ರಿಷಭ್ ಪಂತ್ ಮಾಡಿದ ಆ ತಪ್ಪಿನಿಂದ ಟೀಂ ಇಂಡಿಯಾ ಟಿ20 ಪಂದ್ಯ ಸೋತಿದೆ: ಜಹೀರ್ ಖಾನ್

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ್ದು, ಬೃಹತ್ ಮೊತ್ತ ಕಲೆಹಾಕಿದ್ರೂ ಸಹ ಡಿಫೆಂಡ್ ಮಾಡಿಕೊಳ್ಳಲಾಗದೆ ಸೋಲನ್ನ ಒಪ್ಪಿಕೊಂಡಿತು.
ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ರಿಷಭ್ ಪಂತ್ ಕೆಲವು ತಪ್ಪು ಲೆಕ್ಕಾಚಾರಗಳು ಟೀಂ ಇಂಡಿಯಾ ಹೆಚ್ಚಿನ ಬೆಲೆ ತೆರಬೇಕಾಗಿದೆ ಎಂದು ಭಾರತದ ಮಾಜಿ ವೇಗಿ ಜಹೀರ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ರಿಷಭ್ ಪಂತ್ 212ರನ್‌ಗಳ ಡಿಫೆಂಡ್ ಮಾಡಿಕೊಳ್ಳಲು ಎಡವಲು ಕಾರಣ ಬೌಲರ್‌ಗಳನ್ನ ಸರಿಯಾಗಿ ಬಳಸಿಕೊಳ್ಳದೇ ಇರುವುದು ಎಂದು ಜಹೀರ್ ಖಾನ್ ಹೇಳಿದ್ದಾರೆ.

ಯುಜವೇಂದ್ರ ಚಹಾಲ್‌ಗೆ ಪೂರ್ಣ ಖೋಟಾ ಬೌಲಿಂಗ್ ಕೊಡಬೇಕಿತ್ತು
ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಪೂರ್ಣ ಪ್ರಮಾಣದ ಬೌಲಿಂಗ್ ಖೋಟಾ ಕೊಡಬೇಕಿತ್ತು, ಏಕೆ ಕೊಡಲಿಲ್ಲ ಎಂದು ರಿಷಭ್ ಪಂತ್‌ರನ್ನು ಜಹೀರ್ ಖಾನ್ ಪ್ರಶ್ನಿಸಿದ್ದಾರೆ. ಪಂದ್ಯ ದ್ವಿತಿಯಾರ್ಧದಲ್ಲಿ ಬೌಲರ್‌ಗಳು ದುಬಾರಿಯಾದ ಸಂದರ್ಭದಲ್ಲಿ ಚಹಾಲ್‌ಗೆ ಪೂರ್ಣ ಒವರ್‌ಗಳ ಖೋಟಾ ಬೌಲಿಂಗ್ ನೀಡಬೇಕಿತ್ತು ಎಂದು ಜಹೀರ್ ಟೀಕಿಸಿದ್ದಾರೆ.

ಡೇವಿಡ್ ಮಿಲ್ಲರ್ ಅಬ್ಬರಕ್ಕೆ ಬ್ರೇಕ್ ಹಾಕುವ ಸಾಮರ್ಥ್ಯ ಚಹಾಲ್‌ಗಿತ್ತು
ಟೀಂ ಇಂಡಿಯಾದಿಂದ ಗೆಲುವನ್ನ ಕಸಿದುಕೊಂಡ ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅಬ್ಬರಿಸುವ ವೇಳೆಯಲ್ಲಿ ಯುಜವೇಂದ್ರ ಚಹಾಲ್‌ಗೆ ಬೌಲಿಂಗ್ ನೀಡಬಹುದಿತ್ತು ಎಂದು ಟೀಂ ಇಂಡಿಯಾ ಮಾಜಿ ವೇಗಿ ಹೇಳಿದ್ದಾರೆ. ಚಹಾಲ್ ಆರಂಭಿಕ ಓವರ್‌ನಲ್ಲಿ ದುಬಾರಿಯಾಗಿದ್ರೂ ಸಹ, ಕಂಬ್ಯಾಕ್ ಮಾಡುವ ಸಾಮರ್ಥ್ಯವನ್ನ ಹೊಂದಿದ್ದರು.
"ರಿಷಬ್ ಪಂತ್ ಮತ್ತು ಕೋಚಿಂಗ್ ಸಿಬ್ಬಂದಿ ಯುಜವೇಂದ್ರದ್ರ ಚಹಾಲ್ ತನ್ನ ನಾಲ್ಕು ಓವರ್ ಕೋಟಾವನ್ನು ಏಕೆ ಪೂರ್ಣಗೊಳಿಸಲಿಲ್ಲ ಎಂಬುದನ್ನು ಚರ್ಚಿಸಬೇಕಾಗಿದೆ. ಆತ ಆರಂಭದಲ್ಲಿ ದುಬಾರಿಯಾಗಿದ್ದಾನೆ, ಚಹಾಲ್ ಕೆಟ್ಟ ಓವರ್ ಕಂಡಿದ್ರೂ ಸಹ, ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಆಟವನ್ನು ಬದಲಾಯಿಸುವ ಪ್ರದರ್ಶನವನ್ನು ಹೊಂದಿದ್ದಾರೆ'' ಎಂದು ಜಹೀರ್ ಖಾನ್ ಹೇಳಿದರು.

2.1 ಓವರ್ ಬೌಲಿಂಗ್ ಮಾಡಿದ ಚಹಾಲ್
ಸ್ಟಾರ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಅವರನ್ನು ಸರಿಯಾಗಿ ಬಳಸಿಕೊಳ್ಳದ ರಿಷಬ್ ಪಂತ್ ನಿರ್ಧಾರವನ್ನು ಜಹೀರ್ ಖಾನ್ ಟೀಕಿಸಿದ್ದಾರೆ. ಐಪಿಎಲ್‌ನಲ್ಲಿ 27 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದ ನಂತರ, ಚಹಾಲ್ ಅವರ ನಾಲ್ಕು ಓವರ್‌ಗಳ ಕೋಟಾವನ್ನು ರಿಷಭ್ ಪೂರ್ಣಗೊಳಿಸಲಿಲ್ಲ. ಅವರು 2.1 ಓವರ್ ಬೌಲ್ ಮಾಡಿದ್ದು, ವಿಕೆಟ್ ಪಡೆಯದ ಚಹಾಲ್ 26 ರನ್ ಬಿಟ್ಟುಕೊಟ್ಟರು.
ಮೂರನೇ ಓವರ್‌ನಲ್ಲಿ ರಿಷಭ್, ಚಹಲ್ ಅವರನ್ನು ಕಣಕ್ಕಿಳಿಸಿದರು. ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 16 ರನ್ ಬಿಟ್ಟುಕೊಟ್ಟರು. ಆದರೆ ಚಹಲ್ ತನ್ನ ಎರಡನೇ ಓವರ್‌ನಲ್ಲಿ ಕೇವಲ ಆರು ರನ್‌ಗಳನ್ನು ಬಿಟ್ಟುಕೊಟ್ಟರು. ಆದ್ರೆ ನಂತರ ಇವರಿಗೆ ಬೌಲಿಂಗ್ ಕೊಟ್ಟಿದ್ದು 20ನೇ ಓವರ್‌ನಲ್ಲಿ. ಅದಾಗಲೇ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 4 ರನ್ ಬಾಕಿ ಉಳಿದಿದ್ದ ಸಂದರ್ಭದಲ್ಲಿ 20ನೇ ಓವರ್‌ನಲ್ಲಿ ಚಹಲ್ ಬೌಲ್ ಮಾಡಿದರು. ರಾಸ್ಸಿ ವಾಂಡರ್ ಡ್ಯೂಸೆನ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

ಐದು ಪಂದ್ಯಗಳ ಸರಣಿ ಅದ್ಭುತ ಆರಂಭ ಪಡೆದಿದೆ
ಐದು ಪಂದ್ಯಗಳ ಸರಣಿಯು ನಂಬಲಾಗದ ಆರಂಭವನ್ನು ಪಡೆಯಿತು. ಸರಣಿಯು ನಿಜವಾಗಿಯೂ ಜೀವಂತವಾಗಿದೆ. ಈ ಭಾರತ ತಂಡವು ಶೀಘ್ರವಾಗಿ ಸವಾಲಿನ ತಂಡವಾಗಿ ಮಾರ್ಪಟ್ಟಿದೆ. ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವು ಎದುರಿಸಬಲ್ಲದು. ಮೊದಲ ಟಿ20 ಸರಣಿಯಲ್ಲಿ ಉಳಿದ ಪಂದ್ಯಗಳಿಗೆ ಉತ್ತಮ ಉತ್ತೇಜನ ನೀಡಲಾಗಿದೆ. ಭಾರತ ತಂಡವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ನಾವು ಕಾಯುತ್ತಿದ್ದೇವೆ ಎಂದು ಜಹೀರ್ ಖಾನ್ ಹೇಳಿದರು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ಸ್ಕೋರ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ
ಐಪಿಎಲ್ 2022ರ ಅಮೋಘ ಫಾರ್ಮ್ ಅನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ರಾಷ್ಟ್ರೀಯ ತಂಡದ ಪರ ಮುಂದುವರಿಸಿರುವ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್, ಟೀಂ ಇಂಡಿಯಾ ಬೌಲರ್‌ಗಳನ್ನ ಚಿಂದಿ ಉಡಾಯಿಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ ಅಜೇಯ 64 ರನ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಭಾರತ ನೀಡಿದ 212ರನ್‌ಗಳ ಗುರಿ ಬೆನ್ನತ್ತಿದ ಹರಿಣಗಳು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಭಾರೀ ಗೆಲುವನ್ನ ದಾಖಲಿಸಿತು. ಇದು ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತವನ್ನ ಚೇಸ್ ಮಾಡಿ ಗೆದ್ದ ಪಂದ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications