಪಡೆದಿರುವ ಚಾಹಲ್, ಬೂಮ್ರಾ ಸಾಧನೆಯನ್ನುಹಿಂದಿಕ್ಕಿದ್ದಾರೆ.

ಇತಿಹಾಸ ಬರೆದ ಚಹಾರ್
ಅಂತಾರಾಷ್ಟ್ರೀಯ ಟಿ20 50 ವಿಕೆಟ್‌ಗಳನ್ನು ಪಡೆಯಲು ಜಸ್‌ಪ್ರೀತ್ ಬೂಮ್ರಾ ಒಟ್ಟು 41 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರೆ, ಯುಜುವೇಂದ್ರ ಚಾಹಲ್ ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಂದ್ಹಾಗೆ ವೇಗಿ ದೀಪಕ್ ಚಾಹರ್ ಮಾರಕ ದಾಳಿಯಿಂದಾಗಿ (7 ರನ್‌ಗೆ 6 ವಿಕೆಟ್) ಸೋಲಲಿದ್ದ ಪಂದ್ಯವನ್ನು ಟೀಮ್ ಇಂಡಿಯಾ 30 ರನ್‌ಗಳಿಂದ ಗೆದ್ದುಕೊಂಡಿತು.

ವೇಗದ 50 ವಿಕೆಟ್ ಸಾಧನೆ
ನಾಗ್ಪುರ ಪಂದ್ಯದಲ್ಲಿ 50 ವಿಕೆಟ್ ಲಭಿಸಿದ್ದರಿಂದ, ಟಿ20ಐನಲ್ಲಿ ವೇಗವಾಗಿ 50 ವಿಕೆಟ್ ಪಡೆದ ವಿಶ್ವದ 5ನೇ ಆಟಗಾರನಾಗಿ ಯುಜುವೇಂದ್ರ ಚಾಹಲ್ ಚಾಹಲ್ ಗುರುತಿಸಿಕೊಂಡಿದ್ದಾರೆ. ಈ ದಾಖಲೆ ಸಾಲಿನಲ್ಲಿ ಶ್ರೀಲಂಕಾದ ಅಜಂತ ಮೆಂಡಿಸ್ (26 ಪಂದ್ಯಗಳು), ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ (31 ಪಂದ್ಯಗಳು), ಅಫ್ಘಾನಿಸ್ತಾನದ ರಶೀದ್ ಖಾನ್ (31 ಪಂದ್ಯಗಳು), ಬಾಂಗ್ಲಾದ ಮುಷ್ತಫಿಝುರ್ ರಹ್ಮಾನ್ (33 ಪಂದ್ಯಗಳು) ಮತ್ತು ಚಾಹಲ್ ಇದ್ದಾರೆ.

ಭಾರತದ 3 ಸಾಧಕರು
ಭಾರತ ಒಟ್ಟು ಮೂವರು ಬೌಲರ್‌ಗಳು ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗದ 5 ವಿಕೆಟ್ ದಾಖಲೆಗಾಗಿ ಗುರುತಿಸಿಕೊಂಡಿದ್ದಾರೆ. ಬೂಮ್ರಾ, ಚಾಹಲ್ ಅಲ್ಲದೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ 42 ಪಂದ್ಯಗಳಲ್ಲಿ 50 ವಿಕೆಟ್ ಸಾಧನೆ ತೋರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications