Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !

Yuzvendra Chahals Brutal Response To Mumbai Indians Jasprit Bumrah Tweet

ಟೀಮ್ ಇಂಡಿಯಾದ ಯುಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಕ್ರಿಯ ಎಂದು ಬಿಡಿಸಿಹೇಳಬೇಕಾಗಿಲ್ಲ. ಟ್ವಿಟ್ಟರ್‌ನಿಂದ ಹಿಡಿದು ಟಿಕ್‌ಟಾಕ್‌ವರೆಗೆ ಚಾಹಲ್ ಸಾಕಷ್ಟು ಬ್ಯುಸಿ. ಲಾಕ್‌ಡೌನ್‌ನ ಸಂದರ್ಭದಲ್ಲಂತೂ ಚಾಹಲ್ ಕುಟುಂಬದ ಎಲ್ಲಾ ಸದಸ್ಯರನ್ನೂ ಸೇರಿಸಿಕೊಂಡು ಟಿಕ್‌ಟಾಕ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಲಾಕ್‌ಡೌನ್ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಯುಜುವೇಂದ್ರ ಚಾಹಲ್ ಕಾಲೆಳೆಯಲು ಹೋಗಿ ಯಡವಟ್ಟು ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್‌ ಟ್ವೀಟ್‌ಗೆ ಯುಜಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಹಾಗಾದರೆ ಚಾಹಲ್‌ಗರ ಮುಂಬೈ ಇಂಡಿಯನ್ಸ್ ಕೇಳಿದ್ದೇನು? ಅದಕ್ಕೆ ಚಾಹಲ್ ಪ್ರತಿಕ್ರಿಯೆ ಹೇಳಿತ್ತು ಮುಂದೆ ಓದಿ..

ಅಭಿಮಾನಿಗಳಲ್ಲಿ ಮುಂಬೈ ಪ್ರಶ್ನೆ

ಅಭಿಮಾನಿಗಳಲ್ಲಿ ಮುಂಬೈ ಪ್ರಶ್ನೆ

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಅಭಿಮಾನಿಗಳಿಗೆ ಒಂದು ಪ್ರಶ್ನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಚಾಹಲ್ ಉತ್ತರವನ್ನು ನೀಡಿದ್ದು ನಯವಾಗಿಯೇ ತಿರುಗೇಟು ನೀಡಿದಂತಿದೆ. ಈ ಉತ್ತರಕ್ಕೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.

ಬೂಮ್ರಾ ಬೌಲಿಂಗ್‌ಗೆ ಚಾಹಲ್ ಬ್ಯಾಟಿಂಗ್

ಜಸ್ಪ್ರೀತ್ ಬೂಮ್ರಾ ಅವರ ಬೌಲಿಂಗ್‌ನಲ್ಲಿ ಚಾಹಲ್ ಬ್ಯಾಟಿಂಗ್ ಮಾಡುವುದನ್ನು ನೀವು ನೋಡಲು ಉತ್ಸುಕರಾಗಿದ್ದೀರಾ ಎಂದು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೇಳಿತ್ತು. ಅದಕ್ಕೆ ಪೂರಕವಾಗಿ ಅಭಿಮಾನಿಗಳೂ ಪ್ರತಿಕ್ರಿಯಿಸಿದ್ದರು.

ಜಾಣತನದ ಉತ್ತರ

ಜಾಣತನದ ಉತ್ತರ

ಮುಂಬೈ ಇಂಡಿಯನ್ಸ್ ಕೇಳಿದ ಈ ಪ್ರಶ್ನೆಗೆ ಯುಜುವೇಂದ್ರ ಚಾಹಲ್ ಜಾಣತನದ ಉತ್ತರವನ್ನು ನೀಡಿದ್ದಾರೆ. 'ನಾನು ಬ್ಯಾಟಂಗ್‌ಗೆ ಕಣಕ್ಕಿಳಿಯುವುದು 10-11ನೇ ಕ್ರಮಾಂಕದಲ್ಲಿ. ನನಗಿಂತಲೂ ಮೊದಲು ಫಿಂಚ್, ಎಬಿಡಿ ಸರ್ ಮತ್ತು ಕಿಂಗ್ ಕೊಹ್ಲಿ ಬ್ಯಾಟಿಂಗ್‌ಗಿಳಿಯುತ್ತಾರೆ. ಮೊದಲಿಗೆ ಅವರನ್ನು ಔಟ್‌ ಮಾಡಿ ಆಮೇಲೆ ನನ್ನ ಬ್ಯಾಟಿಂಗ್ ಬಗ್ಗೆ ಮಾತನಾಡಿ' ಎಂದು ಚಾಹಲ್ ಪ್ರತಿಕ್ರಿಯಿಸಿದ್ದಾರೆ.

ಎಲ್ಲರೂ ಲಾಕ್‌ಡೌನ್

ಎಲ್ಲರೂ ಲಾಕ್‌ಡೌನ್

ಎಲ್ಲಾ ಕ್ರಿಕೆಟಿಗರೂ ತಮ್ಮ ತಮ್ಮ ಮನೆಗಳಲ್ಲಿ ಕಾಲವನ್ನು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮನ್ನ ಬ್ಯುಸಿಯಾಗಿಟ್ಟುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂವಾದವನ್ನು ನಡೆಸುತ್ತಿದ್ದಾರೆ. ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ಚಾಹಲ್ ಈಗ ಮತ್ತಷ್ಟು ಚಟುವಟಿಕೆಯಿಂದಿದ್ದಾರೆ.

Story first published: Wednesday, April 8, 2020, 8:51 [IST]
Other articles published on Apr 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+