ಒಂದು ಗುಡ್‌ನ್ಯೂಸ್ ಒಂದು ಬ್ಯಾಡ್‌ನ್ಯೂಸ್.. ತಂದೆಗೆ ಚಾಹಲ್ ಹೇಳಿದ "ಶಾಕಿಂಗ್" ಸಂಗತಿ! ವಿಡಿಯೋ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಕುಟುಂಬಸ್ಥರ ಜೊತೆಗೆ ಕಾಲವನ್ನು ಕಳೆಯುತ್ತಿದ್ದಾರೆ. ಕೊರೊನಾ ವೈರಸ್ ಹಬ್ಬದಂತೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಬಹುತೇಕ ಸ್ಪಂದನೆ ಸಿಗುತ್ತಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ತಮ್ಮ ಮನೆಗಳಲ್ಲಿ ಕುಟುಂಬಸ್ಥರ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ. ಕೆಲ ಆಟಗಾರರು ಯಾವ ರೀತಿ ಈ ಸಂದರ್ಭವನ್ನು ಕುಟುಂಬಸ್ಥರ ಜೊತೆಗೆ ಕಳೆಯುತ್ತಿದ್ದಾರೆ ಎಂಬುದನ್ನು ವಿಡಿಯೋ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಮಧ್ಯೆ ಟೀಮ್ ಇಂಡಿಯಾದ ಪ್ರತಿಭಾನ್ವಿತ ಸ್ಪಿನ್ನರ್ ಮತ್ತು ತಲೆಹರಟೆ ವ್ಯಕ್ತಿತ್ವದ ಯುಜುವೇಂದ್ರ ಚಾಹಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚಾಹಲ್ ಫೇಮಸ್
ಯುಜುವೇಂದ್ರ ಚಾಹಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅಂಗಳದಲ್ಲಿ ಆಟದ ಕಾರಣಕ್ಕೆ ಇರುವ ಅಭಿಮಾನಿಗಳು ಒಂದೆಡೆಯಾದರೆ ಸೋಶಿಯಲ್ ಮೀಡಿಯಾದಲ್ಲಿ ಚಾಹಲ್ ಮಾಡುವ ತಲೆಹರಟೆಗೂ ಅಷ್ಟೇ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ.

ತಂದೆಯ ಜೊತೆಗೆ ಚಾಹಲ್ ಟಿಕ್‌ಟಾಕ್
ಚಾಹಲ್ ಟಿಕ್‌ಟಾಕ್‌ನಲ್ಲೂ ಸಾಕಷ್ಟು ಸಕ್ರಿಯ ಅನ್ನುವ ವಿಚಾರ ಹೊಸದೇನಲ್ಲ. ತಮ್ಮ ಅನೇಕ ಟಿಕ್‌ಟಾಕ್‌ಗಳನ್ನು ಚಾಹಲ್ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಆದರೆ ಗುರುವಾರದಂದು ಚಾಹಲ್ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಜೊತೆಗೆ ಟಿಕ್‌ಟಾಕ್ ಮಾಡಿ ಮನರಂಜಿಸಿದ್ದಾರೆ.

ತಂದೆಗೆ 'ಒಂದು ಸತ್ಯ ಒಂದು ಸುಳ್ಳಿನ' ಕಥೆ
ತಂದೆಯ ಜೊತೆಗೆ ಟಿಕ್‌ಟಾಕ್‌ನಲ್ಲಿ ಚಾಹಲ್ ತಮಾಷೆಯ ವಿಡಿಯೋವೊಂದನ್ನು ಮಾಡಿದ್ದಾರೆ. ಇದರಲ್ಲಿ ಚಾಹಲ್ ತಂದೆ ಪರೀಕ್ಷೆಯ ಫಲಿತಾಂಶ ಏನಾಯ್ತು ಎಂದು ಪ್ರಶ್ನೆಯನ್ನು ಮಾಡುತ್ತಾರೆ. ಇದಕ್ಕೆ ಚಾಹಲ್ ನಾನು ನಿಮಗೆ ಒಂದು ಒಳ್ಳೆಯ ಮತ್ತು ಒಂದು ಕೆಟ್ಟ ಸುದ್ದಿಕೊಡುತ್ತೇನೆ ಎನ್ನುತ್ತಾರೆ.

ಮೊದಲು ಒಳ್ಳೆಯ ಸುದ್ದಿಕೇಳಿದ ಚಾಹಲ್ ಅಪ್ಪ
ಫಲಿಯಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಮೊದಲು ಒಳ್ಳೆಯ ಸುದ್ದಿ ಕೊಡು ಎಂದು ಚಾಹಲ್ ತಂದೆ ಚಾಹಲ್ ಬಳಿ ಕೇಳುತ್ತಾರೆ. ಇದಕ್ಕೆ ಚಾಹಲ್ " ನಾನು ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಅಪ್ಪ" ಎಂದು ಉತ್ತರವನ್ನು ನೀಡುತ್ತಾರೆ. ಹಾಗಾದರೆ ಬ್ಯಾಡ್‌ನ್ಯೂಸ್ ಏನು ಎಂದು ಈ ಸಂದರ್ಭದಲ್ಲಿ ತಂದೆ ಕೇಳುತ್ತಾರೆ.
View this post on InstagramA post shared by Yuzvendra Chahal (@yuzi_chahal23) on
ಬ್ಯಾಡ್‌ನ್ಯೂಸ್‌ನಲ್ಲಿ ಟ್ವಿಸ್ಟ್‌ಕೊಟ್ಟ ಚಾಹಲ್
ಮೊದಲು ಗುಡ್‌ನ್ಯೂಸ್‌ಕೊಟ್ಟ ಚಾಹಲ್ ಬ್ಯಾಡ್‌ನ್ಯೂಸ್‌ನಲ್ಲಿ ದೊಡ್ಡ ಟ್ವಿಸ್ ಕೊಡುತ್ತಾರೆ. ಆ ಬ್ಯಾಡ್‌ನ್ಯೂಸ್ ಏನೆಂದರೆ ಚಾಹಲ್ ತಾನು 'ತಾನು ನೀಡಿದ ಗುಡ್ ನ್ಯೂಸ್ ಸುಳ್ಳು" ಎಂದು ಓಡಿ ಬಿಡುತ್ತಾರೆ. ಈ ರೀತಿ ತಂದೆ ಹಾಗು ಮಗ ಇನ್ಸ್ಟಾಗ್ರಾಮ್‌ನಲ್ಲಿ ತಮಾಷೆ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ.

ತಲೆಹರಟೆಗೆ ಚಾಹಲ್ ಫೇಮಸ್
ಟೀಮ್ ಇಂಡಿಯಾದ ಸ್ಪಿನ್ನರ್ ಚಾಹಲ್ ಮೈದಾನದಲ್ಲಿನ ಆಟದಷ್ಟೇ ಮೈದಾನದಾಚೆ ಮಾಡುವ ಕೀಟಲೆಗೂ ಫೇಮಸ್. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ರೀತಿಯಾಗಿ ಚಾಹಲ್ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮನ್ನು ತಾವೇ ತಮಾಷೆ ಮಾಡಿಕೊಂಡು ಅಭಿಮಾನಿಗಳಿಗೆ ಚಾಹಲ್ ಯಾವಾಗಲೂ ಮನರಂಜಿಸುತ್ತಿರುತ್ತಾರೆ.

ಚಾಹಲ್ ಶಾಟ್ ನಕಲು ಮಾಡಿದ್ರಂತೆ ಕೊಹ್ಲಿ, ರಾಹುಲ್
ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿ ಚಾಹಲ್ ಫೋಟೋವೊಂದನ್ನು ಹಾಕಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ 'ಅಪ್ಪರ್‌ಕಟ್' ಶಾಟ್ ತನ್ನ ಶಾಟ್‌ಅನ್ನು ನಕಲು ಮಾಡಿರೋದು ಎಂದು ತಮಾಷೆಯ ಫೋಟೋವೊಂದನ್ನು ಹಂಚಿಕೊಂಡು ಸುದ್ದಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications