ಪಾಂಡ್ಯ 'ಬ್ಯಾಟಿಂಗ್' ಟ್ವೀಟ್ ಗೆ ಸರಿಯಾದ 'ಯಾರ್ಕರ್' ಹಾಕಿದ ಜಹೀರ್

ಬೆಂಗಳೂರು, ಅಕ್ಟೋಬರ್ 08: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸುವ ಭರದಲ್ಲಿ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿರುವ ವೇಗಿ ಹಾರ್ದಿಕ್ ಪಾಂಡ್ಯ ಎಡವಟ್ಟು ಮಾಡಿಕೊಂಡಿದ್ದರು. ಜಹೀರ್ ಖಾನ್ ಬ್ಯಾಟಿಂಗ್ ಬಗ್ಗೆ ಪ್ರಶ್ನಿಸಿ ಹಾರ್ದಿಕ್ ಮಾಡಿದ್ದ ಟ್ವೀಟ್ ಸಾಕಷ್ಟು ಚರ್ಚೆಗೀಡಾಗಿತ್ತು. ಇದಕ್ಕೆ ಇಂದು ಜಹೀರ್ ಖಾನ್ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ.
ಬೆನ್ನುಹುರಿ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಲಂಡನ್ನಿನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಸೋಮವಾರಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಜಹೀರ್ ಖಾನ್ 41ನೇ ಹುಟ್ಟುಹಬ್ಬಕ್ಕೆ ಭಿನ್ನವಾಗಿ ಟ್ವೀಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಅಭಿರುಚಿ ಬಗ್ಗೆ ಅಭಿಮಾನಿಗಳು ದಿನಪೂರ್ತಿ ಜಾಡಿಸಿದ್ದರು. ಈಗ ಜಹೀರ್ ಖಾನ್ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೂರ ದೂರ
'ಜಹೀರ್ ಖಾನ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದ ಹಾರ್ದಿಕ್, ನೀವು ಕೂಡ ಚೆಂಡನ್ನು ಪಾರ್ಕ್ ನಿಂದ ಆಚೆಗಟ್ಟಿ, ಭರ್ಜರಿ ಸಿಕ್ಸರ್ ಸಿಡಿಸಿ ಎಂದು ಪಾಂಡ್ಯ ಟ್ವೀಟ್ ಮಾಡಿದ್ದರು.
ಹಾರ್ದಿಕ್ ಟ್ವೀಟ್ ನಿಂದ ಹಿರಿಯ ಆಟಗಾರನಿಗೆ ಅಗೌರವ ತೋರಿಸಿದ್ದಾರೆ. ಬೆನ್ನು ಶಸ್ತ್ರಚಿಕಿತ್ಸೆ ಜೊತೆಗೆ ತಲೆಗೂ ಸರ್ಜರಿ ಮಾಡಿಸಿಕೊಳ್ಳಲಿ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ.

ಜಹೀರ್ ಪರ ಫ್ಯಾನ್ಸ್ ಟ್ವೀಟ್
ಹಾರ್ದಿಕ್ ಟ್ವೀಟ್ ನಿಂದ ಮಾಜಿ ವೇಗಿ ಜಹೀರ್ ಖಾನ್ ಗೆ ಅಗೌರವ ತೋರಿಸಿದಂತಾಗಿದೆ. ಬೆನ್ನು ಶಸ್ತ್ರಚಿಕಿತ್ಸೆ ಜೊತೆಗೆ ತಲೆಗೂ ಸರ್ಜರಿ ಮಾಡಿಸಿಕೊಳ್ಳಲಿ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ.
ಜಹೀರ್ ಖಾನ್ ಸಕತ್ ಪ್ರತಿಕ್ರಿಯೆ
ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು, ನನ್ನ ಬ್ಯಾಟಿಂಗ್ ಕೌಶಲ್ಯ ಎಂದಿಗೂ ನಿಮ್ಮಷ್ಟು ಉತ್ತಮವಾಗಲಾರದು. ಆದರೆ ಹುಟ್ಟುಹಬ್ಬದ ಸಂಭ್ರಮವಂತೂ ಮುಂದಿನ ಎಸೆತದಂತೆ ಇತ್ತು ಎಂದು ಹಾರ್ದಿಕ್ ಹಾಕಿದ್ದ ವಿಡಿಯೋ ಬಗ್ಗೆ ಸೂಚಿಸಿ ಜಹೀರ್ ಖಾನ್ ಟಾಂಗ್ ನೀಡಿದ್ದಾರೆ.
ಜಹೀರ್ ಬ್ಯಾಟಿಂಗ್ ಹೊಗಳಿ ಟ್ವೀಟ್ಸ್
ಮೊದಲು ಈ ವಿಡಿಯೋ ನೋಡಿ ಆಮೇಲೆ ಜಹೀರ್ ಬ್ಯಾಟಿಂಗ್ ಬಗ್ಗೆ ಕಾಮೆಂಟ್, ಟ್ವೀಟ್ ಮಾಡಿ ಎಂದು ಜಹೀರ್ ಬ್ಯಾಟಿಂಗ್ ಬಗ್ಗೆ ಹೊಗಳಿ ಮಾಡಿದ ಟ್ವೀಟ್.
ಜಹೀರ್ ಸಿಕ್ಸರ್ ಬಗ್ಗೆ ನೆನಪು ಮಾಡಿದ ಟ್ವೀಟ್
ಜಹೀರ್ ಅನೇಕ ಬೌಲರ್ ಗಳಿಗೆ ಸಿಕ್ಸ್ ಬಾರಿಸಿದ್ದಾರೆ. ಬ್ರೆಟ್ ಲೀ, ಶೋಯೆಬ್ ಅಖ್ತರ್ ರಂಥವರ ಎಸೆತಗಳನ್ನು ಮೈದಾನದ ಆಚೆ ಕಳಿಸಿದ್ದಾರೆ. ಅವರ ಬೌಲಿಂಗ್ ಎದುರಿಸಿದ್ರೆ ಅವರ ಯಾರ್ಕರ್ ಗೆ ನಿಮ್ಮ ಕಾಲ್ಬೆರಳು ಢಮಾರ್ ಆಗುತ್ತಿತ್ತು ಎಂದ ಮತ್ತೊಬ್ಬ ಅಭಿಮಾನಿ.
ಮೆದುಳಿನ ಸರ್ಜರಿ ಮಾಡಿಸಿಕೊಳ್ಳಿ
ಕೆಎಲ್ ರಾಹುಲ್ ನಿಮ್ಮ(ಹಾರ್ದಿಕ್) ಬಗ್ಗೆ ಸರಿಯಾಗಿ ಹೇಳಿದ್ದಾರೆ. ಬೆನ್ನಿನ ಶಸ್ತ್ರಚಿಕಿತ್ಸೆ ಜೊತೆಗೆ ಮೆದುಳಿನ ಸರ್ಜರಿಯೂ ನಿಮಗೆ ಅಗತ್ಯವಿದೆ ಎಂದು ಕಿಚಾಯಿಸಿದ ಟ್ವೀಟ್.
ವಿಶ್ವಕಪ್ ಪಂದ್ಯಗಳಲ್ಲಿ ಜಹೀರ್ ಪ್ರದರ್ಶನ
ವಿಶ್ವಕಪ್ ಪಂದ್ಯಗಳಲ್ಲಿ ಜಹೀರ್ ಪ್ರದರ್ಶನವನ್ನು ಒಮ್ಮೆ ನೋಡಿ, ಏಕದಿನ, ಟೆಸ್ಟ್ ಸೇರಿ 600 ಪ್ಲಸ್ ವಿಕೆಟ್ ಪಡೆದಿರುವ ದಿಗ್ಗಜ ಬೌಲರ್ ಎಂದು ಹಾರ್ದಿಕ್ ಗೆ ಜಹೀರ್ ಪರಿಚಯ ಮಾಡಿಕೊಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications