ವಿರಾಟ್ ಕೊಹ್ಲಿ ಒಬ್ಬ ಸೈಲೆಂಟ್ ಕಿಲ್ಲರ್: ಸ್ಪಿನ್ ಎಸೆದ ಯುಜುವೇಂದ್ರ ಚಾಹಲ್!

ನವದೆಹಲಿ, ಸೆಪ್ಟೆಂಬರ್ 28: ಡ್ರೆಸ್ಸಿಂಗ್ ರೂಮ್‌ನಲ್ಲಿ ತಮಾಷೆ, ಕಪಿಚೇಷ್ಠೆ ಮಾಡುವುದರಲ್ಲಿ ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಎತ್ತಿದ ಕೈ. ಡ್ರೆಸ್ಸಿಂಗ್ ರೂಮ್‌ನಲ್ಲಿ ತರ್ಲೆ, ತಮಾಷೆಯಲ್ಲಿ ತೊಡಗಿಕೊಳ್ಳೋದು ಬರೀ ತಾನಷ್ಟೇ ಅಲ್ಲ, ತನ್ನೊಂದಿಗೆ ಇನ್ನೊಂದಿಷ್ಟು ಮಂದಿಯಿದ್ದಾರೆ ಎಂದು ಚಾಹಲ್ ತನ್ನ ಸಹ ಆಟಗಾರರತ್ತ ಸ್ಪಿನ್ ಎಸೆದಿದ್ದಾರೆ.
'ಈ ದಿನಗಳಲ್ಲಿ ನಾವು ಡಂಬ್ ಚರೇಡ್ಸ್ ಗೇಮ್ ಹೆಚ್ಚಾಗಿ ಆಡುತ್ತಿರುತ್ತೇವೆ. ಯಾವುದೇ ಸಂದರ್ಭದಲ್ಲಿ ಯಾರ ಹತ್ರ ಮಾತಾಡಿದರೂ ಅವರು ನಮ್ಮನ್ನು ಹೊರಗಿನವರಂತೆ ಕಾಣದೆ ನಮ್ಮೊಂದಿಗೆ ಬೆರೆಯುತ್ತಾರೆ. ಇದಕ್ಕಾಗಿ ನಾನು ನನ್ನೆಲ್ಲಾ ಸೀನಿಯರ್‌ಗೆ ಮನ್ನಣೆ ನೀಡುತ್ತೇನೆ,' ಎಂದು ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಚಾಹಲ್ ಹೇಳಿದರು.
ತನ್ನ ತಂಡದ ಸಹ ಆಟಗಾರರ ಬಗ್ಗೆ ಮಾತನಾಡಿರುವ ಚಾಹಲ್, ಕೊಹ್ಲಿ ಬಗ್ಗೆಯೂ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕುಚೇಷ್ಠೆಯ ಸ್ಟಾರ್
'ಪಬ್ಜಿ ಆಡುವಾಗ ಅಥವಾ ಮಾತನಾಡುವಾಗ ನಾವು ಮಹಿ ಭಾಯಿ ಜೊತೆ ಮಾತನಾಡುತ್ತಿದ್ದೇವೆ ಎಂದು ಅನ್ನಿಸುವುದೇ ಇಲ್ಲ. ಆದರೆ ಮಹಿ ಭಾಯಿ ನಿಜಕ್ಕೂ ಕುಚೇಷ್ಠೆಯ ಸ್ಟಾರ್. ರೋಹಿತ್ ಭಯ್ಯನೂ ಹಾಗೇನೇ,' ಎಂದು ಚಾಹಲ್ ವಿವರಿಸಿದ್ದಾರೆ.

ಕೊಹ್ಲಿ ಸೈಲೆಂಟ್ ಕಿಲ್ಲರ್
ಮಾತು ಮುಂದುವರೆಸಿದ ಚಾಹಲ್, ವಿರಾಟ್ ಭಯ್ಯ ಒಬ್ಬ ಸೈಲೆಂಟ್ ಕಿಲ್ಲರ್. ಆತ ಇತರ ಕುಚೇಷ್ಠೆಗಳಲ್ಲಿ ಮಧ್ಯ ಪ್ರವೇಶಿಸುತ್ತಾನೆ. ಇತರ ಯಾರೂ ಆತನ ಕುಚೇಷ್ಠೆಗೆ ಪ್ರತಿಕ್ರಿಯಿಸುವುದಿಲ್ಲ ಅಂತ ಅವನಿಗೆ ಗೊತ್ತಿರುವುದರಿಂದ ಅವ ತನ್ನಷ್ಟಕ್ಕೆ ತಾನು ಏನೇನೋ ತರ್ಲೆಗಳನ್ನು ಮಾಡುತ್ತಿರುತ್ತಾನೆ,' ಎಂದರು.

ಉತ್ತಮ ಆಟಗಾರರಾಗುತ್ತೇವೆ
'ಮಾಂಸಾಹಾರಿಯಿಂದ ಸಸ್ಯಹಾರಿಯಾಗಿರುವುದೇ ವಿರಾಟ್ ಕೊಹ್ಲಿ ಬದ್ಧತೆಗೆ ಅತ್ಯುತ್ತಮ ಉದಾಹರಣೆ. 7-8 ಗಂಟೆ ಕೆಲಸದ (ಆಟ, ಶೂಟಿಂಗ್) ಹೊರತಾಗಿಯೂ ಆತ ಜಿಮ್‌ನಲ್ಲಿ ಕಳೆಯುವ ಜೀವನ ಶೈಲಿ ಹೊಂದಿದ್ದಾನೆ. ಅವನ ಗುಣಗಳಲ್ಲಿ ಶೇ. 30ರಷ್ಟನ್ನು ಮೈಗೂಡಿಸಿಕೊಂಡರೂ ನಾವು ಉತ್ತಮ ಆಟಗಾರರೆನಿಸುತ್ತೇವೆ,' ಎಂದು ಚಾಹಲ್ ನುಡಿದಿದ್ದಾರೆ.

ಚಾಹಲ್ ಆಡಿಲ್ಲ
ಯುಜುವೇಂದ್ರ ಚಾಹಲ್ ಅವರು ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಳಲ್ಲಿ ತಂಡದಲ್ಲಿ ಆಡಿರಲಿಲ್ಲ. ಆದರೆ ಮಾಜಿ ನಾಯಕ ಸೌರವ್ ಗಂಗೂಲಿ ಚುಟುಕು ಮಾದರಿಗಾದರೂ ಚಾಹಲ್ ಅವನನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications