For Quick Alerts
ALLOW NOTIFICATIONS  
For Daily Alerts
 

ಮಾಸ್ಕ್‌ನೊಂದಿಗೆ ಕಾಣಿಸಿಕೊಂಡ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಾಹಲ್

Yuzvendra Chahal wears mask on way to Dharamsala for first ODI

ಧರ್ಮಶಾಲಾ, ಮಾರ್ಚ್ 11: ಮಾರಕ ಸೋಂಕು ಕೊರೊನಾ ವೈರಸ್ ಬಗ್ಗೆ ಬರೀ ದಕ್ಷಿಣ ಆಫ್ರಿಕಾ ಆಟಗಾರರಷ್ಟೇ ಎಚ್ಚರಿಕೆ ವಹಿಸುತ್ತಿಲ್ಲ, ಭಾರತದ ಆಟಗಾರರೂ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮಾಸ್ಕ್‌ ಧರಿಸಿರುವ ಫೋಟೋ ವೈರಲ್ ಆಗಿದೆ.

ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ ಮಾರ್ಚ್ 12ರಂದು ಹಿಮಾಚಲ್ ಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಸಲುವಾಗಿ ಧರ್ಮಶಾಲಾದತ್ತ ವಿಮಾನಯಾನದಲ್ಲಿರುವಾಗ ಯುಜುವೇಂದ್ರ ಚಾಹಲ್ ಕೊರೊನಾ ವೈರಸ್ ನಿಯಂತ್ರಕ ಮಾಸ್ಕ್ ಧರಿಸಿದ್ದರು. ಈ ಫೋಟೋವನ್ನು ಚಾಹಲ್ ಅವರೇ ತನ್ನ ಟ್ವಿಟರ್ ಪೇಜ್‌ನಲ್ಲಿ ಹಾಕಿಕೊಂಡಿದ್ದರು.

ಭಾರತದಲ್ಲೂ ಸುಮಾರು 62ಕ್ಕೂ ಮಿಕ್ಕಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವುದರಿಂದ ಭಾರತ ಪ್ರವಾಸದ ವೇಳೆ ಹ್ಯಾಂಡ್‌ಶೇಕ್ ಮಾಡ ಕೂಡದು ಎಂದು ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್ ತನ್ನ ತಂಡದ ಆಟಗಾರರಿಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮೊಂದಿಗೆ ವೈದ್ಯಕೀಯ ಸಿಬ್ಬಂದಿಯೂ ಬಂದಿದ್ದಾರೆ ಎಂದು ಬೌಚರ್ ತಿಳಿಸಿದ್ದರು.

ಧರ್ಮಶಾಲಾ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ ನಡೆದರೆ, ಲಕ್ನೋ ಸ್ಟೇಡಿಯಂನಲ್ಲಿ ದ್ವಿತೀಯ ಪಂದ್ಯ, ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ 1.30 pmಗೆ ಆರಂಭಗೊಳ್ಳಲಿವೆ.

Story first published: Wednesday, March 11, 2020, 10:07 [IST]
Other articles published on Mar 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+