Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಪತ್ನಿ ಅನುಷ್ಕಾಳಲ್ಲಿ ವಿನಮ್ರ ವಿನಂತಿ ಮಾಡಿದ ಯುಜುವೇಂದ್ರ ಚಾಹಲ್

Yuzvendra Chahal Has a Humble Request to Anushka Sharma

ನವದೆಹಲಿ, ಏಪ್ರಿಲ್ 21: ಮಂಗಾಟಿಕೆಗಾಗಿ ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೆಚ್ಚು ಫೇಮಸ್ಸು. ಭಾರತ ತಂಡದಲ್ಲಿ ಬೌಲಿಂಗ್ ಬಲವಾಗಿ ನಿಲ್ಲುವ ಚಾಹಲ್ ಆಗೀಗ ತರ್ಲೆ ತಮಾಷೆಗಾಗಿಯೂ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಚಾಹಲ್, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಳಲ್ಲಿ ವಿನಮ್ರ ವಿನಂತಿಯೊಂದು ಮಾಡಿ ಗಮನ ಸೆಳೆದಿದ್ದಾರೆ.

ನಿಜ ಹೇಳಬೇಕೆಂದರೆ ಚಾಹಲ್‌ನಂತ ತರಲೆಯನ್ನು ಕೆದಕಿದ್ದು ಒಂದರ್ಥದಲ್ಲಿ ಅನುಷ್ಕಾಳೆ. ಅನುಷ್ಕಾ ಶರ್ಮಾ, ತಮಾಷೆಯಾಗಿ ಒಂದು ವೀಡಿಯೋ ಮಾಡಿ ತನ್ನ ಇನ್‌ಸ್ಟಾಗ್ರಾಮ್‌ ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ, 'ಕೊಹ್ಲಿ.. ಏಯ್ ಕೊಹ್ಲಿ.. ಚೌಕ ಮಾರ್ನಾ ಚೌಕ.. (ಕೊಹ್ಲಿ.. ಸಿಕ್ಸ್ ಹೊಡೆಯೋ ಸಿಕ್ಸ್ ಹೊಡಿ..) ಎಂದು ತಮಾಷೆಯಾಗಿ ಹೇಳಿದ್ದರು.

ಅನುಷ್ಕಾ ಹಾಕಿದ್ದ ಈ ವೀಡಿಯೋಗೆ ಚಾಹಲ್ ತಮಾಷೆಯಾಗಿ ರಿಪ್ಲೆ ಮಾಡಿದ್ದಾರೆ. 'ಅತ್ತಿಗೆ, ದಯವಿಟ್ಟು ಮುಂದಿನ ಸಾರಿ ನನ್ನನ್ನು ಓಪನಿಂಗ್ ಬ್ಯಾಟಿಂಗ್‌ಗೆ ಕಳಿಸೋಕೆ ಕೊಹ್ಲಿಯಲ್ಲಿ ಹೇಳಿ. ಬಹುಶಃ ಕೊಹ್ಲಿ ನಿಮ್ಮ ಮಾತು ಹೇಳುತ್ತಾನೆ,' ಎಂದು ತಮಾಷೆಯಾಗಿ ರಿಪ್ಲೆ ಮಾಡಿ ವಿನಂತಿಸಿಕೊಂಡಿದ್ದರು.

ಕೊರೊನಾವೈರಸ್‌ನಿಂದ ಎಲ್ಲಾ ಕ್ರಿಕೆಟಿಗರು ಈಗ ಬಿಡುವಿನಲ್ಲಿದ್ದಾರೆ. ಬಿಡುವಿನಲ್ಲಿರುವ ಕೊಹ್ಲಿ ದಂಪತಿಯೂ ತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಅಷ್ಟೇ ತರ್ಲೆಯಾಗಿ ಚಾಹಲ್ ಪ್ರತಿಕ್ರಿಯಿಸಿದ್ದಾರೆ. ಸ್ಪಿನ್ನರ್ ಬೌಲರ್ ಆಗಿರುವ ಚಾಹಲ್‌ನನ್ನು ಓಪನಿಂಗ್ ಬ್ಯಾಟಿಂಗ್‌ಗೆ ಕಳಿಸಿದರೆ ಟೀಮ್ ಇಂಡಿಯಾದ ಕತೆಯೇನಾಗಬಹುದು? ಹ ಹ್ಹ..

Story first published: Tuesday, April 21, 2020, 22:07 [IST]
Other articles published on Apr 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+