ದುಬೈನಲ್ಲಿ ಯುಜವೇಂದ್ರ ಚಹಾಲ್‌ಗೆ ಸಪ್ರೈಸ್ ನೀಡಿದ ಭಾವೀ ಪತ್ನಿ ಧನಶ್ರೀ ವರ್ಮಾ

ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ಯಜುವೇಂದ್ರ ಚಹಲ್ ಅಕ್ಟೋಬರ್ 17ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ಸಂಗಾತಿ ಧನಶ್ರೀ ವರ್ಮಾರಿಂದ ಸಪ್ರ್ರೈಸ್ ಒಂದನ್ನ ಪಡೆದಿದ್ದಾರೆ.
ತನ್ನ ಭಾವೀ ಪತಿಯನ್ನ ಭೇಟಿಯಾಗಲೆಂದೇ, ಆರ್‌ಸಿಬಿಗೆ ಚಿಯರ್ ಅಪ್ ಮಾಡಲು ಧನಶ್ರೀ ಅಕ್ಟೋಬರ್ 11ರಂದು ಯುಎಇಗೆ ಬಂದಿಳಿದಿದ್ರು. ಆದರೆ ಕ್ವಾರಂಟೈನ್ ನಿಯಮಾವಳಿಗಳಿಂದ ಅವರು ಒಂದು ವಾರಗಳ ಕಾಲ ಚಹಲ್ ರನ್ನ ಭೇಟಿಯಾಗದೇ ಇರಬೇಕಾಯ್ತು. ಆದರೆ ಕ್ವಾರಂಟೈನ್ ಮುಗೀತಾ ಇದ್ದಂತೆ ಚಹಲ್ರನ್ನ ಭೇಟಿಯಾಗೋ ಮೂಲಕ ಅವರಿಗೆ ಸಪ್ರ್ರೈಸ್ ನೀಡಿದ್ದಾರೆ.
ಈ ಕುರಿತು ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ಆರ್‌ಸಿಬಿಯ ಅಧಿಕೃತ ಟ್ವಿಟರ್ ಖಾತೆಯು ಯುಜಿ ಸಂತೋಷದ ಹಿಂದಿನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಧನಶ್ರೀ, ಚಹಾಲ್ ವಾಸವಿದ್ದ ಹೋಟೆಲ್ ರೂಮ್ ಮುಂದೆ ನಿಂತು ಚಹಲ್‌ಗಾಗಿ ಕಾಯ್ತಿರುವ ವಿಡಿಯೋವನ್ನ ಆರ್ಸಿಬಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು ಯುಜಿಯ ಹರ್ಷಕ್ಕೆ ಇದೇ ಕಾರಣ ಅಂತಾ ಬರೆದಿದೆ.
ಧನಶ್ರೀ ಪಂದ್ಯ ಮುಗಿದ ಬಳಿಕ ಚಹಲ್ರನ್ನ ಭೇಟಿಯಾಗೋದು ಅಂತಾ ನಿರ್ಧಾರವಾಗಿತ್ತಂತೆ. ಆದರೆ ಚಹಲ್ರಿಗೆ ಸಪ್ರ್ರೈಸ್ ಕೊಡಬೇಕು ಅಂತಾ ಪಂದ್ಯದ ಆರಂಭಕ್ಕೂ ಮುನ್ನವೇ ತಮ್ಮ ಭಾವೀ ಪತಿಯನ್ನು ಭೇಟಿ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications