ಡೇಂಜರ್‌ನಲ್ಲಿದೆ ವಿರಾಟ್ ಕೊಹ್ಲಿ ನಂ.3 ಕ್ರಮಾಂಕ: ಕಾರಣ ಚಾಹಲ್!

ಟೀಮ್ ಇಂಡಿಯಾದ ಪ್ರತಿಭಾನ್ವಿತ ಬೌಲರ್ ಯುಜುವೇಂದ್ರ ಚಾಹಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆಯನ್ನು ಮಾಡುತ್ತಿದ್ದಾರೆ. ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದಾರೆ. ಆದರೆ ಯುಜಿ ಇಷ್ಟಕ್ಕೇ ಅಭಿಮಾನಿಗಳನ್ನು ಪಡೆದುಕೊಂಡಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಚಾಹಲ್ ತಮ್ಮ ವಿಶಿಷ್ಟ ಹಾಸ್ಯ ಪ್ರವೃತ್ತಿಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದ ಹಿಡಿದು ರೋಹಿತ್ ಶರ್ಮಾ ಸೇರಿದಂತೆ ಬಹುತೇಕರು ಚಾಹಲ್ ಕಾಲೆಳೆಯಲು ಅವಕಾಶ ಸಿಕ್ಕರೆ ಸ್ವಲ್ಪವೂ ಬಿಡಲಾರರು.
ಚಾಹಲ್ ಕೂಡ ಅಷ್ಟೇ ನಾಯಕ ಎಂದು ನೋಡದೆ ಕಾಲೆಳೆದು ಮಜಾ ನೀಡುತ್ತಾರೆ. ಅದೇ ರೀತಿಯ ಪ್ರಸಂಗ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡದಿದೆ. ಅದಕ್ಕೆ ಕಾರಣವಾಗಿದ್ದು ಚಾಹಲ್ ಬ್ಯಾಟಿಂಗ್‌ನಲ್ಲಿ ದಶಕಕ್ಕೂ ಹಿಂದೆ ಮಾಡಿದ ಸಾಧನೆ. ಅದನ್ನು ಆರ್‌ಸಿಬಿ ಪೋಸ್ಟ್ ಮಾಡಿತ್ತು.

ಚಾಹಲ್ ಬ್ಯಾಟಿಂಗ್ ಸಾಧನೆ
2008/09ರ ಸಾಲಿನ ಕೂಚ್ ಬೆಹರ್ ಟ್ರೋಫಿ ಅಂಡರ್ 19 ಟೂರ್ನಿಯಲ್ಲಿ ಚಾಹಲ್ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿಸಿದ್ದರು. ಹಿಮಾಚಲ ಪ್ರದೇಶದ ವಿರುದ್ಧ ಬೆಂಗಳೂರಿನಲ್ಲೇ ನಡೆದ ಪಂದ್ಯದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಚಾಹಲ್ 136 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿದ್ದರು.

ಅಭಿಮಾನಿಗಳಲ್ಲಿ ಆರ್‌ಸಿಬಿ ಪ್ರಶ್ನೆ
ದಶಕಕ್ಕೂ ಹಿಂದಿನ ಈ ಬ್ಯಾಟಿಂಗ್ ಸಾಧನೆಯನ್ನು ಪೋಸ್ಟ್ ಮಾಡಿದ ಆರ್‌ಸಿಬಿ ಅಭಿಮಾನಿಗಳಲ್ಲಿ ಪ್ರಶ್ನೆಯೊಂದನ್ನು ಮುಂದಿಟ್ಟಿತ್ತು. ಅಭಿಮಾನಿಗಳೇ ಚಾಹಲ್ ಅವರನ್ನು ಬ್ಯಾಟಿಂಗ್ ಆರ್ಡರ್‌ನಲ್ಲಿ ಮೇಲಕ್ಕೇರಿಸಬೇಕೆಂದು ನೀವು ಬಯಸುತ್ತೀರಾ ಎಂದು ಆರ್‌ಸಿಬಿ ಪ್ರಶ್ನಿಸಿತ್ತು.

ಕೊಹ್ಲಿ 3ನೇ ಕ್ರಮಾಂಕ ಡೇಂಜರ್‌ನಲ್ಲಿ!
ಈ ಪೋಸ್ಟ್‌ಅನ್ನು ರಿಟ್ವೀಟ್ ಮಾಡಿದ ಯಜುವೇಂದ್ರ ಚಾಹಲ್ ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ಮುಂದಾದರು. ಈ ದಾಖಲೆಯನ್ನು ನೋಡಿದರೆ ವಿರಾಟ್ ಕೊಹ್ಲಿಗೆ ತಮ್ಮ ಮೂರನೇ ಕ್ರಮಾಂಕವನ್ನು ಕಳೆದುಕೊಳ್ಳವು ಆತಂಕ ಕಾಡುತ್ತದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡರು. ಇದು ಅಭಿಮಾನಿಗಳ ಮುಖದಲ್ಲಿ ನಗುತರಿಸಿತ್ತು.

ಅದು ಖಂಡಿತಾ ಪ್ರದರ್ಶನ ಪಂದ್ಯ
ಚಾಹಲ್ ಕಾಲೆಳೆದರೆ ವಿರಾಟ್ ಕೊಹ್ಲಿ ಬಿಡಬೇಕಲ್ವಾ. ಇದೇ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಕೂಡ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿ ಚಾಹಲ್ ಕಾಲೆಳೆದರು. ಚಾಹಲ್ ರನ್ ದಾಖಲೆಯನ್ನು ನೋಡಿದ ವಿರಾಟ್ "ಹಾಗಾದರೆ ಖಂಡಿತಾ ಅದು ಪ್ರದರ್ಶನ ಪಂದ್ಯವೇ ಆಗಿರುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಅನುಷ್ಕಾ ಬಳಿಕ ಮನವಿ ಮಾಡಿಕೊಂಡಿದ್ದ ಯುಜಿ
ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಯುಜುವೇಂದ್ರ ಚಾಹಲ್ ಈ ಹಿಂದೆಯೂ ಸಾಕಷ್ಟು ಚರ್ಚೆ ನಡೆಸಿದೆ. ಒಂದು ಬಾರಿಯಂತು ಯುಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲ್ದರ್ಜೆಗೇರಿಸುವಂತೆ ಕೋಹ್ಲಿಗೆ ತಿಳಿಸಿ ಎಂದು ಕೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications