For Quick Alerts
ALLOW NOTIFICATIONS  
For Daily Alerts
 

ಸಿರಾಜ್ ಅತ್ಯಂತ ಅಪಾಯಕಾರಿ ಆಟಗಾರ ಎಂದ ಜಹೀರ್ ಖಾನ್

ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡು ಮಿಂಚಿದ್ದಾರೆ. ಈ ಪಂದ್ಯದಲ್ಲಿ ಸಿರಾಜ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅದ್ಭುತ ಮಾತುಗಳನ್ನಾಡಿದ್ದಾರೆ. ಚೆಂಡು ಬಲಗೈ ದಾಂಡಿಗರಿಂದ ಆಚೆಗೆ ಹೋಗುತ್ತಿದ್ದಾರೆ ಸಿರಾಜ್ ಅತ್ಯಂತ ಅಪಾಯಕಾರಿಯಾಗಿ ಗೋಚರಿಸುತ್ತಾರೆ ಎಂದಿದ್ದಾರೆ ಜಹೀರ್ ಖಾನ್.

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಟ್ರೆನಿಡಾಡ್‌ನ ಫೋರ್ಟ್‌ಆಫ್ ಸ್ಪೇನ್‌ನಲ್ಲಿ ನಡೆಯುತ್ತಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಟೀಮ್ ಇಂಡಿಯಾಗೆ ಕೊನೆಯ ದಿನ ಮಳೆರಾಯ ಕಾಟಕೊಟ್ಟಿದ್ದು ಮೊದಲ ಸೆಶನ್ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ.

Zaheer Khan praises Siraj said he became dangerous when ball started going away from right-hander

ಇನ್ನು ನಾಲ್ಕನೇ ದಿನದಾಟದ ಬಳಿಕ ಮಾತನಾಡಿರುವ ಮೊಹಮ್ಮದ್ ಸಿರಾಜ್ ಅನುಭವಿ ಆಟಗಾರ ಆರ್ ಅಶ್ವಿನ್ ಅಂತಿಮ ದಿನದಾಟದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಮೂಲಕ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ ಎಂಬ ಹೇಳಿಕೆ ನೀಡಿದ್ದರು. ವೆಸ್ಟ್ ಇಂಡೀಸ್ ತಂಡಕೆ ಭಾರತ ಕೊನೆಯ ಇನ್ನಿಂಗ್ಸ್‌ನಲ್ಲಿ 365 ರನ್‌ಗಳ ಗುರಿಯನ್ನು ನಿಗದಿಪಡಿಸಿದ್ದು ವಿಂಡೀಸ್ ಪಡೆ ಈಗಾಗಲೇ 76 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ

ಭಾರತದ ವಿರುದ್ಧ ಸೋಮವಾರ ಗೆಲುವು ಸಾಧಿಸಬೇಕಾದರೆ 289 ರನ್‌ಗಳನ್ನು ಕೊನೆಯ ದಿನದಾಟದಲ್ಲಿ ಗಳಿಸುವ ಸವಾಲು ಹೊಂದಿದೆ. ಸದ್ಯ ಪಿಚ್ ಸ್ಪಿನ್ನರ್‌ಗಳಿಗೆ ಉತ್ತಮವಾಗಿ ನೆರವು ನೀಡುತ್ತಿರುವ ಕಾರಣ ವಿಂಡೀಸ್ ದಾಂಡಿಗರು ಕೊನೆಯ ದಿನ ಭಾರೀ ಸವಾಲನ್ನು ಎದುರಿಸುವುದು ನಿಶ್ಚಿತ. ಇದೇ ಕಾರಣಕ್ಕೆ ಸಿರಾಜ್ ಅನುಭವಿ ಆಟಗಾರ ಆರ್ ಅಶ್ವಿನ್ ವಿಂಡೀಸ್ ತಂಡಕ್ಕೆ ಕಂಟಕವಾಗುವ ಸೂಚನೆ ನೀಡಿದ್ದಾರೆ.

"ಪಿಚ್ ಈಗ ವರ್ತಿಸುತ್ತಿರುವ ರೀತಿ ನೋಡಿದರೆ ಚೆಂಡು ತಿರುವು ಪಡೆದುಕೊಳ್ಳುತ್ತಿರುವ ಕಾರಣ ಅಶ್ವಿನ್ ಅವರು ವೆಸ್ಟ ಇಂಡೀಸ್ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸವಿದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್. ವಿಂಡೀಸ್ ತಂಡದ ನಾಯಕ ಕ್ರೆಗ್ ಬ್ರಾಥ್‌ವೇಟ್ ಹಾಗೂ ಕಿರ್ಕ್ ಮಕೆಂಜಿ ಈಗಾಗಲೇ ವಿಕೆಟ್ ಕಳೆದುಕೊಂಡಿದ್ದಾರೆ.

Story first published: Monday, July 24, 2023, 23:57 [IST]
Other articles published on Jul 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+